
ಭಾರತದಲ್ಲಿ ಸರಕು ಸಾಗಣೆ ಹಾಗೂ ಸಾರಿಗೆ ಮೂಲಸೌಕರ್ಯ ವೆಚ್ಚವನ್ನು ತಗ್ಗಿಸಿ, ಬಹು-ಮಾದರಿ ಸಾರಿಗೆ ಸಂಪರ್ಕವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ‘ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾಧಿಕಾರ’ (ಐಟಿಎಲ್‌ಎ) ಎಂಬ ವಿಶೇಷ ಉದ್ದೇಶದ ಸಂಸ್ಥೆಯನ್ನು (ಎಸ್‌ಪಿವಿ) ಸ್ಥಾಪಿಸಲು ಮಹತ್ವದ ಅನುಮೋದನೆ ನೀಡಿದೆ.
ದೇಶದ ಆರ್ಥಿಕ ಪ್ರಗತಿಗೆ ಬೆನ್ನೆಲುಬಾಗಿರುವ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯದಲ್ಲಿ ದೀರ್ಘಕಾಲದಿಂದ ಎದುರಾಗುತ್ತಿರುವ ಯೋಜನೆಗಳ ಅನುಷ್ಠಾನ ವಿಳಂಬ ಹಾಗೂ ಸಚಿವಾಲಯಗಳ ನಡುವಿನ ಸಮನ್ವಯದ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಐಟಿಎಲ್‌ಎ ರಾಷ್ಟ್ರೀಯ ಮಟ್ಟದ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದು, ರಸ್ತೆ, ರೈಲು, ಜಲಮಾರ್ಗ, ಬಂದರು ಮತ್ತು ನಾಗರಿಕ ವಿಮಾನಯಾನಗಳನ್ನು ಒಳಗೊಂಡಂತೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ‘ದೀರ್ಘಕಾಲೀನ ರಾಷ್ಟ್ರೀಯ ಸಾರಿಗೆ ಕ್ರಿಯಾ ಯೋಜನೆ’ಯನ್ನು ರೂಪಿಸಲಿದೆ.
ಜೊತೆಗೆ, ಕೇಂದ್ರ ಸರ್ಕಾರದ 500 ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳ ತಾಂತ್ರಿಕ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಅನುಷ್ಠಾನದ ನಂತರದ ಪರಿಣಾಮಗಳ ವಿಶ್ಲೇಷಣೆಯನ್ನು ಈ ಸಂಸ್ಥೆ ನಿರ್ವಹಿಸಲಿದೆ. ಜಿಎಸ್‌ಟಿ ಇ-ವೇ ಬಿಲ್, ಫಾಸ್ಟ್‌ಟ್ಯಾಗ್, ವಾಹನ್ ಮತ್ತು ಜಿಪಿಎಸ್ ಆಧಾರಿತ ದತ್ತಾಂಶಗಳನ್ನು ಒಗ್ಗೂಡಿಸಿ ‘ರಾಷ್ಟ್ರೀಯ ಸಾರಿಗೆ ದತ್ತಾಂಶ ಭಂಡಾರ’ವನ್ನು ನಿರ್ಮಿಸುವ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ದಕ್ಷತೆಯನ್ನು ತರಲು ಇದು ನೆರವಾಗಲಿದ್ದು, ವಿಕಸಿತ ಭಾರತ–2047ರ ಗುರಿ ಸಾಧನೆಗೆ ದೊಡ್ಡ
ಕೊಡುಗೆ ನೀಡಲಿದೆ.
-
ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ‘ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾಧಿಕಾರ’ (ಐಟಿಎಲ್‌ಎ) ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
-
ವಿವಿಧ ಇಲಾಖೆಗಳು ಹಾಗೂ ಸಚಿವಾಲಯಗಳ ನಡುವೆ ಯೋಜನೆಗಳ ಸಮನ್ವಯದ ಕೊರತೆ ನೀಗಿಸಲು ಕ್ರಮ
-
ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ದೀರ್ಘಕಾಲೀನ ರಾಷ್ಟ್ರೀಯ ಸಾರಿಗೆ ಕ್ರಿಯಾ ಯೋಜನೆ ರೂಪಿಸುವುದು

-
ರಸ್ತೆ, ರೈಲ್ವೆ, ಬಂದರು, ನಾಗರಿಕ ವಿಮಾನಯಾನ ಮತ್ತು ಜಲಮಾರ್ಗಗಳ ಬಹು-ಮಾದರಿ ಏಕೀಕರಣ
-
500 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ ಯೋಜನೆಗಳ ತಾಂತ್ರಿಕ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆ
-
ಜಿಎಸ್‌ಟಿಎನ್, ಇ-ವೇ ಬಿಲ್, ಫಾಸ್ಟ್‌ಟ್ಯಾಗ್ ಹಾಗೂ ವಾಹನ್ ದತ್ತಾಂಶಗಳನ್ನು ಆಧರಿಸಿ ‘ರಾಷ್ಟ್ರೀಯ ಸಾರಿಗೆ ದತ್ತಾಂಶ ಭಂಡಾರ’ ನಿರ್ಮಾಣ
-
ಸಾರಿಗೆ ಮತ್ತು ಸರಕು ಸಾಗಣೆ ವೆಚ್ಚವನ್ನು ತಗ್ಗಿಸಿ ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ
-
ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (2022) ಪರಿಶೀಲನೆ, ನವೀಕರಣ ಹಾಗೂ ನೀತಿ ಬೆಂಬಲ ಒದಗಿಸುವುದು
-
ಸಾರಿಗೆ ವಲಯದಲ್ಲಿ ಹೊಸ ತಂತ್ರಜ್ಞಾನ, ಸಂಶೋಧನೆ, ನಾವೀನ್ಯತೆ ಹಾಗೂ ಉದ್ಯೋಗಿಗಳಲ್ಲಿ ಕೌಶಲ್ಯ ವೃದ್ಧಿ
-
ವಿಕಸಿತ ಭಾರತ–2047ರ ಗುರಿ ಸಾಧನೆಗೆ ಪೂರಕವಾಗಿ ಸಾರಿಗೆ ವ್ಯವಸ್ಥೆಯ ದಕ್ಷತೆ ಮತ್ತು ಸುಸ್ಥಿರತೆ ಹೆಚ್ಚಿಸುವುದು


More Stories
ದೇಶದ ಸಂಚಾರ ವ್ಯವಸ್ಥೆಯಲ್ಲಿ ಮಹತ್ವದ ಕ್ರಾಂತಿ: ಗಂಟೆಗಟ್ಟಲೆ ಪ್ರಯಾಣದ ಅವಧಿ ನಿಮಿಷಗಳಿಗೆ ಕಡಿತ
ರೈತ ಪ್ರಾಣ ಕಾಪಾಡಿದರೆ, ನೇಕಾರ ಮಾನ ಕಾಪಾಡುತ್ತಾನೆ.
ಮುಂಬೈನಲ್ಲಿ ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ರೆಪೋ ದರ ಹೆಚ್ಚಳದ ನಿರೀಕ್ಷೆ