April 15, 2026

Hampi times

Kannada News Portal from Vijayanagara

ಎಲ್ಲರಿಗೂ ಅಂಬೇಡ್ಕರ್ ಬದುಕು ಸ್ಫೂರ್ತಿದಾಯಕ

https://youtu.be/NHc6OMSu0K4?si=SI_K4goOPEgwo6h2

 ಹಂಪಿ ಟೈಮ್ಸ್ ಹರಪನಹಳ್ಳಿ 

ಸಮಾಜದಲ್ಲಿ ಸಮಾನತೆ ಮತ್ತು ಪ್ರಗತಿಯ ಕನಸು ಕಂಡು, ಕಟ್ಟಕಡೆಯ ವ್ಯಕ್ತಿಗೂ ಗೌರವಯುತ ಬದುಕನ್ನು ಕಲ್ಪಿಸಿಕೊಟ್ಟ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಹಾಗೂ ಚಿಂತನೆಗಳು ಸಮಾಜಕ್ಕೆ ದಾರಿದೀಪ ಎಂದು ರಾಜ್ಯ ಸೌಹಾರ್ದ ಸಹಕಾರಿ ರಾಜ್ಯಾಧ್ಯಕ್ಷ ಜಿ. ನಂಜನಗೌಡ ಹೇಳಿದರು.

ಇದನ್ನೂ ಓದಿ:  ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ

 

ನಗರದ ಬಾಪೂಜಿನಗರದಲ್ಲಿ ರಾಜ್ಯ ಬಿಜೆಪಿ ಘಟಕ ಆದೇಶದಂತೆ ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾದಿಂದ ಹಮ್ಮಿಕೊಂಡಿದ್ದ ಅಂಬೇಡ್ಕರ್ ಸ್ವಚ್ಛಗೊಳಿಸಿ ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಜೀವನ ರೂಪಿಸಿಕೊಂಡಿದ್ದ ಅಂಬೇಡ್ಕರ್ ಸಂದೇಶವನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದರು.

ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಕಾರ್ಯದರ್ಶಿ ಕಣವಿಹಳ್ಳಿ ಮಂಜುನಾಥ್ ಮಾತನಾಡಿ, ಸಂವಿಧಾನವು ಕೇವಲ ಒಂದು ಕೃತಿಯಲ್ಲ, ಅದು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹಾಗ್ರಂಥವಾಗಿದೆ. ಅಂಬೇಡ್ಕರ್ ಇಡೀ ಮಾನ ವಕುಲದ ಏಳಿಗೆಗಾಗಿ ಶ್ರಮಿಸಿದರು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಂಬೇಡ್ಕರ್ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಸೂಕ್ತ ಗೌರವ ನೀಡಲಾಗುತ್ತಿದೆ ಎಂದರು.

ಮುಖಂಡರಾದ ಕಂಚಿಕೇರಿ ಕೆಂಚಣ್ಣ, ವಕೀಲ ಮೈದೂರು ಮಲ್ಲಿಕಾರ್ಜುನ, ಓಂಕಾರ ಗೌಡ್ರು, ವಕೀಲ ಲಿಂಗಾನಂದ, ಚನ್ನನಗೌಡ, ಕುಸುಮ ಜಗದೀಶ್, ಮುನಿಗೌಡ, ತೆಲಿಗಿ ಗಂಗಾಧರ್, ತೆಲಿಗಿ ನಾಗರಾಜ್, ಎಸ್.ಆರ್ ಅಶೋಕ್, ಶ್ರೀಪತಿ, ನಂದಿಬೇವೂರು ಚಾರ್ಯಪ್ಪ, ಯಡಿಹಳ್ಳಿ ಭಾಗ್ಯಮ್ಮ, ಶಾನಬೋಗರ ಸುರೇಶ್, ಕಣಿವಿಹಳ್ಳಿ ಉಚ್ಚಪ್ಪ, ವಸಂತ, ಶೃಂಗಾತೋಟದ ಸುರೇಶ್, ಕೋಟೆಪ್ಪ, ಯಡಿಹಳ್ಳಿ ಅಂಜಿನಪ್ಪ, ಹುಲಿಕಟ್ಟಿ ಪಕ್ಕೀರಪ್ಪ ಇತರರಿದ್ದರು.

Please follow and like us:

 

 

 

 

 

Translate »
[t4b-ticker]
error: Content is protected !!