October 26, 2026

Hampi times

Kannada News Portal from Vijayanagara

ಬಂಗಾಳಕೊಲ್ಲಿಯಲ್ಲಿ ‘ಅರ್ನಬ್’ ಆರ್ಭಟ

Balasore: Rains triggered by the effect of cyclonic storm Amphan lash Talasari beach in Balasore district of Odisha on May 20, 2020. The Odisha government has evacuated over 1.37 lakh people to safer places as extremely severe cyclone Amphan hurtled towards the coast triggering heavy rain and strong wind on Wednesday morning. According to reports, trees were uprooted and power infrastructure suffered damage following strong winds in the coastal districts. As many 16 units of the National Disaster Response Force, 15 teams of Odisha Disaster Rapid Action Force (ODRAF), 75 teams of Odisha Forest Development Corporation (OFDC) and 217 fire service team have been deployed in the affected districts. (Photo: IANS)

ನವದೆಹಲಿ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿದ್ದ ತೀವ್ರ ವಾಯುಭಾರ ಕುಸಿತವು ಭೀಕರ ಸ್ವರೂಪ ಪಡೆದುಕೊಂಡಿದ್ದು, ‘ಅರ್ನಬ್‌’ ಚಂಡಮಾರುತವಾಗಿ ಅಬ್ಬರಿಸತೊಡಗಿದೆ. ಈ ಚಂಡಮಾರುತವು ಮಂಗಳವಾರದ ವೇಳೆಗೆ ‘ಅತಿ ತೀವ್ರ ಚಂಡಮಾರುತ’ವಾಗಿ (Very Severe Cyclonic Storm) ಬದಲಾಗಲಿದ್ದು, ದಕ್ಷಿಣ ಭಾರತದ ಕರಾವಳಿ ತೀರಗಳಿಗೆ ಭಾರೀ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

ಸದ್ಯ ಅಂಡಮಾನ್‌ನ ಶ್ರೀ ವಿಜಯಪುರಂನಿಂದ ವಾಯವ್ಯಕ್ಕೆ 590 ಕಿ.ಮೀ ಹಾಗೂ ವಿಶಾಖಪಟ್ಟಣಂನಿಂದ ಆಗ್ನೇಯಕ್ಕೆ 650 ಕಿ.ಮೀ ದೂರದಲ್ಲಿ ಚಂಡಮಾರುತ ಕೇಂದ್ರೀಕೃತವಾಗಿದೆ. ಇದು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದ್ದು, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾ ಕರಾವಳಿ ಭಾಗಗಳತ್ತ ಮುನ್ನುಗ್ಗುತ್ತಿದೆ. ಚಂಡಮಾರುತದ ತೀವ್ರತೆಯಿಂದಾಗಿ ಕೇರಳ, ಮಾಹೆ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್ ಭಾಗಗಳಿಗೆ ಹವಾಮಾನ ಇಲಾಖೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.

ಕರಾವಳಿ ಆಂಧ್ರಪ್ರದೇಶ ಮತ್ತು ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಗುಡುಗು-ಮಿಂಚಿನೊಂದಿಗೆ ಧಾರಾಕಾರ ಮಳೆ ಹಾಗೂ ಬಿರುಗಾಳಿ ಬೀಸಲಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರರು ಕಡಲಿಗಿಳಿಯದಂತೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದ್ದು, ಕರಾವಳಿ ಜಿಲ್ಲೆಗಳ ಆಡಳಿತಗಳು ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಕಟ್ಟೆಚ್ಚರ ವಹಿಸಿವೆ.

Please follow and like us:

 

 

 

 

 

 

 

 

 

 

Translate »
[t4b-ticker]
error: Content is protected !!