https://youtu.be/NHc6OMSu0K4?si=SI_K4goOPEgwo6h2
ಪ್ಲಾಸ್ಟಿಕ್ ಮುಕ್ತ ಪರಿಸರದ ಸಂದೇಶ | ವಿದ್ಯಾರ್ಥಿಗಳಿಗೆ ಪರಿಸರಸ್ನೇಹಿ ಉಡುಗೊರೆ | ಜೆಸಿಐ ವೀಕ್ ನಿಮಿತ್ತ ಕಾರ್ಯಕ್ರಮ
ಹೊಸಪೇಟೆ: ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ ಪರಿಸರ ಸಂರಕ್ಷಿಸುವುದು ಹಾಗೂ ವಿದ್ಯಾರ್ಥಿಗಳ ಉತ್ತಮ ಆರೋಗ್ಯ ಕಾಪಾಡುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಜೆಸಿಐ ಹೊಸಪೇಟೆ ಘಟಕದ ಅಧ್ಯಕ್ಷೆ ರೇಖಾಶಿವರಾಜ ಹೇಳಿದರು.

ಜೆಸಿಐ ಸಪ್ತಾಹದ ಮೊದಲ ದಿನದ ಅಂಗವಾಗಿ ಜೆಸಿಐ ಹೊಸಪೇಟೆ ವತಿಯಿಂದ ನಗರದ ವಿಶ್ವಚೇತನ ವಸತಿ ಅಂಧರ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಅರ್ಥಪೂರ್ಣ ಸೇವಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಆರೋಗ್ಯಕ್ಕೆ ಪೂರಕವಾದ ಸ್ಟೀಲ್ ಬಾಟಲಿಗಳನ್ನು ಬಳಸುವಂತೆ ಅವರು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಅಂಧ ವಿದ್ಯಾರ್ಥಿಗಳಿಗೆ ಪರಿಸರಸ್ನೇಹಿ ಸ್ಟೀಲ್ ನೀರಿನ ಬಾಟಲಿಗಳನ್ನು ವಿತರಿಸಿ, ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಯಿತು. ಸಂಸ್ಥೆಯ ಈ ಕಾಳಜಿಯುತ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜೆಸಿಐ ಹೊಸಪೇಟೆಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.




More Stories
ಸುಲಭ ಕಂತುಗಳಲ್ಲಿ ನಿವೇಶನ ಲಭ್ಯ: ಶಶಿಧರ್ ಕೊರವಿ
ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ: ಸಿಎಂ ಡಿ.ಕೆ.ಶಿವಕುಮಾರ್
ಕೂಡ್ಲಿಗಿಯಲ್ಲಿ ಖುದ್ದು ಅಹವಾಲು ಸ್ವೀಕರಿಸಿದ ಸಿಎಂ ಡಿ ಕೆ ಶಿವಕುಮಾರ್