October 12, 2026

Hampi times

Kannada News Portal from Vijayanagara

ಧನಂಜಯ್-ಪೂರ್ಣಚಂದ್ರ ಕಾಂಬಿನೇಷನ್ ಮೆರುಗು

ಬೆಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದ್ದ ಕನ್ನಡದ ನೂತನ ಚಲನಚಿತ್ರ ‘ಮದರ್ ಪ್ರಾಮಿಸ್’ ಈಗ ಡಿಜಿಟಲ್ ಲೋಕಕ್ಕೆ ಕಾಲಿಡಲು ಸಿದ್ಧವಾಗಿದ್ದು, ಗಾಂಧಿ ಜಯಂತಿಯ ವಿಶೇಷವಾಗಿ ಅಕ್ಟೋಬರ್ 2 ರಿಂದ ಖ್ಯಾತ ‘ಜೀ5’ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್, ಪೂರ್ಣಚಂದ್ರ ಮೈಸೂರು ಹಾಗೂ ಮಹದೇವ್ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಪೂರ್ಣಚಂದ್ರ ಮೈಸೂರು ಅವರೇ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರಕಥೆಯನ್ನು ಮಹದೇವ್ ಪ್ರಸಾದ್ ಹಾಗೂ ಅರುಣ್ ಭರಮಣ್ಣವರ್ ಅವರೊಂದಿಗೆ ಜಂಟಿಯಾಗಿ ರಚಿಸಿದ್ದಾರೆ.

ಜೂಜಾಟದ ಚಟಕ್ಕೆ ಬಿದ್ದು ಎಲ್ಲವನ್ನೂ ಕಳೆದುಕೊಂಡು ಪ್ರಾಣಭಯದಿಂದ ಪರಾರಿಯಾಗುವ ವ್ಯಕ್ತಿಯೊಬ್ಬನ ರೋಚಕ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಇಬ್ಬರು ಬಲಾಢ್ಯ ಡಾನ್‌ಗಳು ಮತ್ತು ಕಳ್ಳಸಾಗಣೆದಾರರಿಂದ ತಪ್ಪಿಸಿಕೊಳ್ಳಲು ಹೋರಾಡುವ ನಾಯಕ, ತನ್ನೊಂದಿಗೆ ತಾಯಿಯನ್ನೂ ಈ ಸಂಕಷ್ಟದ ಪಯಣದಲ್ಲಿ ಎಳೆದುಕೊಂಡು ಹೋಗುವ ಭಾವನಾತ್ಮಕ ತಿರುವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನವನೀತ್ ಶ್ಯಾಮ್ ಸಂಗೀತ ನಿರ್ದೇಶನ ಮತ್ತು ರಾಹುಲ್ ರಾಯ್ ಛಾಯಾಗ್ರಹಣವಿರುವ ಈ ಚಿತ್ರವು ಜುಲೈ 10ರಂದು ಬೆಳ್ಳಿತೆರೆಗೆ ಬಂದಿತ್ತು. ಇದೀಗ ಚಿತ್ರಮಂದಿರದ ಯಶಸ್ಸಿನ ಬಳಿಕ ಮನೆಯಲ್ಲೇ ಕುಳಿತು ಸವಿಯಲು ಪ್ರೇಕ್ಷಕರಿಗೆ ಲಭ್ಯವಾಗುತ್ತಿದ್ದು, ಕನ್ನಡ ಸಿನಿರಸಿಕರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

Please follow and like us:

 

 

Translate »
[t4b-ticker]
error: Content is protected !!