- ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿಜಯನಗರ ಕ್ರಾಂತಿ
-
27ರಿಂದ 10ನೇ ಸ್ಥಾನಕ್ಕೇರಿದ ಸಾಧನೆ
- ಓದಿ, ಅಭ್ಯಾಸಿಸಿ, ಮುನ್ನಡೆಯಿರಿ!
ಹೊಸಪೇಟೆ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸುತ್ತಿರುವ ಆಂಗ್ಲ ಮಾಧ್ಯಮದ (English Medium) ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಲು ನೆರವಾಗುವ ನಿಟ್ಟಿನಲ್ಲಿ ‘ಹಂಪಿ ಟೈಮ್ಸ್’ ಪತ್ರಿಕೆಯು ವಿಶೇಷ ಪರೀಕ್ಷಾ ಮಾರ್ಗದರ್ಶಿ ಸರಣಿಯನ್ನು ನ.3 ರಿಂದ ಆರಂಭಿಸುತ್ತಿದೆ.
ಕಳೆದ ಎರಡು ವರ್ಷಗಳಿಂದ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಮಾರ್ಗದರ್ಶಿಯನ್ನು ಸದುಪಯೋಗಪಡಿಸಿಕೊಂಡ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅತ್ಯುತ್ತಮ ಯಶಸ್ಸು ಕಂಡಿದ್ದಾರೆ. ಈ ಶೈಕ್ಷಣಿಕ ಅಭಿಯಾನವು ವಿಜಯನಗರ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಉನ್ನತ ಶ್ರೇಣಿಗೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರ ವಹಿಸಿದೆ. 2023-24ರಲ್ಲಿ ರಾಜ್ಯ ಮಟ್ಟದಲ್ಲಿ 27ನೇ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ, 2024-25ರಲ್ಲಿ 19ನೇ ಸ್ಥಾನಕ್ಕೆ ಏರಿತು. ಅಲ್ಲದೆ, 2025-26ನೇ ಸಾಲಿನಲ್ಲಿ ಜಿಲ್ಲೆಯು ರಾಜ್ಯ ಮಟ್ಟದಲ್ಲಿ 10ನೇ ಶ್ರೇಣಿಗೇರುವ ಮೂಲಕ ಐತಿಹಾಸಿಕ ಸಾಧನೆ ದಾಖಲಿಸಿದೆ.

ಈ ಯಶಸ್ಸಿನ ಸರಣಿಯನ್ನು ಮುಂದುವರಿಸುತ್ತಾ, ಪ್ರಸಕ್ತ ಸಾಲಿನಲ್ಲಿ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳಿಗೂ ನುರಿತ ಸಂಪನ್ಮೂಲ ಶಿಕ್ಷಕರಿಂದ ಸಿದ್ಧಪಡಿಸಿದ ಗುಣಮಟ್ಟದ ಅಧ್ಯಯನ ಟಿಪ್ಪಣಿಗಳು, ಸೂತ್ರಗಳು ಮತ್ತು ಮಾದರಿ ಪ್ರಶ್ನೋತ್ತರಗಳನ್ನು ನಿಯಮಿತವಾಗಿ ಪ್ರಕಟಿಸಲಾಗುತ್ತಿದೆ.
ಇನ್ನು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದೊಂದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕಿದೆ. ಪಾಲಕರು ಸಹ ಸ್ವಇಚ್ಛೆಯಿಂದ ಮನೆಯಲ್ಲಿ ಮಕ್ಕಳಿಗೆ ಪೂರಕವಾದ ಅಧ್ಯಯನ ವಾತಾವರಣವನ್ನು ನಿರ್ಮಿಸಿ, ಅವರ ಶೈಕ್ಷಣಿಕ ಪ್ರಗತಿಗೆ ನಿರಂತರ ಪ್ರೋತ್ಸಾಹ ನೀಡುವ ಮೂಲಕ ಈ ಬಾರಿಯ ಪರೀಕ್ಷೆಯಲ್ಲೂ ಜಿಲ್ಲೆಯು ಮತ್ತಷ್ಟು ಉನ್ನತ ಸಾಧನೆ ಮಾಡಲು ಕೈಜೋಡಿಸಬೇಕೆಂದು ಕೋರಲಾಗಿದೆ.
ಮಾರ್ಗದರ್ಶಿ ನೋಟ್ಸ್ ಓದಲು ಹಂಪಿ ಟೈಮ್ಸ್ ಇ-ಪೇಪರ್ (epaper.hampitimes.com) ಇಂದೇ ಚಂದಾದಾರರಾಗಿರಿ..


More Stories
14 ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಅಭಿನಂದನಾ ಸನ್ಮಾನ , ಇಂಗ್ಲಿಷ್ ನಡುವೆಯೂ ಕನ್ನಡ ಬಳಕೆ ಹೆಚ್ಚಲಿ: ಸಚಿವ ಕೆ.ಎಸ್. ಬಸವಂತಪ್ಪ
ಮಾಧ್ಯಮ ವಲಯಕ್ಕೆ ಬಲ, ಡಿಜಿಟಲ್ ಸಂವಹನಕ್ಕೆ ಒತ್ತು : ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಚಂಚಲ್ ಕುಮಾರ್
ಬಳ್ಳಾರಿಯಲ್ಲಿ ಮಳೆ ಕೊರತೆ