ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ಹಾಗೂ ಆಡಳಿತದಲ್ಲಿ ಸ್ವಚ್ಛತೆಯನ್ನು ಸಾಂಸ್ಥಿಕಗೊಳಿಸುವ ಗುರಿಯೊಂದಿಗೆ ನೀತಿ ಆಯೋಗವು ‘ವಿಶೇಷ ಅಭಿಯಾನ 6.0’ (Special Campaign 6.0) ಸಿದ್ಧತೆಗಳನ್ನು ಆರಂಭಿಸಿದೆ. ಸಾರ್ವಜನಿಕ ಕುಂದುಕೊರತೆಗಳನ್ನು ಶೀಘ್ರ ಇತ್ಯರ್ಥಪಡಿಸಿ, ಕಚೇರಿಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವುದು ಈ ಅಭಿಯಾನದ ಪ್ರಮುಖ ಆಶಯವಾಗಿದೆ.

ಮಹಾತ್ಮ ಗಾಂಧಿಯವರಿಗೆ “ಸ್ವಚ್ಛ ಭಾರತ”ದ ಮೂಲಕ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) 2021ರಿಂದ ಈ ವಿಶೇಷ ಅಭಿಯಾನವನ್ನು ಮುನ್ನಡೆಸಿಕೊಂಡು ಬರುತ್ತಿದೆ. ಇದರ ಭಾಗವಾಗಿ ನವೆಂಬರ್ 2025 ರಿಂದ ಆಗಸ್ಟ್ 2026ರವರೆಗೆ ಕೈಗೊಳ್ಳಲಾದ ‘ವಿಶೇಷ ಅಭಿಯಾನ 5.0’ ಅನ್ನು ನೀತಿ ಆಯೋಗ ಮತ್ತು ಅದರ ಅಧೀನ ಕಚೇರಿಗಳಾದ ಅಭಿವೃದ್ಧಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಕಚೇರಿ (DMEO), ಅಟಲ್ ಇನ್ನೋವೇಶನ್ ಮಿಷನ್ (AIM) ಹಾಗೂ ನವದೆಹಲಿಯ NILERD ಸಂಸ್ಥೆಗಳ ಸಹಯೋಗದಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಹಿಂದಿನ ಹಂತದ ಅಭಿಯಾನದಲ್ಲಿ ನೀತಿ ಆಯೋಗವು ಒಟ್ಟು 4,105 ಸಾರ್ವಜನಿಕ ಕುಂದುಕೊರತೆಗಳು, ಪ್ರಧಾನ ಮಂತ್ರಿಗಳ ಕಚೇರಿಯಿಂದ (PMO) ಬಂದಿದ್ದ 127 ಉಲ್ಲೇಖಗಳು, 34 ಮೇಲ್ಮನವಿಗಳು ಹಾಗೂ 5 ಸಂಸದೀಯ ಭರವಸೆಗಳನ್ನು ವಿಲೇವಾರಿ ಮಾಡಿದೆ. ಜೊತೆಗೆ ಹಳೆಯ ಕಡತಗಳನ್ನು ತೆರವುಗೊಳಿಸಿ ಸುಮಾರು 90 ಚದರ ಅಡಿ ಕಚೇರಿ ಸ್ಥಳವನ್ನು ಮುಕ್ತಗೊಳಿಸಲಾಗಿದ್ದು, ಸ್ಕ್ರ್ಯಾಪ್ ವಸ್ತುಗಳ ವಿಲೇವಾರಿಯ ಮೂಲಕ 1,96,905 ರೂಪಾಯಿಗಳ ಆದಾಯ ಗಳಿಸಲಾಗಿದೆ. ಇದೀಗ ಆರಂಭವಾಗುತ್ತಿರುವ ‘ವಿಶೇಷ ಅಭಿಯಾನ 6.0’ ಮೂಲಕ ಸಂಸತ್ ಸದಸ್ಯರು, ರಾಜ್ಯ ಸರ್ಕಾರಗಳು ಮತ್ತು ಸಚಿವಾಲಯಗಳ ನಡುವಿನ ಬಾಕಿ ವಿಷಯಗಳ ಇತ್ಯರ್ಥ, ಕಡತಗಳ ಸಮರ್ಥ ನಿರ್ವಹಣೆ ಹಾಗೂ ಕಚೇರಿ ಪರಿಸರವನ್ನು ಮತ್ತಷ್ಟು ಸ್ವಚ್ಛ ಹಾಗೂ ಜನಸ್ನೇಹಿಯಾಗಿಸಲು ನೀತಿ ಆಯೋಗ ಮುಂದಾಗಿದೆ.


More Stories
ಉತ್ತರಾಖಂಡದಲ್ಲಿ ಹೆಲಿಕಾಪ್ಟರ್ ದುರಂತ: ಆರು ಸಾವು
ಬಂಗಾಳಕೊಲ್ಲಿಯಲ್ಲಿ ‘ಅರ್ನಬ್’ ಆರ್ಭಟ
ಹಂಪಿ ಸಂರಕ್ಷಣೆ, ಸ್ಥಳೀಯರನ್ನು ಹೊರಗಿಟ್ಟರೆ ಜೀವಂತ ಪರಂಪರೆ ಉಳಿಯಲ್ಲ ಎಂದ ಐಕೋಮೋಸ್ ತಜ್ಞರು