October 12, 2026

Hampi times

Kannada News Portal from Vijayanagara

ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಕಪ್ಪು ವೆಲ್ವೆಟ್ ಗೌನ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ

ಪ್ಯಾರಿಸ್: ಜಾಗತಿಕ ಫ್ಯಾಷನ್ ರಂಗದ ಅತ್ಯಂತ ಪ್ರತಿಷ್ಠಿತ ಕಾರ್ಯಕ್ರಮವಾದ ‘ಪ್ಯಾರಿಸ್ ಫ್ಯಾಷನ್ ವೀಕ್’ನಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಅಪೂರ್ವ ಸೌಂದರ್ಯ ಮತ್ತು ಆತ್ಮವಿಶ್ವಾಸದ ರ‍್ಯಾಂಪ್ ವಾಕ್ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ‘ಲೋರಿಯಲ್ ಪ್ಯಾರಿಸ್’ ಕಂಪನಿಯ ಜಾಗತಿಕ ರಾಯಭಾರಿಯಾಗಿ ‘ವಾಕ್ ಯುವರ್ ವರ್ತ್’ ಕಲ್ಪನೆಯಡಿ ಅವರು ವೇದಿಕೆಯಲ್ಲಿ ಹೆಜ್ಜೆ ಹಾಕಿದರು.

ಖ್ಯಾತ ಫ್ಯಾಷನ್ ಡಿಸೈನರ್ ಯಾನ್‌ ಶೂಮೇಕರ್ ವಿನ್ಯಾಸಗೊಳಿಸಿದ ಕಪ್ಪು ಬಣ್ಣದ ವೆಲ್ವೆಟ್ ಗೌನ್ ಹಾಗೂ ತಲೆಯ ಮೇಲೆ ಕಿರೀಟ ಧರಿಸಿ ರಾಜಕುಮಾರಿಯಂತೆ ಮಿಂಚಿದ ವಿಶ್ವಸುಂದರಿ, ಭಾರತದ ಕೀರ್ತಿಯನ್ನು ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದರು. ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ತಾರೆಗಳಾದ ಸೆಲಿನ್ ಡಿಯೋನ್, ಕೆಂಡಲ್ ಜೆನ್ನರ್ ಮತ್ತು ವಿಯೋಲಾ ಡೇವಿಸ್ ಕೂಡ ಐಶ್ವರ್ಯಾ ಜೊತೆ ರ‍್ಯಾಂಪ್‌ನಲ್ಲಿ ಹೆಜ್ಜೆ ಹಾಕಿದರು.

ವಿಶೇಷವಾಗಿ ಖ್ಯಾತ ಗಾಯಕಿ ಸೆಲಿನ್ ಡಿಯೋನ್ ಜೊತೆ ಐಶ್ವರ್ಯಾ ಕೈಜೋಡಿಸಿ ನರ್ತಿಸಿದ ಅಪರೂಪದ ಕ್ಷಣ ಹಾಗೂ ವೇದಿಕೆಯ ಹಿಂದೆ ನಟಿ ಈವಾ ಲೊಂಗೋರಿಯಾ ಮತ್ತು ಸಿಮೋನ್ ಆಶ್ಲಿ ಜೊತೆ ಆತ್ಮೀಯವಾಗಿ ಮಾತನಾಡಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. 1994ರಲ್ಲಿ ಮಿಸ್ ವರ್ಲ್ಡ್ ಪಟ್ಟ ಗೆದ್ದ ಐಶ್ವರ್ಯಾ ರೈ ಇಂದಿಗೂ ಅದೇ ಆಕರ್ಷಣೆ ಹಾಗೂ ಗ್ಲಾಮರ್ ಉಳಿಸಿಕೊಂಡಿದ್ದಾರೆ ಎಂದು ಜಗತ್ತಿನಾದ್ಯಂತ ಅಭಿಮಾನಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

Please follow and like us:

 

 

Translate »
[t4b-ticker]