https://
youtu.be/NHc6OMSu0K4?si=SI_K4goOPEgwo6h2
ಹೊಸದಿಲ್ಲಿ: ದೇಶದ ಪಳೆಯುಳಿಕೆಯೇತರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 300 ಗಿಗಾವ್ಯಾಟ್ (GW) ಮೈಲಿಗಲ್ಲು ದಾಟಿದೆ. ಆದರೆ ಹೆಚ್ಚುತ್ತಿರುವ ಹಸಿರು ಇಂಧನ ಉತ್ಪಾದನೆಯ ಜತೆಗೆ ಸಮರ್ಥ ಗ್ರಿಡ್ ನಿರ್ವಹಣೆ ಹಾಗೂ ಪ್ರಸರಣ ಜಾಲದ ವಿಸ್ತರಣೆಯು ಇಂಧನ ಕ್ಷೇತ್ರದ ಮುಂದಿರುವ ಅತಿ ದೊಡ್ಡ ಸವಾಲಾಗಿದೆ ಎಂದು ಕೇಂದ್ರ ವಿದ್ಯುತ್ ಇಲಾಖೆ ಕಾರ್ಯದರ್ಶಿ ಪಂಕಜ್ ಅಗರ್ವಾಲ್ ಹೇಳಿದ್ದಾರೆ.

ಹೊಸದಿಲ್ಲಿಯಲ್ಲಿ ನಡೆದ 2ನೇ ಭಾರತೀಯ ವಿದ್ಯುತ್ ವಲಯ ಸಮಾವೇಶದಲ್ಲಿ ಮಾತನಾಡಿದ ಅವರು, ವಿಕಸಿತ ಭಾರತ 2047ರ ಗುರಿಗಳಿಗೆ ಪೂರಕವಾಗಿ ನೂತನ ರಾಷ್ಟ್ರೀಯ ವಿದ್ಯುತ್ ನೀತಿಯ ಕರಡು ಟಿಪ್ಪಣಿಯನ್ನು ಸಚಿವ ಸಂಪುಟದ ಪರಿಶೀಲನೆಗೆ ಕಳುಹಿಸಲಾಗಿದೆ ಎಂದರು. 2005ರ ಹಳೆಯ ನೀತಿಯ ಬದಲಾಗಿ ಪ್ರಸಕ್ತ ಸನ್ನಿವೇಶಕ್ಕೆ ತಕ್ಕಂತೆ ನೀತಿ ರೂಪಿಸಲಾಗುತ್ತಿದ್ದು, ವಿದ್ಯುತ್ ವಿತರಣಾ ಕಂಪನಿಗಳ ಆರ್ಥಿಕ ಸುಸ್ಥಿರತೆ ಹಾಗೂ ಕೈಗಾರಿಕೆಗಳಿಗೆ ಹಸಿರು ಇಂಧನ ಮುಕ್ತ ಪ್ರವೇಶಾವಕಾಶ (Open Access) ನೀಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.


More Stories
ಗುಲ್ಬರ್ಗಾ ತೊಗರಿ ಬೇಳೆ ಮಾಲ್ಡೀವ್ಸ್ಗೆ ರಫ್ತು
ನಕಲಿ ಪನ್ನೀರ್ಗೆ ನಿಷೇಧ ಪ್ರಸ್ತಾಪ
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ