https://youtu.be/NHc6OMSu0K4?si=SI_K4goOPEgwo6h2

ಸೀರೆ ನಮ್ಮ ಭಾರತ ದೇಶದ ಸಂಸ್ಕೃತಿಯ ಪ್ರತೀಕವಾಗಿದೆ. ಹೆಣ್ಣು ಮಕ್ಕಳಿಗೆ ಸೀರೆ ಎಂದರೆ ಬಲು ಪ್ರೀತಿ. ಚಿಕ್ಕ ಚಿಕ್ಕ ಹೆಣ್ಣು ಮಕ್ಕಳು ತಮ್ಮ ತಾಯಂದಿರ ಶಾಲು ಅಥವಾ ದುಪಟ್ಟಾದಲ್ಲಿ ಸೀರೆಯನ್ನು ಉಟ್ಟುಕೊಂಡು ಸಂಭ್ರಮಿಸುತ್ತಿರುತ್ತಾರೆ. ಸೀರೆಯ ಆಕರ್ಷಣೆ ಚಿಕ್ಕ ಮಕ್ಕಳನ್ನು ಬಿಟ್ಟಿಲ್ಲ.
ಸೀರೆಯು ಎಲ್ಲಾ ವಯೋಮಾನದ ಹೆಣ್ಣು ಮಕ್ಕಳಿಗೆ ಒಪ್ಪುವ ವಸ್ತ್ರ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಮುದುಕಿಯವರೆಗೆ ಹೆಂಗಳೆಯರು ಸೀರೆಯನ್ನು ಧರಿಸಿದರೆ ಚೆನ್ನಾಗಿ ಕಂಗೊಳಿಸುತ್ತಾರೆ. ಹದಿಹರೆಯದ ಹೆಣ್ಣು ಮಕ್ಕಳು ಸೀರೆಗೆ ಒಪ್ಪುವ ಕುಪ್ಪಸದೊಂದಿಗೆ ತೊಟ್ಟರೆ ಅವರ ಸೌಂದರ್ಯದ ಮೆರುಗು ಇಮ್ಮಡಿ ಯಾಗುತ್ತದೆ.
ಸೀರೆಗೆ ಬೇರೆಲ್ಲಾ ವಸ್ತ್ರಗಳಿಗಿಂತ ಪ್ರಮುಖವಾದ ಒಂದು ವಿಶೇಷವಿದೆ. ಸೀರೆಯ ಅಳತೆ ಬಹುಮಟ್ಟಿಗೆ ಒಂದೇ. ಕುಳ್ಳನೆ ಇರುವ ಹೆಂಗಳೆಯರಿAದ ಹಿಡಿದು ದೊಡ್ಡ ಮೈಕಟ್ಟನ್ನು ಹೊಂದಿರುವ ಹೆಂಗಸರಿಗೂ ಸೀರೆ ಅಳತೆ ಒಂದೇ ಆಗಿರುತ್ತದೆ. ಆದರಿಂದ ಬೇರೆಲ್ಲ ವಸ್ತ್ರಗಳಂತೆ ಇದನ್ನು ಧರಿಸಿ ದರ್ಜಿಯ ಹತ್ತಿರ ಮಾರ್ಪಡಿಸುವ ಗೋಜು ಇಲ್ಲ.
ಒಮ್ಮೊಮ್ಮೆ ಸೀರೆಯಿಂದ ನಾರಿಯ ಸೌಂದರ್ಯ ಹೆಚ್ಚಾಗುತ್ತದೋ ಅಥವಾ ಸೀರೆ ತೊಟ್ಟ ನಾರಿಯಿಂದ ಸೀರೆಯ ಮೆರಗು ಜಾಸ್ತಿಯಾಗುತ್ತದೆಯೋ ಎಂದು ಅಚ್ಚರಿಯಾಗುತ್ತದೆ. ಪ್ರಾಯಶಹ ಅದಕ್ಕೆ ಇರಬಹುದು ಹೆಣ್ಣು ನೋಡುವ ಶಾಸ್ತ್ರದಲ್ಲಿ ಹುಡುಗಿಯರು ಹೆಚ್ಚಾಗಿ ಸೀರೆಯನ್ನೇ ಉಟ್ಟುಕೊಳ್ಳು ತ್ತಾರೆ.
ಎಷ್ಟೇ ಮಾಡ್ರನ್ ಪತಿಯಾದರೂ ಆತನಿಗೆ ತನ್ನಾಕೆಯನ್ನು ಸೀರೆಯಲ್ಲಿ ನೋಡುಲು ಇಷ್ಟ ಇರುತ್ತದೆ. ಮಕ್ಕಳು ಕೂಡ ತನ್ನ ಅಮ್ಮನನ್ನು ಸೀರೆಯಲ್ಲೇ ಕಾಣಲು ಇಷ್ಟಪಡುತ್ತಾರೆ. ಸೀರೆ ಹೆಣ್ತನದ ಕಳಶಪ್ರಾಯ. ಗಂಡಸರಿಗೂ ತಮ್ಮ ಹೆಂಗಸರನ್ನು ಸೀರೆಯಲ್ಲೆ ಕಾಣಲು ಇಷ್ಟ, ಆದರೆ ಅವರನ್ನು ಸೀರೆ ಖರೀದಿಸಲು ಕರೆದುಕೊಂಡು ಹೋಗುವುದೆಂದರೆ ಬಹಳ ಕಷ್ಟ ಪಡುತ್ತಾರೆ.
ಏಕೆಂದರೆ ಹೆಂಗಸರ ಸೀರೆಯ ವ್ಯಾಪಾರವು ಮುಗಿಯುವುದೇ ಇಲ್ಲ. ಸೀರೆ ಅಂಗಡಿಯಲ್ಲಿರುವ ಅಷ್ಟು ಸೀರೆಯ ಸಂಗ್ರಹವನ್ನು ತೆಗೆಸಿ ಈ ಬಣ್ಣ ಚೆನ್ನಾಗಿದೆಯಾ ಈ ಪ್ಯಾಟರ್ನ್ ಚೆನ್ನಾಗಿದೆಯಾ? ಈ ಬಣ್ಣದಲ್ಲಿ ಬೇರೆ ಪ್ಯಾಟರ್ನ್ ಅಥವಾ ಇದೇ ಪ್ಯಾಟರ್ನ್ ನಲ್ಲಿ ಬೇರೆ ಬಣ್ಣ ಕೊಡಿ ಎಂದು ಬಗೆ ಬಗೆಯಲ್ಲಿ ಕೇಳುತ್ತಾ ಅಂಗಡಿಯವರಿಗೂ ಗಂಡAದಿರಿಗೂ ಸುಸ್ತು ಮಾಡುತ್ತಾರೆ. ಕೊನೆಗೆ ಅವರಿಗೆ ಮನಕ್ಕೊಪ್ಪುವ ಸೀರೆ ಸಿಗುವವರೆಗೂ ಅವರು ಅಂಗಡಿ ಬಿಟ್ಟು ಬರುವುದಿಲ್ಲ. ಅವರಿಗಾಗಿ ಕಾಯುವ ಗಂಡAದಿರ ತಾಳ್ಮೆಗೂ ಮಿತಿ ಇಲ್ಲ.
ಹೆಣ್ಣು ಮಕ್ಕಳ ಕಪಾಟಿನ ತುಂಬಾ ಸೀರೆ ಇದ್ದರೂ ಅವರಿಗೆ ತೃಪ್ತಿ ಇರುವುದಿಲ್ಲ. ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಬೇಕೆಂದರೆ ಹಬ್ಬ ಹರಿದಿನಗಳು ಬಂದರೆ ಸೀರೆಯನ್ನು ಖರೀದಿಸಲು ಕಾಯುತ್ತಾ ಇರುತ್ತಾರೆ. ಸೀರೆಗಳಲ್ಲಿ ಅನೇಕ ವಿಧಗಳಿವೆ. ಮುಖ್ಯವಾಗಿ ಅದರಲ್ಲಿ ಸೀರೆನಿ ಯುವ ಪ್ರಾಂತ್ಯದ ಹೆಸರಿನ ಮೂಲಕ ವಿಂಗಡಿಸಲಾಗುತ್ತದೆ. ಇದರಲ್ಲಿ ಮುಖ್ಯವಾದ ವೆಂದರೆ
ಮೈಸೂರ್ ಸಿಲ್ಕ್ ಸೀರೆ
ತಮಿಳುನಾಡಿನ ಕಾಂಜಿ ವರಂ ಸೀರೆ
ಮಹಾರಾಷ್ಟ್ರದ ಸೌವಾರಿ ಸೀರೆ
ಪಶ್ಚಿಮ ಬಂಗಾಳದ ತಂಟ್ಟ್ ಸಿಲ್ಕ್ ಸೀರೆ
ವಾರಣಾಸಿಯ ಬನಾರ್ಸಿ ಸೀರೆ
ಲಕ್ನೋದ ಚಿಕಂಕರಿ ಸೀರೆ
ಒಡಿಶಾದ ಬೊಮ್ಮೈ ಸೀರೆ
ಮಧ್ಯಪ್ರದೇಶದ ಚಾಂದೇರೀ ಸೀರೆ
ಕೇರಳದ ಕಸವು ಸೀರೆ
ಅಸ್ಸಾಂನ ಮುಗ ಸೀರೆ
ಪಂಜಾಬ್ ನ ಫುಲ್ ಕರಿ ಸೀರೆ
ತೆಲಂಗಾಣದ ಪೋಚಂಪಲ್ಲಿ ಸೀರೆ
ಇದಲ್ಲದೆ ಕಾಟನ್ ಸೀರೆ ಶಿಫಾನ್ ಜಕಾಡ್, ಕ್ರೇಪ್ ಇಳಕಲ್ ಮುಂತಾದ ಬಗೆಬಗೆಯ ಸೀರೆಗಳಿವೆ

ಸೀರೆಗಳಲ್ಲಿ ವಿಧಗಳಿರುವಂತೆಯೇ ಸೀರೆ ಉಡುವುದರಲ್ಲಿಯೂ ಬಗೆ ಬಗೆಯ ವಿಧಾನಗಳಿವೆ. ಕರ್ನಾಟಕದಲ್ಲಿ ಕೊಡಗಿನ ಹೆಣ್ಣು ಮಕ್ಕಳು ಅವರು ಉಡುವ ಸೀರೆಯ ಶೈಲಿಯಲ್ಲೇ ಗುರುತು ಹಿಡಿಯಬಹುದು. ಲಂಬಾಣಿಗರು ಮಾರ್ವಾಡಿಗಳು ತಮ್ಮ ಸೀರೆ ಉಡುವ ವಿಧಾನದಲ್ಲಿ ತಮ್ಮದೇ ಆದ ಸ್ವಂತಿಕೆ ಹೊಂದಿದ್ದಾರೆ. ಸೀರೆ ಉಡುವ ವಿಧಾನವು ಅವರವರ ಪ್ರಾಂತ್ಯದ ಅಸ್ಮಿತೆಯನ್ನು ಪರಿಚಯಿಸುತ್ತದೆ.
ಹೆಣ್ಣು ಮಕ್ಕಳಿಗೆ ತಾವು ತೆಗೆದುಕೊಂಡ ಸೀರೆಗಿಂತ ಬಂಧುಗಳು ಅಣ್ಣಂದಿರು ತಂದೆ ತಾಯಿಗಳು ಗಂಡ ಕೊಟ್ಟ ಸೀರೆ ಭಾವನಾತ್ಮಕವಾಗಿ ಸಂಬAಧವನ್ನು ಬೆಸೆದಿರುತ್ತದೆ. ಸೀರೆಯು ಜವಳಿ ಉದ್ಯಮದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಲಕ್ಷಗಟ್ಟಲೆ ಸೀರೆಗಳು ವಿವಿಧ ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತದೆ. ಇದರಲ್ಲಿ ಕೈಯಿಂದಲೇ ನೇಯ್ದ ನೇಕಾರರ ಪರಿಶ್ರಮ ಇದೆ. ಈ ರೀತಿಯ ಕೈಮಗ್ಗದ ಸೀರೆಗಳಿಗೆ ಅಪಾರ ಬೇಡಿಕೆ ಇದೆ.
ಮದುವೆಗಳು ಬಂತೆAದರೆ ಸೀರೆಗಳ ಖರೀದಿಯ ಭರಾಟೆ ಬಹಳ ಜೋರಾಗಿರುತ್ತದೆ. ಮದುವೆಗೆಂದೆ ಬಗೆ ಬಗೆಯ ಸೀರೆಗಳನ್ನು ಖರೀದಿಸಲಾಗುತ್ತದೆ. ವಧುವಿ ಗಂತೂ ಲಕ್ಷಗಟ್ಟಲೆ ಬೆಲೆಯ ಬಗೆ ಬಗೆಯ ಸೀರೆಗಳನ್ನು ಖರೀದಿಸಲಾಗುತ್ತದೆ ಹಾಗೂ ಉಡುಗೊರೆ ರೂಪದಲ್ಲೂ ಕೊಡಲಾಗುತ್ತದೆ.
ಹೆಣ್ಣು ಮಕ್ಕಳಿಗಂತೂ ಮದುವೆಯ ದಾರೆಗೆಂದು ಹಾಗೂ ಮುಹೂರ್ತಕ್ಕೆಂದು ಹೀಗೆ ಎರಡು ಅಥವಾ ಮೂರು ಬಾರಿ ಸೀರೆ ಉಟ್ಟು ಬದಲಾಯಿಸಿಕೊಂಡು ಸಂಭ್ರಮಿಸಿ ಆನಂದ ಪಡುತ್ತಾರೆ. ಮದುವೆಯೆಂದರೆ ತಮ್ಮ ಸೀರೆಯ ಭಂಡಾರದ ಪ್ರದರ್ಶನವೂ ಹೌದು. ಹೆಣ್ಣು ಮಕ್ಕಳು ಬಗೆಬಗೆಯ ರಂಗಿನ ಸೀರೆ ಉಟ್ಟರೆ ಮದುವೆ ಒಂದು ಕಳೆ ಶೋಭೆ ಎಂತಾಗಿದೆ ಈಗಿನ ಪರಿಸ್ಥಿತಿ.
ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಭರಣ ಸಂದರ್ಭದಲ್ಲಿ ಕೃಷ್ಣನು ಅಕ್ಷಯಂಬರದ ರೂಪದಲ್ಲಿ ಸೀರೆಗಳ ರಾಶಿಯನ್ನೇ ದ್ರೌಪದಿಗೆ ಕೊಟ್ಟು ಆಕೆಯ ಮಾನ ಕಾಪಾಡಿದ . ಭಗವಂತನ ಕೃಪೆಯಿಂದ ಮಾನ ಕಾದದ್ದು ಅಲ್ಲದೆ ಬಗೆ ಬಗೆಯ ಸೀರೆಗಳನ್ನು ಒಂದೇ ಬಾರಿಗೆ ಊಟ ಪುಣ್ಯವೂ ದ್ರೌಪದಿಗೆ ಲಭಿಸಿತ್ತು ಎಂದರೆ ಅತಿಶಯೋಕ್ತಿ ಅಲ್ಲ.
ಸೀರೆ ಬಹು ಉಪಯೋಗಿ. ಚಿಕ್ಕ ಮಕ್ಕಳಿಗೆ ಸೀರೆಯನ್ನು ಜೋಲಿಯಾಗಿ ಕಟ್ಟಿ ಮಲಗಿಸುತ್ತಾರೆ. ಇದು ಅವರಿಗೆ ತಾಯಿಯ ಗರ್ಭದ ಅನುಭವವನ್ನು ತರುತ್ತದೆ. ಸೀರೆಯ ಸೆರುಗಂತೂ ನಾನಾ ಬಗೆಯ ಕೆಲಸಗಳಿಗೆ ಉಪಯೋU Àವಾಗುತ್ತದೆ. ದಿನವಿಡೀ ಅಡುಗೆ ಮನೆಯ ಕೆಲಸದಿಂದ ದಣಿದ ಹೆಣ್ಣು ಮಕ್ಕಳು ಬೆವರು ಹೊರಿಸಿಕೊಳ್ಳಲು ಸೆರುಗೆ ಸಹಾಯಕ್ಕೆ ಬರುತ್ತದೆ.
ಇಂದಲ್ಲ ಮಕ್ಕಳ ಕಣ್ಣೀರು ಒರೆಸಲು, ಬೇಸರವಾದರೆ ಮುಖ ಮುಚ್ಚಿಕೊಂಡು ಅಳಲು, ಹಾಗೂ ಯಾವುದಾದರೂ ಪೂಜೆಯಲ್ಲಿ ದಾನಕ್ಕೆ ಕೂತಾಗ ತಮ್ಮ ಉಡಿಗೆ ಅಕ್ಕಿಯನ್ನು ತೆಗೆದುಕೊಳ್ಳಲು ಸೀರೆಯ ಸೇರುಗೆ ಉಪಯೋಗವಾಗುತ್ತದೆ. ಮಕ್ಕಳು ಬೆದರಿದರೆ ಅಡಗುವುದೇ ಅಮ್ಮನ ಸೆರಗಿನ ಹಿಂದೆ. ಅಮ್ಮನ ಸೀರೆಯಲ್ಲೇ ಮಕ್ಕಳಿಗೆ ಲಂಗ ಫ್ರಾಕ್ ಹೊಲೆದು ಹಾಕಿದ್ದ ಹಲವು ಸಂದರ್ಭಗಳಿವೆ.
ಹಳೆ ಸೀರೆಗಳನ್ನು ಸೇರಿಸಿ ಹೊಲೆದು ಕೌದಿಯನ್ನು ಮಾಡಿ ಮಲಗಬೇಕಾದರೆ ಹಾಸಲು ಹೊದೆಯಲು ಬಳಸುತ್ತಾರೆ.ಇನ್ನು ಸೀರೆಯನ್ನು ಸೌಂದರ್ಯವನ್ನು ವರ್ಣಿಸಲು ಹಲವು ಕಾವ್ಯಗಳೇ ರಚಿತವಾಗಿವೆ ಚಲನಚಿತ್ರ ಗಳಂತೂ ಸೀರೆ ಉಟ್ಟ ನೀರೆಯರ ಹಿಂದೆಯೇ ಬಿದ್ದಿದೆ. ಒಟ್ಟಿನಲ್ಲಿ ಸೀರೆ ಉಡಲು ಕೊಂಚ ಭಾರ ಆದರೆ ಇದರ ಮಹಿಮೆ ಅಪಾರ
– ಚೇತನ ಭಾರ್ಗವ ಅರಮನೆತೋಟ, ಬೆಂಗಳೂರು





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಒನಕೆ ಓಬವ್ವ.. ಅಸಾಮಾನ್ಯ ಸಾಹಸಿ ಮಹಿಳೆ
ಗುಡೇಕೋಟೆ ಇದು ಬರೀ ಊರಲ್ಲ, ಬದುಕಿನ ನೆನಪಿನ ಬುತ್ತಿಯನ್ನು ಹೊತ್ತೊಯ್ಯುವ ತೇರು