October 12, 2026

Hampi times

Kannada News Portal from Vijayanagara

ಪ್ರೇಮದ ಊರಲಿ ಸಿನಿಮಾದ ನಾಯಕಿಯರ ಹೆಸರಿನ ರಹಸ್ಯ ಬಿಚ್ಚಿಟ್ಟ ನಿರ್ದೇಶಕ ಮನೋಜ್ ಕುಮಾರ್

ಬೆಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಪ್ರೇಮದ ಊರಲಿ’ ಸಿನಿಮಾದ ನಾಯಕಿಯರ ಹೆಸರುಗಳ ಆಯ್ಕೆಯ ಹಿಂದಿರುವ ಕುತೂಹಲಕಾರಿ ರಹಸ್ಯವನ್ನು ಚಿತ್ರದ ನಿರ್ದೇಶಕ ಮನೋಜ್ ಕುಮಾರ್ ಬಹಿರಂಗಪಡಿಸಿದ್ದಾರೆ.

ಸಿನಿಮಾದ ಯಶಸ್ಸಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾವು ಖ್ಯಾತ ನಟಿ ರುಕ್ಮಿಣಿ ವಸಂತ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಅವರನ್ನು ನಟಿಸುವಂತೆ ಮಾಡಲು ಪ್ರಯತ್ನಿಸಿದ್ದರು ಎಂದು ತಿಳಿಸಿದರು. ಆದರೆ ಚಿತ್ರತಂಡ ಸಣ್ಣ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದ್ದ ಕಾರಣ ಹಾಗೂ ನಟಿಯ ಕಾಲ್‌ಶೀಟ್ ಮತ್ತು ದಿನಾಂಕಗಳ ಕೊರತೆಯಿಂದಾಗಿ ಅವರನ್ನು ಚಿತ್ರಕ್ಕೆ ಕರೆತರಲು ಸಾಧ್ಯವಾಗಲಿಲ್ಲ.

ರುಕ್ಮಿಣಿ ವಸಂತ್ ಅವರನ್ನು ನಾಯಕಿಯಾಗಿ ಕರೆತರಲು ಸಾಧ್ಯವಾಗದಿದ್ದರೂ, ‘ರುಕ್ಮಿಣಿ ವಸಂತ’ ಎಂಬ ಹೆಸರು ತಮಗೆ ಅಪಾರ ಇಷ್ಟವಾಗಿದ್ದ ಹಿನ್ನೆಲೆಯಲ್ಲಿ, ಕಥೆಯ ಇಬ್ಬರು ನಾಯಕಿಯರ ಪಾತ್ರಗಳಿಗೆ ಪ್ರತ್ಯೇಕವಾಗಿ ‘ರುಕ್ಮಿಣಿ’ ಹಾಗೂ ‘ವಸಂತ’ ಎಂದು ಹೆಸರಿಟ್ಟಿದ್ದಾಗಿ ನಿರ್ದೇಶಕರು ವಿವರಿಸಿದ್ದಾರೆ. ಈ ಪೈಕಿ ‘ವಸಂತ’ ಎಂಬ ಪಾತ್ರವು ಪ್ರಕೃತಿಯ ರೂಪಕವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.

ಆರಂಭದಲ್ಲಿ ಚಿತ್ರಕ್ಕೆ ‘ರುಕ್ಮಿಣಿ ವಸಂತ’ ಎಂದೇ ಶೀರ್ಷಿಕೆ ಇಡಲು ಯೋಜಿಸಲಾಗಿತ್ತಾದರೂ, ನಂತರ ಅದನ್ನು ‘ಪ್ರೇಮದ ಊರಲಿ’ ಎಂದು ಬದಲಾಯಿಸಲಾಯಿತು. ಈ ಸಿನಿಮಾ ಬಿಡುಗಡೆಯಾದ ಕೇವಲ 10 ದಿನಗಳಲ್ಲಿ 16 ಕೋಟಿ ರೂಪಾಯಿ ಗಳಿಕೆ ಕಂಡು ಭರ್ಜರಿ ಬಾಕ್ಸ್ ಆಫೀಸ್ ಯಶಸ್ಸು ಸಾಧಿಸಿದೆ.

Please follow and like us:

 

 

Translate »
[t4b-ticker]