ಪಶ್ಚಿಮ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತ ಮತ್ತು ಕೆನ್ಯಾ ನಡುವಿನ ಕಡಲ ಭದ್ರತೆ ಹಾಗೂ ಸಹಕಾರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ನೌಕಾಪಡೆಯ ಮುಂಚೂಣಿ ಕ್ಷಿಪಣಿ ವಾಹಕ ಯುದ್ಧನೌಕೆ ‘ಐಎನ್‌ಎಸ್ ತರ್ಕಶ್’ ಪೂರ್ವ ಆಫ್ರಿಕಾ ರಾಷ್ಟ್ರವಾದ ಕೆನ್ಯಾದ ಮೊಂಬಾಸಾ ಬಂದರನ್ನು ತಲುಪಿದೆ.

ಕಾರ್ಯಾಚರಣೆಯ ತಿರುವು (Operational Turnaround) ಪ್ರಕ್ರಿಯೆಗಾಗಿ ಬಂದರು ಪ್ರವೇಶಿಸಿರುವ ಈ ಯುದ್ಧನೌಕೆಯು ಅಕ್ಟೋಬರ್ 2ರವರೆಗೆ ಅಲ್ಲಿಯೇ ಬೀಡುಬಿಡಲಿದೆ. ಈ ಭೇಟಿಯ ಅವಧಿಯಲ್ಲಿ ಉಭಯ ದೇಶಗಳ ನೌಕಾಪಡೆಗಳ ನಡುವೆ ಪರಸ್ಪರ ವೃತ್ತಿಪರ ವಿನಿಮಯಗಳು, ಸಿಬ್ಬಂದಿ ಸಂವಾದಗಳು ಹಾಗೂ ಸಮುದಾಯ ಸಂಪರ್ಕ ಕಾರ್ಯಕ್ರಮಗಳು ಜರುಗಲಿವೆ.
ಗುರುವಾರದಂದು ಸಾರ್ವಜನಿಕರ ಸಂದರ್ಶನಕ್ಕಾಗಿ ನೌಕೆಯು ಮುಕ್ತವಾಗಿರಲಿದ್ದು, ಭೇಟಿಯ ಮುಕ್ತಾಯದ ನಂತರ ಕೆನ್ಯಾ ನೌಕಾಪಡೆಯೊಂದಿಗೆ ಜಂಟಿ ಸಮರಾಭ್ಯಾಸ (Passage Exercise) ನಡೆಸಲಿದೆ. ಈ ನಿಯೋಜನೆಯು ಭಾರತದ ‘ಮಹಾಸಾಗರ’ (MAHASAGAR) ದೂರದೃಷ್ಟಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.


More Stories
ಮೀರಾಲಾಂ ಸಿನಿಮಾ ಮಂದಿರದಲ್ಲಿ ಪಾರ್ಕಿಂಗ್ ಸುಲಿಗೆ
ಪ್ರತಿಷ್ಠಿತ ಪಿಯು ಕಾಲೇಜು ಪ್ರವೇಶಕ್ಕೆ ಹೆದ್ದಾರಿ… ವಿಷನ್ 625: ಸ್ಟಡಿ ಎಕ್ಸ್ಪ್ರೆಸ್’ ಮಾರ್ಗದರ್ಶಿ
13 ಗಣಿ ಬಾಧಿತ ಕ್ಯಾಂಪ್ಗಳ ಅಭಿವೃದ್ಧಿಗೆ ₹146 ಕೋಟಿ ಅನುದಾನ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ