February 9, 2026

Hampi times

Kannada News Portal from Vijayanagara

ಗೋವಾದಲ್ಲಿ ಶಿಕ್ಷಕರಿಗೆ ಅಂತರರಾಜ್ಯ ಕಲಾ ತರಬೇತಿ

https://youtu.be/NHc6OMSu0K4?si=SI_K4goOPEgwo6h2

 

  • ವಸ್ತು ಸಂಗ್ರಹಾಲಯಗಳು ಜೀವಂತ ತಾಣಗಳು

  • ಬೋಧನೆಯಲ್ಲಿ ಹೊಸ ಆಲೋಚನೆಗಳ ಅಗತ್ಯ

ಕಾನಕೋನ್ (ಗೋವಾ): ವಸ್ತು ಸಂಗ್ರಹಾಲಯ ಎನ್ನುವುದು ಕೇವಲ ನಿರ್ಜೀವ ವಸ್ತುಗಳ ತಾಣವಲ್ಲ, ಅದು ನಮ್ಮ ಪ್ರಾಚೀನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ಜೀವಂತ ತಾಣವಾಗಿದೆ ಎಂದು ಬೆಂಗಳೂರಿನ ವಸ್ತು ಸಂಗ್ರಹಾಲಯಗಳ ಸಂಪನ್ಮೂಲ ವ್ಯಕ್ತಿ ಸಂಜನಾ ರಂಗನ್ ತಿಳಿಸಿದರು.

ಗೋವಾದ ಕಾನಕೋನ್ ಫ್ಲ್ಯಾಮಿಂಗೋ ಥೇಟರ್ ಲ್ಯಾಬ್‌ನಲ್ಲಿ ‘ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್'(IFA) ಬೆಂಗಳೂರು ಹಾಗೂ ‘ಇಂಟರ್ ಗ್ಲೋಬ್ ಫೌಂಡೇಷನ್’ ಸಹಯೋಗದಲ್ಲಿ ಕಲಿಕಲಿಸು ವಿಭಾಗದಿಂದ ಗೋವಾ ಮತ್ತು ಕರ್ನಾಟಕದ ಆಯ್ದ ಶಿಕ್ಷಕರಿಗೆ, ಕಲಾವಿದರಿಗೆ  ಆಯೋಜಿಸಲಾಗಿದ್ದ ನಾಲ್ಕು ದಿನಗಳ ಅಂತರರಾಜ್ಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಶನಿವಾರ  ಮಾತನಾಡಿದರು. ಪರಂಪರೆಯನ್ನು ಅರಿಯದೆ ಸದೃಢ ಭವಿಷ್ಯವನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

 

IFA ‘ಕಲಿಕಲಿಸು’ ವಿಭಾಗದ ಮುಖ್ಯಸ್ಥ ಟಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಈ ಯೋಜನೆಯು ಸರ್ಕಾರಿ ಶಾಲಾ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಬೋಧನೆಯಲ್ಲಿ ಮತ್ತು ವರ್ಗಕೋಣೆಗಳಲ್ಲಿ ಹೊಸ ಆಲೋಚನೆಗಳನ್ನು ಮೂಡಿಸುವ ಗುರಿ ಹೊಂದಿದೆ ಎಂದರು.

ಮತ್ತೊಬ್ಬ ಮುಖ್ಯಸ್ಥೆ ರಾಧಿಕಾ ಭಾರಧ್ವಾಜ್ ಮಾತನಾಡಿ, ತರಬೇತಿ ಪಡೆದ ಶಿಕ್ಷಕರು ನೀಡುವ ಸೃಜನಶೀಲ ಯೋಜನೆಗಳಿಗೆ ಸಂಸ್ಥೆಯು ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಕಲಾವಿದ ಅರುಣ ಗೊಪ್ಪೇನಹಳ್ಳಿ ಅವರು ಕಲಾ ಶಿಕ್ಷಣವು ಶಾಲಾ ಕೋಠಡಿಯ ಆಚೆಗಿನ ಜಗತ್ತಿನೊಂದಿಗೆ ವಿದ್ಯಾರ್ಥಿಗಳ ಸಂಬಂಧವನ್ನು ಗಟ್ಟಿಗೊಳಿಸುವ ಸೃಜನಶೀಲ ಮಾಧ್ಯಮವಾಗಿದೆ ಎಂದು ವಿವರಿಸಿದರು. ನಾಲ್ಕು ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಮುರಳಿಧರ ಎಚ್. ವಿ. ಓರೇಗಾಮಿ,‌ ಕೇಥಾನ್‌ ಜಾಧವ್‌ ಅವರು ಅನ್ವಯಿಕ ರಂಗಭೂಮಿ, ಪಕ್ಷಿ ಅಧ್ಯಯನ, ಮಾಡಲ್ ಮೇಕಿಂಗ್, ಶಾಲಮ್‌ ಸನ್ನುಥಾ ಗಣಿತದಲ್ಲಿ ಸಂಗೀತದಂತಹ ವಿಶಿಷ್ಟ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಕೊಪ್ಪಳದ ಕಿಶನರಾವ್‌ ಕುಲಕರ್ಣಿ, ವಿಜಯನಗರದ ಕೊಟ್ರೇಶ್‌ ಬಿ, ಸಿದ್ದಪ್ಪ ಬಿರಾದಾರ ಹಳಿಯಾಳ, ಡಾ.ನಿಂಗೂ ಸೋಲಗಿ ಇದ್ದರು.  ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾದ ಸುಮಾರು 50 ಶಿಕ್ಷಕರು ಹಾಗೂ ಕಲಾವಿದರು ಪಾಲ್ಗೊಂಡಿದ್ದರು.

Please follow and like us:

 

 

 

 

 

 

Translate »
[t4b-ticker]
error: Content is protected !!