November 27, 2026

Hampi times

Kannada News Portal from Vijayanagara

ವಿಮಾನ ಪ್ರಯಾಣಿಕರಿಗೆ ದರ ಏರಿಕೆ ಶಾಕ್: ಇಂಡಿಗೋ ಇಂಧನ ಶುಲ್ಕ ಹೆಚ್ಚಳ

ನವದೆಹಲಿ: ವಿಮಾನ ಇಂಧನ (ಎಟಿಎಫ್) ದರ ತೀವ್ರವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ (IndiGo) ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲಿನ ಇಂಧನ ಶುಲ್ಕವನ್ನು (Fuel Surcharge) ಪರಿಷ್ಕರಿಸಿದೆ. ಪರಿಷ್ಕೃತ ದರಗಳು ಅಕ್ಟೋಬರ್ 6ರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದ್ದು, ಹೊಸ ಬುಕಿಂಗ್ ಮಾಡುವ ಪ್ರಯಾಣಿಕರ ಟಿಕೆಟ್ ದರ ಹೆಚ್ಚಳವಾಗಲಿದೆ.

ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ದೇಶೀಯ ವಿಮಾನ ಟಿಕೆಟ್‌ಗಳ ಮೇಲಿನ ಇಂಧನ ಶುಲ್ಕವನ್ನು ₹100 ರಿಂದ ₹350 ರವರೆಗೆ ಹೆಚ್ಚಿಸಲಾಗಿದೆ. ಇದರಿಂದಾಗಿ ದೇಶೀಯ ಮಾರ್ಗಗಳಲ್ಲಿ ಒಟ್ಟು ಇಂಧನ ಶುಲ್ಕ ₹375 ರಿಂದ ₹1,300 ರಷ್ಟಾಗಲಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಪ್ರಯಾಣದ ವಲಯಗಳಿಗೆ ಅನುಗುಣವಾಗಿ ಇಂಧನ ಶುಲ್ಕವನ್ನು ₹1,000 ರಿಂದ ₹10,000 ವರೆಗೆ ನಿಗದಿಪಡಿಸಲಾಗಿದೆ.

ಪರಿಷ್ಕೃತ ದೇಶೀಯ ಇಂಧನ ಶುಲ್ಕ ವಿವರ:

  • 500 ಕಿ.ಮೀ ವರೆಗೆ: ₹375

  • 501 ರಿಂದ 1,000 ಕಿ.ಮೀ: ₹600

  • 1,001 ರಿಂದ 1,500 ಕಿ.ಮೀ: ₹900

  • 1,501 ರಿಂದ 2,000 ಕಿ.ಮೀ: ₹1,150

  • 2,000 ಕಿ.ಮೀ ಗಿಂತ ಹೆಚ್ಚು: ₹1,300

ಮಧ್ಯಪ್ರಾಚ್ಯದಲ್ಲಿನ ಜಾಗತಿಕ ಬಿಕ್ಕಟ್ಟಿನ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಹಾಗೂ ವಿಮಾನ ಇಂಧನ ದರ ಶೇ. 13 ರಿಂದ 14ರಷ್ಟು ಏರಿಕೆಯಾಗಿದೆ. ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವೆಚ್ಚದಲ್ಲಿ ಶೇ. 40ಕ್ಕೂ ಹೆಚ್ಚು ಪಾಲು ಇಂಧನಕ್ಕೇ ವ್ಯಯವಾಗುವುದರಿಂದ, ಈ ವೆಚ್ಚ ಸರಿದೂಗಿಸಲು ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಸಾಲು ಸಾಲು ಹಬ್ಬಗಳ ಸಂದರ್ಭದಲ್ಲೇ ಈ ದರ ಏರಿಕೆ ಜಾರಿಯಾಗುತ್ತಿರುವುದು ಪ್ರಯಾಣಿಕರಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸಲಿದೆ.

Please follow and like us:

 

 

 

 

 

 

 

 

 

 

Translate »
[t4b-ticker]