https://
youtu.be/NHc6OMSu0K4?si=SI_K4goOPEgwo6h2
ಹೊಸದಿಲ್ಲಿ:

ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಸೆಪ್ಟೆಂಬರ್ 28 ರಿಂದ 30 ರವರೆಗೆ ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಗ್ರಾಹಕರ ಅನುಕೂಲಕ್ಕಾಗಿ ಇದೇ ಸೆಪ್ಟೆಂಬರ್ 27ರ ಭಾನುವಾರ ಎಲ್ಲಾ ಸಾರ್ವಜನಿಕ ವಲಯ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಸೆ.26ರ ನಾಲ್ಕನೇ ಶನಿವಾರ ಮತ್ತು 27ರ ಭಾನುವಾರದ ರಜೆಗಳ ಜತೆಗೆ ಮುಷ್ಕರ ಎದುರಾಗುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಭಾನುವಾರ ಎಲ್ಲಾ ಶಾಖೆಗಳು, ಎಟಿಎಂ ಲಿಂಕ್ ಕಚೇರಿಗಳು ಮತ್ತು ಕರೆನ್ಸಿ ಚೆಸ್ಟ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಆರ್‌ಬಿಐ ಅನುಮೋದನೆ ನೀಡಿದ್ದು, ಪ್ರಸ್ತಾವಿತ ಮುಷ್ಕರವನ್ನು ಕೈಬಿಡುವಂತೆ ನೌಕರರ ಒಕ್ಕೂಟಗಳಿಗೆ ಸರ್ಕಾರ ಮನವಿ ಮಾಡಿದೆ.


More Stories
ಗುಲ್ಬರ್ಗಾ ತೊಗರಿ ಬೇಳೆ ಮಾಲ್ಡೀವ್ಸ್ಗೆ ರಫ್ತು
ನಕಲಿ ಪನ್ನೀರ್ಗೆ ನಿಷೇಧ ಪ್ರಸ್ತಾಪ
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ