December 5, 2024

Hampi times

Kannada News Portal from Vijayanagara

ರೈತ ಹೋರಾಟಗಾರ ಜೆ.ಕಾರ್ತಿಕ್ ಸಾವು, ಕೊಲೆ ಶಂಕೆ, ಸಚಿವ ಜಮೀರ್ ಸಂತಾಪ

 

https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ:
ರೈತ ಹೋರಾಟಗಾರ, ಯುವ ಮುಖಂಡ, ಜನಸ್ನೇಹಿ ಜೆ.ಕಾರ್ತಿಕ್(೪೦) ಇನ್ನಿಲ್ಲ ಎಂಬ ಸುದ್ದಿ ಕೇಳುತ್ತಿದ್ದವರ ಕಣ್ಣಾಲೆಗಳು ತೇವವಾಗುತ್ತಿವೆ. ಕುಟುಂಬದ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬವರ್ಗದವರ ಆಕ್ರಂದನ ಮುಗಿಲು ಮುಟ್ಟಿದೆ. ಈಭಾಗದ ರೈತರ ಧ್ವನಿಯಾಗಿದ್ದುಕೊಂಡು ರೈತರ ಏಳ್ಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿ, ನ್ಯಾಯಯುತ ಹೋರಾಟಕ್ಕಾಗಿ ಸಂಘಟನೆಯೊಂದು ಹುಟ್ಟುಹಾಕಿ ರೈತರಿಗೆ ಬೆಂಬಲವಾಗಿ ನಿಂತಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವ ರೈತ ಸಂಘಟನೆಗೆ ಮತ್ತು ಅಸಂಘಟಿತ ರೈತರಿಗೆ, ಸ್ನೇಹಿತರಿಗೆ ದಿಕ್ಕಿ ತೋಚದಂತಾಗಿದೆ. ಕುಟುಂಬದ ನಂದಾದೀಪ ನಂದಿದೆ.

ವಿಜಯನಗರ ಜಿಲ್ಲೆಯ ರೈತ ಹೋರಾಟಗಾರ, ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಜೆ.ಕಾರ್ತಿಕ್ ಮಂಗಳವಾರ ಬೆಳಿಗ್ಗೆ ರಸ್ತೆ ಮುನಿರಾಬಾದ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕುಷ್ಟಗಿ ರಸ್ತೆ, ಶಹಪುರ ಸಮೀಪ ಬೆಳಿಗ್ಗೆ ಅಪಘಾತದಲ್ಲಿ ತೀವ್ರಸ್ವರೂಪ ಘಾಯಗೊಂಡಿದ್ದರು. ಚಿಕೆತ್ಸೆಗೆ ಹುಬ್ಬಳ್ಳಿ ಖಾಸಗಿ ಆಸ್ಪತ್ರಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಬೆಳಿಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಮೃತರ ಅಂತ್ಯಕ್ರಿಯೆ ನಗರದ ವೀರಶೈವ ರುದ್ರಭೂಮಿಯಲ್ಲಿ ಬುಧವಾರ ಸಂಜೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ತಾಯಿ ಬಸಮ್ಮ, ಪತ್ನಿ ಮಂಗಳ, ಪುತ್ರಿ ಬೃಂದ ಹಿರಿಯ ಸಹೋದರ ಮೃತ್ಯುಂಜಯ, ಕಿರಿಯ ಸಹೋದರಿ ಉಮಾದೇವಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ವೀರಶೈವ ಲಿಂಗಾಯತ ಸಮಾಜವು ಸಮಾಜದ ಚಿಂತಕ, ಮುಂಚೂಣಿ ಹೋರಾಟಗಾರನನ್ನು ಕಳೆದುಕೊಂಡಿದ್ದೇವೆ ಎಂದು ಸಮಾಜಬಾಂಧವರು ಕಂಬನಿ ಮಿಡಿದಿದ್ದಾರೆ.

ಕೊಲೆ ಶಂಕೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮೃತ ವ್ಯಕ್ತಿಯ ಫೋಟೋಗಳನ್ನು ನೋಡಿದಾಗ ಅಪಘಾತ ಎಂದು ನಂಬಲಾಗುತ್ತಿಲ್ಲ. ಕೊಲೆಯಾಗಿರಬಹುದು ಎಂಬ ಶಂಕೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಪೊಲೀಸರು ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಬೇಕು ಎಂದು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಜೆ.ಎನ್.ಕಾಳಿದಾಸ ಒತ್ತಾಯಿಸಿದ್ದಾರೆ.

ಸಚಿವ ಜಮೀರ್ ಖಾನ್ ಸಂತಾಪ: ಜನಸ್ನೇಹಿ ರೈತರ ಹೋರಾಟಗಾರ ಸಂಘಟನೆಯ ರಾಜ್ಯಕಾರ್ಯಾಧ್ಯಕ್ಷ ಜೆ.ಕಾರ್ತಿಕ್(೪೦) ಇನ್ನಿಲ್ಲ ಎಂಬ ಸುದ್ದಿ ಕೇಳಿ ನನಗೆ ತೀವ್ರ ದುಃಖ ತಂದಿದೆ. ಸಮಾಜಮುಖಿ ಕೆಲಸ ಹಾಗೂ ಹೋರಾಟಗಳಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದರು. ಮೃತರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬ ವರ್ಗಕ್ಕೆ ದುಃಖಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

 

 

ಜಾಹೀರಾತು
error: Content is protected !!