November 6, 2026

Hampi times

Kannada News Portal from Vijayanagara

ಪ್ರತಿಷ್ಠಿತ ಪಿಯು ಕಾಲೇಜು ಪ್ರವೇಶಕ್ಕೆ ಹೆದ್ದಾರಿ… ವಿಷನ್ 625: ಸ್ಟಡಿ ಎಕ್ಸ್‌ಪ್ರೆಸ್‌’ ಮಾರ್ಗದರ್ಶಿ

ನಿಮ್ಮ ಮಗುವಿನ ಉಜ್ವಲ ನಾಳೆಗೆ ಇಂದೇ ಸರಿಯಾದ ದಾರಿ ಆಯ್ಕೆಮಾಡಿ!

  • ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಮಾಧ್ಯಮಗಳ ವಿದ್ಯಾರ್ಥಿಗಳಿಗೆ ಸಮಗ್ರ ನೋಟ್ಸ್‌

  • ಎಸ್‌ಎಸ್‌ಎಲ್‌ಸಿಯ ಸಾಧನೆಗೆ ದೈನಿಕ ದಿಕ್ಸೂಚಿ

  • ದುಬಾರಿ ಟ್ಯೂಷನ್‌ಗಳ ಅನಿವಾರ್ಯತೆ ತಪ್ಪಿಸುವ ದೈನಿಕ ಮಾರ್ಗದರ್ಶಿ

ಹೊಸಪೇಟೆ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗರಿಷ್ಠ 625 ಅಂಕಗಳನ್ನು ಗಳಿಸಿ ಸಾಧನೆ ಮೆರೆಯುವಂತೆ ಮಾಡುವ ಉದ್ದೇಶದಿಂದ ‘ಹಂಪಿ ಟೈಮ್ಸ್‌’ ದಿನಪತ್ರಿಕೆಯು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ‘ವಿಷನ್ 625: ಸ್ಟಡಿ ಎಕ್ಸ್‌ಪ್ರೆಸ್‌’ ಎಂಬ ವಿಶೇಷ ದೈನಂದಿನ ಪರೀಕ್ಷಾ ಮಾರ್ಗದರ್ಶಿ ಸರಣಿಯನ್ನು ಆರಂಭಿಸಿದೆ.

ಕಳೆದ ಎರಡು ವರ್ಷಗಳಿಂದ ಪ್ರಕಟವಾಗುತ್ತಿರುವ ಕನ್ನಡ ಮಾಧ್ಯಮದ ಪರೀಕ್ಷಾ ಮಾರ್ಗದರ್ಶಿಯನ್ನು ಸಮರ್ಪಕವಾಗಿ ಬಳಸಿಕೊಂಡ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, ಜಿಲ್ಲೆಯ ಶೈಕ್ಷಣಿಕ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಹೆಚ್ಚಿಸಿದ್ದಾರೆ. ರಾಜ್ಯ ಮಟ್ಟದಲ್ಲಿ ಹಿಂದೆ 27ನೇ ಸ್ಥಾನದಲ್ಲಿದ್ದ ವಿಜಯನಗರ ಜಿಲ್ಲೆಯ ಫಲಿತಾಂಶ, ನಿರಂತರ ಶೈಕ್ಷಣಿಕ ಅಭಿಯಾನ ಹಾಗೂ ವಿಶೇಷ ಮಾರ್ಗದರ್ಶಿಗಳ ನೆರವಿನಿಂದ ನಂತರ 19ನೇ ಸ್ಥಾನಕ್ಕೇರಿತ್ತು. ಅಲ್ಲದೆ, 2025-26ನೇ ಸಾಲಿನಲ್ಲಿ ನೇರವಾಗಿ ರಾಜ್ಯ ಮಟ್ಟದ 10ನೇ ಸ್ಥಾನಕ್ಕೆ ಜಿಗಿಯುವ ಮೂಲಕ ವಿಜಯನಗರ ಜಿಲ್ಲೆ ರಾಜ್ಯದಲ್ಲೇ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ.

ಈ ಐತಿಹಾಸಿಕ ಸಾಧನೆಯ ಯಶಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಲುವಾಗಿ ಹಾಗೂ ಆಂಗ್ಲ ಮಾಧ್ಯಮದ ಪಾಲಕರು ಮತ್ತು ಮಕ್ಕಳ ನಿರಂತರ ಬೇಡಿಕೆಗೆ ಸ್ಪಂದಿಸಿ, ಈಗ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೂ ವಿಷಯವಾರು ಸಮಗ್ರ ಅಧ್ಯಯನ ಸಾಮಗ್ರಿಗಳನ್ನು ದೈನಂದಿನ ಪತ್ರಿಕೆಯ ಮೂಲಕ ತಲುಪಿಸಲಾಗುತ್ತಿದೆ. ಅನುಭವಿ ಶಿಕ್ಷಣ ತಜ್ಞರಿಂದ ಸಿದ್ಧಪಡಿಸಲಾದ ಮಾದರಿ ಪ್ರಶ್ನೋತ್ತರಗಳು ವಿದ್ಯಾರ್ಥಿಗಳ ಪರೀಕ್ಷಾ ಭಯ ಹೋಗಲಾಡಿಸಿ ಆತ್ಮವಿಶ್ವಾಸ ಹೆಚ್ಚಿಸಲಿದ್ದು, ಪಾಲಕರು ಹಾಗೂ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.

ಇಂದೇ ನಿಮ್ಮ ಹತ್ತಿರದ ಪತ್ರಿಕಾ ವಿತರಕರ ಬಳಿ ಪ್ರತಿಯನ್ನು ಕಾಯ್ದಿರಿಸಿ ಅಥವಾ ಡಿಜಿಟಲ್ ಓದಿಗಾಗಿ epaper.hampitimes.com ಗೆ ಭೇಟಿ ನೀಡಿ ಚಂದಾದಾರರಾಗಿ. (ಸಂಪರ್ಕ: 9448633038). ನಿಮ್ಮ ಮಗುವಿನ ಉಜ್ವಲ ನಾಳೆಗೆ ಇಂದೇ ಸರಿಯಾದ ದಾರಿ ಆಯ್ಕೆಮಾಡಿ!

Please follow and like us: