https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಅಕ್ರಮ ಆಸ್ತಿ ಗಳಿಕೆ ಹಾಗೂ ಅಧಿಕಾರ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಡಾ. ಎಲ್.ಆರ್. ಶಂಕರನಾಯ್ಕ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಬೆಳಿಗ್ಗೆಯಿಂದಲೇ ನಡೆದ ಶೋಧ ಕಾರ್ಯದಲ್ಲಿ ಅಂದಾಜು ೫ ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಫೆ.27, ವಿ.ರಾಮಿರೆಡ್ಡಿ ರೋಟರಿ ಐಸಿಯು ಅಂಬುಲೆನ್ಸ್ ಲೋಕಾರ್ಪಣೆ: ಸೈಯದ್ ನಾಜಿಮುದ್ದಿನ್
ನಾಲ್ಕು ಕಡೆ ರೇಡ್: ಲೋಕಾಯುಕ್ತ ಎಸ್ಪಿ ಪವನ್ ಎಸ್. ನೆಜ್ಜೂರು ಅವರ ನೇತೃತ್ವದಲ್ಲಿ, ಡಿವೈಎಸ್ಪಿಗಳಾದ ಸಚಿನ್ ಎಸ್. ಛಲವಾದಿ, ಸಿದ್ದಪ್ಪ ಎಸ್. ಬೀಳಗಿ ಹಾಗೂ ಇನ್ಸ್ಪೆಕ್ಟರ್‌ಗಳನ್ನೊಳಗೊಂಡ ತಂಡವು ಮಂಗಳವಾರ ಮುಂಜಾನೆಯೇ ಕಾರ್ಯಾಚರಣೆ ಆರಂಭಿಸಿತು.
ಡಿಎಚ್‌ಒ ಶಂಕರನಾಯ್ಕ ಅವರ ನಿವಾಸ, ನಿರ್ಮಾಣ ಹಂತದಲ್ಲಿರುವ ಆಸ್ಪತ್ರೆ ಕಟ್ಟಡ, ಪತ್ನಿ ಹೆಸಲ್ಲಿರುವ ಸಮರ್ಥ ಖಾಸಗಿ ಕ್ಲಿನಿಕ್, ಡಿಎಚ್‌ಒ ಕಚೇರಿ. ಹೀಗೆ ಒಟ್ಟು ನಾಲ್ಕು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ, ಕಡತಗಳ ಪರಿಶೀಲನೆ ನಡೆಸಲಾಯಿತು.

ಕೋಟಿ ಕೋಟಿ ಒಡೆಯ! ದಾಳಿಯ ವೇಳೆ ಡಿಎಚ್‌ಒ ಅವರ ಆದಾಯಕ್ಕೂ ಮೀರಿದ ಆಸ್ತಿ ಮೇಲ್ನೋಟಕ್ಕೆ ಪತ್ತೆಯಾಗಿದೆ. ಸುಮಾರು ೪ ಕೋಟಿ ರೂ.ಗೂ ಅಧಿಕ ಮೌಲ್ಯದ ಸ್ಥಿರಾಸ್ತಿ ದಾಖಲೆಗಳು, ಮನೆಯಲ್ಲಿ ಬರೋಬ್ಬರಿ ೧೧ ಲಕ್ಷ ರೂ. ನಗದು ಮತ್ತು ೨೫ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಲೋಕಾಯುಕ್ತ ಬಲೆಗೆ ಬಿದ್ದಿವೆ. ಒಟ್ಟಾರೆ ೫ ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಭೇದ ಭಾವ ಎಣಿಸದೆ ಸಮಾನವಾಗಿ ಕಾಣಿ: ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್ ಹೇಳಿಕೆ

ಆರೋಪಗಳೇನು?: ಶಂಕರನಾಯ್ಕ ಅವರ ವಿರುದ್ಧ ಈ ಹಿಂದೆಯೇ ಹಲವು ದೂರುಗಳು ಕೇಳಿಬಂದಿದ್ದವು. ಮುಖ್ಯವಾಗಿ ವಿಕಲಚೇತನರಿಗೆ ನೀಡುವ ಯುಡಿಐಡಿ ನಕಲಿ ಪ್ರಮಾಣ ಪತ್ರಗಳನ್ನು ವಿತರಿಸಿರುವುದು ಮತ್ತು ತಮ್ಮ ಪತ್ನಿಯ ಹೆಸರಿನಲ್ಲಿ ನಿರ್ಮಾಣವಾಗುತ್ತಿರುವ ೧೦೦ ಹಾಸಿಗೆಗಳ ಆಸ್ಪತ್ರೆಯು ಇನ್ನೂ ಕಾಮಗಾರಿ ಹಂತದಲ್ಲಿರುವಾಗಲೇ, ನಿಯಮಬಾಹಿರವಾಗಿ ‘ಕೆ.ಪಿ.ಎಂ.ಇ’ ಪ್ರಮಾಣ ಪತ್ರ ನೀಡಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳಡಿ ದೂರು ದಾಖಲಾಗಿತ್ತು.

ಶಂಕರನಾಯ್ಕ ಅವರ ಆಸ್ತಿ ಗಳಿಕೆಯು ಅವರ ಆದಾಯ ಮೂಲಕ್ಕಿಂತ ಅಧಿಕವಾಗಿರುವುದು ಮೇಲ್ನೋಟಕ್ಕೆ ಕಂಡುಬAದಿದೆ. ಅಕ್ರಮ ಆಸ್ತಿ ಗಳಿಕೆ ಆರೋಪದಡಿ ದೂರು ದಾಖಲಿಸಿಕೊಂಡು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ,”
ಪವನ್ ಎಸ್. ನೆಜ್ಜೂರು ಲೋಕಾಯುಕ್ತ ಎಸ್ಪಿ
“ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ನಿಜ. ಅವರು ಕೇಳಿದ ಎಲ್ಲಾ ಮಾಹಿತಿಯನ್ನೂ ಒದಗಿಸಿದ್ದೇನೆ. ಮುಂದೆಯೂ ತನಿಖೆಗೆ ಅಗತ್ಯವಿರುವ ಎಲ್ಲ ಸಹಕಾರ ನೀಡುತ್ತೇನೆ,” ಎಲ್.ಆರ್. ಶಂಕರನಾಯ್ಕ, ಡಿಎಚ್‌ಒ
ಇದನ್ನೂ ಓದಿ: ಮಾ.7ರಂದು ಶ್ರೀಕರಿ ಆಸ್ಪತ್ರೆವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ
ವಶಪಡಿಸಿಕೊಂಡ ನಗದು: ೧೧ ಲಕ್ಷ ರೂ.
೧೧ ನಿವೇಶನಗಳು. ೫ ವಾಸದ ಮನೆ
ಚಿನ್ನಾಭರಣ: ೨೫ ಲಕ್ಷ ರೂ. ಮೌಲ್ಯದ್ದು.
ಸ್ಥಿರಾಸ್ತಿ: ೪ ಕೋಟಿ ರೂ.ಗೂ ಅಧಿಕ.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್