December 15, 2025

Hampi times

Kannada News Portal from Vijayanagara

ಮಕ್ಕಳನ್ನು ಬೆಳೆಸುವುದಕ್ಕೆ ಪಾಲಕರಿಗೆ ಶಿಕ್ಷಣ ಬೇಕೆ?..

https://youtu.be/NHc6OMSu0K4?si=SI_K4goOPEgwo6h2

 

‘ಮಕ್ಕಳು ತೊಡೆ ಮೇಲೆ ಆಡಿದರ ಬಡತನವೆಲ್ಲ ಬಯಲಾಗ’ ಅಂಬೋ ಜನಪದರ ಮಾತುಗಳು ಪಾಲಕರ ಮತ್ತು ಮಕ್ಕಳ ನಡುವಿನ ಸಂಬAಧವನ್ನು ನಿರೂಪಿಸುತ್ತದೆ. ನೆಲದ ದುಡಿಮೆಯೇ ಗಪ್ಪಗೆ ನಿಂತ ಕಾಲದಲ್ಲಿ ಕೂಡು ಕುಟುಂಬಗಳು ಮಹತ್ವವನ್ನು ಪಡೆದಿದ್ದವು. ಇಲ್ಲಿ ಪ್ರತಿಯೊಂದು ಸಂಸಾರಕ್ಕೂ ಹತ್ತು ಮಕ್ಕಳು ಸಾಮಾನ್ಯವೆನ್ನುವಂತೆ ಇತ್ತು. ಇಷ್ಟೊಂದು ಮಕ್ಕಳನ್ನು ಬೆಳೆಸುವ ಕಾರ್ಯವನ್ನು ಪಾಲಕರು ಮಾಡುತ್ತಿದ್ದರು. ಬಹುಪಾಲು ಜನರಲ್ಲಿ ಶ್ರೀಮಂತಿಕೆ ಅನ್ನೋದು ಇರಲಿಲ್ಲ. ನಿತ್ಯ ದುಡಿದು ಉಣ್ಣಬೇಕಾದ ಸ್ಥಿತಿಯಲ್ಲಿ ಮಕ್ಕಳನ್ನು ಹೆತ್ತು ಪೊರೆಯಬೇಕಾದ ಪಾಲಕರಿಗೆ ಇದ್ದ ತಿಳಿವಳಿಕೆ ನೆಲದ ಪರಂಪರೆಗೆ ದಕ್ಕಿದ್ದೇ ಆಗಿತ್ತು. ತಾಯಿ, ತಂದೆ, ಮನೆಯಲ್ಲಿನ ಹಿರಿಯ ಜೀವಗಳೆಲ್ಲ ಮಕ್ಕಳನ್ನು ತಿದ್ದುವ ತೀಡುವ ಕಾಯಕ ಮಾಡುತ್ತಿದ್ದರು. ಇಲ್ಲಿ ಮಕ್ಕಳನ್ನು ಬೆಳೆಸುವುದಕ್ಕೆ ಯಾವುದೇ ಪಠ್ಯಗಳು ಇರಲಿಲ್ಲ. ಪರಂಪರೆಯಲ್ಲಿ ಬಂದ ವಿಚಾರಗಳಾದ ನ್ಯಾಯ-ನೀತಿ, ಆಚಾರ-ವಿಚಾರ, ದೇವರು-ಧರ್ಮ, ಸತ್ಯಗಳ ಜೊತೆಯಲ್ಲಿ ಬದುಕಿನ ತಿಳಿವಳಿಕೆಯನ್ನು ಗಟ್ಟಿಯಾಗಿ ಮನಸಿಗೆ ದಾಂಟಿಸುವ ಕಾರ್ಯವನ್ನು ಮನೆಯ ಸದಸ್ಯರು ನಿಗವಾಗಿ ಮಾಡುತ್ತಿದ್ದರು. ಇಲ್ಲಿ ಮಕ್ಕಳನ್ನು ಬೆಳೆಸುವ ಸಂಸ್ಕಾರ ನೀಡುವ ಅಭಿವ್ಯಕ್ತಿಗೆ ಕೊಡುಗೆ ನೀಡುತ್ತಿದ್ದವರು ಅಜ್ಜ-ಅಜ್ಜಿಯಂತಹ ಹಿರಿಜೀವಗಳೇ ಆಗಿದ್ದರು. ನೆಲದ ಪರಂಪರೆಯ ಸತ್ವವನ್ನು ಮಕ್ಕಳ ಮೈಗೆ ಹಿಡಿಸುವ ಕಾರ್ಯ ಮಾಡುತ್ತಿದ್ದರಿಂದ ತಂದೆ-ತಾಯಿ, ಗುರು-ಹಿರಿಯರು, ದೇವರು, ನಂಬಿಕೆ ಇತ್ಯಾದಿ ಗುಣಾತ್ಮಕವಾದ ಮೀಮಾಂಸೆಗಳು ಮಕ್ಕಳ ನಡವಳಿಕೆಯಲ್ಲಿ ನಿಂತು ನಡೆಯುತ್ತಿತ್ತು. ಲೋಕವನ್ನು ಅರ್ಥೈಸುವ ಕಾರ್ಯವನ್ನು ಪಾಲಕರು ಮಾಡುತ್ತಿದ್ದರು. ತನ್ನ ಮಕ್ಕಳು ಮುಂದೆ ಏನಾಗಬೇಕು ಅನ್ನೋ ವಿವೇಚನೆಯೇ ಸಾಂಸ್ಕೃತಿಕವಾದ ಚಲನಶೀಲತೆಗೆ ದಾರಿಯಾಗಿತ್ತು. 1410ರ ಮಧುರಕವಿಯ ಲಕ್ಷ್ಮೀಧರ ಅಮಾತ್ಯನ ಶಾಸನವು ಹೇಳುವಂತೆ ‘ಕರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು, ದೇವಾಲಯವನ್ನು ನಿರ್ಮಿಸು, ಸೆರೆಯನ್ನು ಸಿಕ್ಕ ಅನಾಥರನ್ನು ಬಿಡಿಸು, ನಂಬಿದ ಮಿತ್ರರಿಗೆ ನೆರವು ನೀಡು, ಶಿಷ್ಟರನ್ನು ರಕ್ಷಿಸು” ಎನ್ನುವ ತಾಯಿಯೊಬ್ಬಳು ಮಗುವನ್ನು ಹಾಲುಣಿಸುತ್ತ ಸಂಸ್ಕಾರ ನೀಡುವ ಕ್ರಮವೇ ಮಾದರಿಯ ರೂಪವಾಗಿ ಕಾಣಿಸುತ್ತದೆ.

ನಾವೆಲ್ಲರೂ ಬದುಕು ಮಾಡುತ್ತಿರುವ ಆಧುನಿಕ ಪರಿಸರ ಮತ್ತು ಪ್ರಜ್ಞೆಯು ಮಕ್ಕಳನ್ನು ಪಾಲನೆ ಮಾಡುವುದೇ ಬಹುದೊಡ್ಡ ಸಾಧನೆಯ ಕಾಯಕದಂತೆ ಆಗಿಬಿಟ್ಟಿದೆ. ಅಣು ಕುಟುಂಬದಲ್ಲಿ ಈಗ ಒಂದು, ಹೆಚ್ಚೆಂದರೇ ಎರಡು ಮಕ್ಕಳು ಹುಟ್ಟಿ ಬೆಳೆಯುತ್ತಿದ್ದಾರೆ. ಈ ಬೆರಳೆಣಿಕೆಯ ಮಕ್ಕಳನ್ನು ಲೋಕದದಲ್ಲಿ ಉತ್ತಮರು ಅಂತ ಬೆಳೆಸುವುದೇ ಪಾಲಕರಿಗೆ ದೊಡ್ಡ ಸವಲಾಗಿದೆ. ನಮ್ಮ ಜೊತೆಯಲ್ಲಿ ಜತನವಾಗಿರುವ ನೆಲದ ಸತ್ವವನ್ನು ಒಳಗೊಂಡಿರುವ ಸಂಸ್ಕಾರದ ಮಾದರಿಗಳು ಆಧುನಿಕ ಎಂದೂ ಬದುಕುತ್ತಿರುವ ನಮಗೆ ಮಹತ್ವ ಅಂಬೋ ತಿಳಿವಳಿಕೆಯೂ ದಕ್ಕುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಬದುಕಿನ ಸಾರವನ್ನು ಹೇಳುವುದಕ್ಕೆ ಕುಟುಂಬದಲ್ಲಿ ಹಿರಿಜೀವಗಳೇ ಇರುವುದಿಲ್ಲ. ಇಲ್ಲಿ ಮಕ್ಕಳ ಸಂಸ್ಕಾರದ ಹೊಣೆಯನ್ನು ತಾಂತ್ರಿಕ ಸಾಧನಗಳೇ ಹೊತ್ತುಕೊಂಡAತೆ ಕಾಣುತ್ತದೆ. ಇದು ಮಕ್ಕಳ ಪೂರ್ಣತೆಯನ್ನು ಪಲ್ಲಟಿಸಿ ನಮ್ಮ ಆಚಾರ-ವಿಚಾರ ನಂಬಿಕೆಯನ್ನು ಕಳೆಯುವಂತೆ ಮಾಡಿದೆ.

ಸತ್ವರಹಿತವಾದ ಜೀವನ ಮೀಮಾಂಸೆ ಮಕ್ಕಳ ಮನಸ್ಸಿನಲ್ಲಿ ನಿಂತು ನಡೆಯುತ್ತಿರುವುದನ್ನು ನಾವು ಗ್ರಹಿಸಿದಾಗ ಒಮ್ಮೆ ಭಯವಾಗುತ್ತದೆ. ಶಿಕ್ಷಣದ ಜೊತೆಯಲ್ಲಿ ನೂರೆಂಟು ಸೌಲಭ್ಯಗಳು ಇದ್ದರೂ ಘನವಾದ ತಿಳಿವಳಿಕೆಗಳು ಪಕ್ವವಾಗಿ ಮಕ್ಕಳ ಮನೋಭೂಮಿಕೆಯಲ್ಲಿ ನಿಂತು ನಡೆಯುತ್ತಿಲ್ಲ. ಏಕೆ ಎನ್ನುವುದನ್ನು ಚಿಂತಿಸುವ ಅಗತ್ಯವಿದೆ. ಮುಖ್ಯವಾಗಿ ಪಾಲಕರಿಗೆ ದುಡಿಮೆಯೇ ಪ್ರಧಾನವಾಗಿರುವುದರಿಂದ ತನ್ನ ಮಕ್ಕಳನ್ನು ನಿಗವಾಗಿ ಗಮನಿಸಿಕೊಂಡು ಅವರೊಂದಿಗೆ ಸಮಯವನ್ನು ಕಳೆಯುವುದಕ್ಕೆ ಸಾಧ್ಯವಾಗುತ್ತಿಲ್ಲ; ಆಧುನಿಕತೆಯ ಅಭಿವ್ಯಕ್ತಿಯ ನಿರೂಪಣೆಗಳು ತಾಂತ್ರಿಕತೆಯನ್ನು ಜನಮುಖಿಯಾಗಿ ಚಲನೆಯನ್ನು ಪಡೆದಿರುವುದರಿಂದ ಮತ್ತು ಅದೇ ಲೋಕದಲ್ಲಿ ಉನ್ನತವಾದದೆಂದು ಬಗೆದಿರುವ ಕಾರಣ ಪಾಲಕರಿಗೂ ಸಂಸ್ಕಾರದ ಚಿಂತನೆಯಲ್ಲಿ ಗೊಂದಲ ಹುಟ್ಟಿಕೊಂಡು ಯಾವುದನ್ನು ತಿಳಿವಳಿಕೆಯ ಭಾಗವಾಗಿಸಬೇಕು ಅನ್ನೋದೆ ಅರಿವಿಗೆ ದಕ್ಕುತ್ತಿಲ್ಲ; ಮಕ್ಕಳು ಈಗ ತಾಂತ್ರಿಕ ಜಗತ್ತನ್ನು ಬಿಗಿಯಾಗಿ ಅಪ್ಪಿಕೊಂಡಿರುವ ನೆಲೆಯಲ್ಲಿ ಅವರಿಗೆ ನೆಲದ ಪರಂಪರೆಯ ಸತ್ವಗಳು ರುಚಿಸುವುದೂ ಇಲ್ಲ; ಈ ನಡುವೆ ನಾವು ಮಕ್ಕಳನ್ನು ಬೆಳೆಸುವ ಕ್ರಮದಿಂದ ಪಲ್ಲಟಗೊಂಡು ದಾರಿ ತಪ್ಪಿದ್ದೇವೆ ಅನ್ನಿಸುತ್ತದೆ.

 

ನಮ್ಮ ಪರಿಚಯದ ಒಬ್ಬ ಹುಡುಗ ಪಿಯುಸಿಯಲ್ಲಿ ಓದು, ಬರೆಹ ಮಾಡಿಕೊಂಡು ಇದ್ದ. ಅವನ ನಡವಳಿಕೆಗಳು ಅಷ್ಟೊಂದು ಸರಿ ಇರಲಿಲ್ಲ. ಹೊಡೆದಾಟ, ಪ್ರೀತಿ-ಪ್ರೇಮದ ಮಾತುಕತೆಯನ್ನೇ ಅಪ್ಪಿಕೊಂಡು ನಡೆದಿದ್ದ. ಈ ನಡುವೆ ಕಾಲೇಜಿನಿಂದ ಅವನ ಪಾಲಕರಿಗೂ ಈ ವಿಚಾರ ತಿಳಿಸಿ ಬುದ್ಧಿ ಹೇಳಿದರು. ಆದರೆ ಪಾಲಕರು ಅವನಿಗೆ ಬೈದು ಸರಿಯಾದ ತಿಳುವಳಿಕೆಯನ್ನು ಹೇಳಿ ಅವನ ನಡೆಯನ್ನು ತಿದ್ದವುದಕ್ಕೆ ಹೆದರುತ್ತಾರೆ. ‘ಅಯ್ಯೋ ಒಬ್ಬನೇ ಮಗ, ಏನಾದರೂ ಹೆಚ್ಚು ಕಮ್ಮಿಯಾದರೆ ಹೇಗೋ ಏನೋ ಅನ್ನುವ ಯೋಚನೆಯೇ ಪ್ರಧಾನವಾಗಿ ಅವರೊಳಗೆ ಇದೆ. ಇತ್ತು ಮಕ್ಕಳು ಪಾಲಕರ ಮಾತನ್ನು ಕೇಳುವುದಕ್ಕೆ ನಿಂತಿಲ್ಲ ಮತ್ತು ಯಾವುದು ಸರಿ, ಯಾವುದು ತಪ್ಪು ಅನ್ನೋ ವಿವೇಕವೂ ಅವರಿಗೆ ಸಿಗುತ್ತಿಲ್ಲ. ಪಾಲಕರು ತನ್ನ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಅನ್ನೋ ಅರಿವು ಅವರಿಗೆ ಇದ್ದರೂ ಅದನ್ನು ಮಕ್ಕಳ ಮುಂದೆ ಹೇಳುವುದಕ್ಕೆ ಧೈರ್ಯವನ್ನೇ ಕಳೆದುಕೊಂಡು ಬಿಟ್ಟಿದ್ದಾರೆ.

ಮಕ್ಕಳನ್ನು ಬೆಳೆಸುವುದಕ್ಕೆ ನಮ್ಮ ನೆಲದ ಪರಂಪರೆಯಲ್ಲಿಯೇ ಅನೇಕ ಸತ್ವಗಳು ಉಂಟು. ಮಕ್ಕಳನ್ನು ಭಯ ಪಡಿಸುವುದಕ್ಕೆ ದೈಹಿಕವಾದ ಬಲಬೇಕು ಅನ್ನೋ ಗ್ರಹಿಕೆಯನ್ನು ಕೈಬಿಟ್ಟು ಲೋಕವನ್ನು ಅರ್ಥ ಮಾಡಿಕೊಳ್ಳುವ ಮತ್ತು ಅರ್ಥೈಸುವ ತಿಳಿವಳಿಕೆಯನ್ನು ಮಕ್ಕಳಿಗೆ ನೀಡಬೇಕು. ತಪ್ಪು ಸರಿಗಳನ್ನು ಹೇಳಿಕೊಡಬೇಕು. ಮನೆಯ ಹಿರಿಯ ವ್ಯಕ್ತಿಗಳ ಜೊತೆಯಲ್ಲಿ ಮಕ್ಕಳನ್ನು ಮಾತುಕತೆಯಾಡುವುದಕ್ಕೆ ಬಿಡಬೇಕು. ತಾಂತ್ರಿಕವಾದ ಅಭಿವ್ಯಕ್ತಿಯ ಕ್ರಮಗಳೇ ಬದುಕಿನ ನಿರೂಪಣೆಗಳಲ್ಲ ಅನ್ನೊದನ್ನು ಮಕ್ಕಳಿಗೆ ಹೇಳಿಕೊಡವ ಎದೆಗಾರಿಕೆಯನ್ನು ನಾವು ಬೆಳೆಸಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಮಕ್ಕಳು ಸಾಯುತ್ತೇನೆ, ಮನೆ ಬಿಟ್ಟು ಹೋಗುತ್ತೇನೆ ಅಂತ ಹೇಳಿದರೆ ಪಾಲಕರು ಅಂಜುತ್ತಿರಲಿಲ್ಲ. ಬಾ ನೋಡುವ ಅಂತ ಕರೆದುಕೊಂಡು ಹೋಗಿ ಬದುಕಿನ ತಿಳಿವಳಿಕೆಯನ್ನು ಹೇಳುತ್ತಿದ್ದರು. ಪ್ರೀತಿಯಷ್ಟೇ ಹೊಡೆತಗಳು ಮೌಲ್ಯಯುತವಾದ ದಾರಿಯನ್ನು ಕಟ್ಟುವಂತೆ ಮಾಡುತ್ತಿತ್ತು. ಹೀಗಾಗಿ ನಮ್ಮ ಹಿರಿಜೀವಗಳು ಹಾಕಿಕೊಟ್ಟ ಸಂಸ್ಕಾರದ ಮಾದರಿಯನ್ನೇ ನಾವು ಮಕ್ಕಳ ಮನಸ್ಸಿಗೆ ದಾಂಟಿಸಬೇಕು. ನಾವು ತುಸು ಎಚ್ಚರ ತಪ್ಪಿದರೂ ಮಕ್ಕಳು ನಮ್ಮ ದಾರಿಯಿಂದ ದೂರಕ್ಕೆ ಸರಿದು ಬಿಡುತ್ತಾರೆ.

  • ಡಾ. ಸುಬ್ರಹ್ಮಣ್ಯ ಸಿ ಕುಂದೂರು

 

 

 

 

 

 

 

 

ಜಾಹೀರಾತು
error: Content is protected !!