October 13, 2026

Hampi times

Kannada News Portal from Vijayanagara

ಒಟಿಟಿಯಲ್ಲಿ ಹೊಸ ಚಿತ್ರಗಳ ಸುಗ್ಗಿ

ಮನರಂಜನಾ ಪ್ರಿಯರಿಗೆ ಈ ವಾರ ಭರ್ಜರಿ ಸಿನಿದಿಬ್ಬಣ ಎದುರಾಗಿದ್ದು, ಚಿತ್ರಮಂದಿರಗಳಲ್ಲಿ ಸದ್ದು ಮಾಡಿದ್ದ ಪ್ರಮುಖ ಸಿನಿಮಾಗಳು ವಿವಿಧ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಿವೆ. ನಟ ಸುದೀಪ್ ಅವರ ಸೋದರಳಿಯ ನಟನೆಯ ‘ಮ್ಯಾಂಗೊ ಪಚ್ಚ’ ಮತ್ತು ವಿಶ್ವವಿಖ್ಯಾತ ಅನಿಮೇಷನ್ ಸರಣಿಯ ಹೊಸ ಭಾಗ ‘ಟಾಯ್ ಸ್ಟೋರಿ 5’ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಣೆಗೆ ಲಭ್ಯವಾಗಿವೆ.

ನಯನತಾರಾ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್ ಕಾಮಿಡಿ ‘ಹಾಯ್’ ಜೀ5ನಲ್ಲಿ ಲಗ್ಗೆಯಿಟ್ಟಿದ್ದರೆ, ಧರ್ಮ, ಕುಟುಂಬ ಹಾಗೂ ಪ್ರೇಮಕಥೆಯ ಹಂದರ ಹೊಂದಿರುವ ‘ಹಬೀಬಿ’ ಸೋನಿ ಲಿವ್‌ನಲ್ಲಿ ಪ್ರಸಾರವಾಗುತ್ತಿದೆ. ಇನ್ನು ಹುಮಾ ಖುರೇಷಿ ನಟಿಸಿ ನಿರ್ಮಿಸಿರುವ ‘ಬೇಬಿ ಡು ಡೈ ಡು’ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಹಾಗೂ ಆಲಿಯಾ ಭಟ್ ನಿರ್ಮಾಣದ ಜೆನ್‌-ಜೀ ಕೇಂದ್ರಿತ ‘ಡೋಂಟ್ ಬಿ ಶೈ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆರಂಭಿಸಿವೆ.

Please follow and like us:

 

 

Translate »
[t4b-ticker]
error: Content is protected !!