https://youtu.be/NHc6OMSu0K4?si=SI_K4goOPEgwo6h2



ನವದೆಹಲಿ: ಕೃತಕ ಅಥವಾ ಅನಲಾಗ್ ಉತ್ಪನ್ನಗಳನ್ನು ‘ಪನ್ನೀರ್’ ಹೆಸರಿನಲ್ಲಿ ತಯಾರಿಸುವುದು ಹಾಗೂ ಮಾರಾಟ ಮಾಡುವುದನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸಲು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಮಹತ್ವದ ಪ್ರಸ್ತಾಪ ಮುಂದಿಟ್ಟಿದೆ.

ಗ್ರಾಹಕರಿಗೆ ಆಹಾರ ಉತ್ಪನ್ನಗಳ ನೈಜ ಸ್ವರೂಪ ಮತ್ತು ಅದರಲ್ಲಿರುವ ಪದಾರ್ಥಗಳ ಕುರಿತು ಯಾವುದೇ ರೀತಿಯ ತಪ್ಪು ಕಲ್ಪನೆ ಅಥವಾ ಗೊಂದಲ ಉಂಟಾಗಬಾರದು ಎಂಬ ಉದ್ದೇಶದಿಂದ ಈ ಕಠಿಣ ನಿಯಮ ರೂಪಿಸಲಾಗಿದೆ. ಈ ಸಂಬಂಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧಗಳು) ನಿಯಮಗಳು, 2011ಕ್ಕೆ ಸೂಕ್ತ ತಿದ್ದುಪಡಿ ತರಲು ಪ್ರಾಧಿಕಾರ ಮುಂದಾಗಿದೆ.
ಈಗಾಗಲೇ ‘ಡೈರಿ ಅನಲಾಗ್’ (ಹಾಲು ಪರ್ಯಾಯ) ವಿಭಾಗದಡಿ ಪರವಾನಗಿ ಅಥವಾ ನೋಂದಣಿ ಪಡೆದುಕೊಂಡಿರುವ ಯಾವುದೇ ಉತ್ಪನ್ನಗಳ ಹೆಸರಿನಲ್ಲಿ, ಲೇಬಲ್‌ಗಳಲ್ಲಿ ಇಲ್ಲವೇ ಮಾರುಕಟ್ಟೆ ಪ್ರಚಾರದಲ್ಲಿ ‘ಪನ್ನೀರ್’ ಎಂಬ ಪದವನ್ನು ಬಳಸುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು ಎಂದು ಎಫ್‌ಎಸ್‌ಎಸ್‌ಎಐ ತನ್ನ ಅಧಿಕೃತ ಅಧಿಸೂಚನೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹಾಲಿನ ಕೊಬ್ಬಿನ ಬದಲು ಸಸ್ಯಜನ್ಯ ಕೊಬ್ಬು ಅಥವಾ ಇತರ ಪರ್ಯಾಯ ವಸ್ತುಗಳನ್ನು ಬೆರೆಸಿ ನೈಜ ಪನ್ನೀರ್ ರೀತಿಯಲ್ಲೇ ಮಾರಾಟ ಮಾಡುವ ಜಾಲಕ್ಕೆ ಕಡಿವಾಣ ಹಾಕಲು ಈ ಕ್ರಮ ಕೈಗೊಳ್ಳಲಾಗಿದೆ.


More Stories
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ
ಭಾರತಕ್ಕೆ ಶೇ. 7.8 ಬೆಳವಣಿಗೆ
ಸೆ.27ರ ಭಾನುವಾರ ಬ್ಯಾಂಕ್ಗಳು ತೆರೆದಿರುತ್ತವೆ: ಹಣಕಾಸು ಸಚಿವಾಲಯ