October 11, 2026

Hampi times

Kannada News Portal from Vijayanagara

ದಕ್ಷಿಣದಲ್ಲಿ ಮೂರೇ ಚಿತ್ರ: ನಾನಾ ಪಟೇಕರ್

ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಟೇಕರ್ ಅವರು ಗೋವಾದಲ್ಲಿ ನಿಧನರಾಗಿದ್ದು, ಐದು ದಶಕಗಳ ಸುದೀರ್ಘ ಅಭಿನಯ ವೃತ್ತಿಜೀವನದಲ್ಲಿ ಅವರು ನಟಿಸಿದ ದಕ್ಷಿಣ ಭಾರತದ ಸಿನಿಮಾಗಳ ಸಂಖ್ಯೆ ಕೇವಲ ಮೂರು. 1978ರಲ್ಲಿ ‘ಗಮನ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರು.

ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಲು ಆರಂಭದಲ್ಲಿ ಕೊಂಚ ಹಿಂಜರಿಯುತ್ತಿದ್ದ ನಾನಾ ಪಟೇಕರ್, ಪ್ರಸಿದ್ಧ ನಿರ್ದೇಶಕ ಭಾರತಿರಾಜ ನಿರ್ದೇಶನದ ತಮಿಳಿನ ‘ಬೊಮ್ಮಲಾಟಮ್’ ಸಿನಿಮಾದಲ್ಲಿ ರಾಣಾ ಎಂಬ ವಿಲಕ್ಷಣ ನಿರ್ದೇಶಕನ ಪಾತ್ರ ಮಾಡಿದ್ದರು. ರಮೇಶ್ ಭಾಗವತರ್ ನಿರ್ದೇಶನದ ‘ಯಕ್ಷ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅವರು, ಲೂಸ್ ಮಾದ ಯೋಗಿ ನಾಯಕನಾಗಿದ್ದ ಈ ಚಿತ್ರದಲ್ಲಿ ಯಕ್ಷರಾಜ್ ಪುಲಿಕೇಶಿ ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿದ್ದು,

ವಿಶೇಷವೆಂದರೆ ತಾವೇ ಸ್ವತಃ ಕನ್ನಡದಲ್ಲಿ ಡಬ್ ಮಾಡಿದ್ದರು. ಇನ್ನು ಪ. ರಂಜಿತ್ ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಕಾಲಾ’ ತಮಿಳು ಸಿನಿಮಾ ನಾನಾ ಪಟೇಕರ್ ಅವರ ದಕ್ಷಿಣ ಭಾರತದ ಸಿನಿಮಾಗಳಲ್ಲೇ ಅತ್ಯಂತ ಯಶಸ್ವಿ ಹಾಗೂ ಜನಪ್ರಿಯವಾಗಿದ್ದು, ಹರಿದೇವ್ ಅಭಯಂಕರ್ ಎಂಬ ರಾಜಕಾರಣಿ ಹಾಗೂ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ರಜನಿಕಾಂತ್ ಎದುರು ಅವರು ನೀಡಿದ ಶಾಂತ ಮತ್ತು ಗಂಭೀರ ನಟನೆ ಸಿನಿಪ್ರಿಯರ ಮನಗೆದ್ದಿತ್ತು.

Please follow and like us:

 

 

Translate »
[t4b-ticker]