February 26, 2026

Hampi times

Kannada News Portal from Vijayanagara

ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್‌ ಹೊಸಪೇಟೆ

ವಿಜಯನಗರದ ಮಣ್ಣಿನಲ್ಲಿ ಸರ್ವಧರ್ಮೀಯರು ಪರಸ್ಪರ ಪ್ರೀತಿ, ಸ್ನೇಹದಿಂದ ಬದುಕುತ್ತಿದ್ದು, ಈ ಭಾವೈಕ್ಯತೆಯನ್ನು ಜಗತ್ತಿಗೆ ಸಾರುವ ಉದ್ದೇಶದಿಂದಲೇ ಸರ್ವಧರ್ಮಗಳ ಗ್ರಂಥಗಳನ್ನು ತೇರಿನಲ್ಲಿಟ್ಟು ಎಳೆಯುವ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ನಗರದಲ್ಲಿ ಫೆ.೨೭ ರಂದು ಸಂಜೆ ೫.೩೦ಕ್ಕೆ ಶ್ರೀ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ವೀರಶೈವ ಲಿಂಗಾಯತ ಸಮಾಜದ ನಗರ ಘಟಕದ ಅಧ್ಯಕ್ಷ ಗೊಗ್ಗ ಚನ್ನಬಸವರಾಜ ಮತ್ತು ಕಾರ್ಯದರ್ಶಿ ನೀಲಕಂಠಗೌಡ ತಿಳಿಸಿದರು.

ಇದನ್ನೂ ಓದಿ: ಉಜ್ಜಿನಿ ಶ್ರೀ ಮರಳಸಿದ್ಧೇಶ್ವರ ಸ್ವಾಮಿ ರಥೋತ್ಸವದಲ್ಲಿ ಜನಸಾಗರ 

ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಕಾಯಕಯೋಗಿ, ತ್ರಿವಿಧದಾಸೋಹಿ ಶ್ರೀನಿರಂಜನ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳು ಆರಂಭಿಸಿದ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಸಮಾಜದಲ್ಲಿ ಸಹಿಷ್ಣತೆ ಮತ್ತು ಸಹಬಾಳ್ವೆಯ ಸಂದೇಶ ಸಾರುತ್ತದೆ. ೯ನೇ ವರ್ಷದ ಸರ್ವಧರ್ಮ ಸಮನ್ವಯ ಮಹಾರಥೋತ್ಸವ ಹಾಗೂ ಶ್ರೀ ಜಗದ್ಗುರು ಡಾ.ಸಂಗನಬಸವ ಮಹಾಸ್ವಾಮಿಗಳವರ ಚತುರ್ಥ ಪುಣ್ಯಸ್ಮರಣೋತ್ಸವದ  ಅಂಗವಾಗಿ ಫೆ.೨೭ ರಂದು ಬೆಳಿಗ್ಗೆ ೧೦ಕ್ಕೆ ೧೧೧೧ ಮುತ್ತೈದೆಯರಿಗೆ ಉಡಿ ತುಂಬುವ ಸಮಾರಂಭ ಜರುಗಲಿದೆ.

 

ಮರಿಯಮ್ಮನಹಳ್ಳಿಯ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ವಿವಿಧ ಮಠಗಳ ಶ್ರೀಗಳು, ಗಣ್ಯರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಂಜೆ ೫ಕ್ಕೆ ಹೊಸಪೇಟೆ ನಗರಸಭೆ ಸಹಯೋಗದಲ್ಲಿ ಮೇನ್ ಬಜಾರಿನಲ್ಲಿ ನಿರ್ಮಾಣಗೊಂಡ ಹೇಮಕೂಟ ಮಹಾದ್ವಾರವನ್ನು ನೊಣವಿನಕೆರೆ ಶ್ರೀಕಾಡಸಿದ್ಧೇಶ್ವರಮಠದ ಶ್ರೀ ಕರಿವೃಷಭದೇಶಿಕೇಂದ್ರ ಶಿವಯೋಗಿ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ.

ಸಂಜೆ ೫.೩೦ಕ್ಕೆ ವಳಬಳ್ಳಾರಿ ಶ್ರೀ ಸುವರ್ಣಗಿರಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ರಥಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ೬ಕ್ಕೆ ಶಿವಾನುಭಗೋಷ್ಠಿ ಜರುಗಲಿದೆ. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಬೆಂಗಳೂರು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ, ಇಲಾಖೆ ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಗೌರವ ಸನ್ಮಾನ ನಡೆಯಲಿದೆ.

ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಹೊಸಪೇಟೆ ಸೇರಿದಂತೆ ಸುತ್ತಮುತ್ತಲಿನ ಸಕಲ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ಫೆಬ್ರವರಿ ೨೭ರ ಕಾರ್ಯಕ್ರಮಗಳ ವಿವರ

ಬೆಳಿಗ್ಗೆ ೧೦:೩೦ಕ್ಕೆ: ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮಿಗಳವರ ಚತುರ್ಥ ಪುಣ್ಯಸ್ಮರಣೋತ್ಸವದ ನಿಮಿತ್ತ ೧೧೧೧ ಮುತ್ತೈದೆಯರಿಗೆ ಉಡಿ ತುಂಬುವ ಭವ್ಯ ಸಮಾರಂಭ.
ಸಂಜೆ ೫:೦೦ಕ್ಕೆ: ನೂತನ ಹೇಮಕೂಟ ಮಹಾದ್ವಾರ ಉದ್ಘಾಟನೆ.
ಸಂಜೆ ೫:೩೦ಕ್ಕೆ: ಬಹುನಿರೀಕ್ಷಿತ ಸರ್ವಧರ್ಮ ಸಮನ್ವಯ ಮಹಾರಥೋತ್ಸವಕ್ಕೆ ಚಾಲನೆ.
ಸಂಜೆ ೬.೦೦ಕ್ಕೆ: ಶಿವಾನುಭವಗೋಷ್ಠಿ, ಸಚಿವ ಈಶ್ವರ ಬಿ.ಖಂಡ್ರೆ ಅವರಿಗೆ ಗೌರವ ಸನ್ಮಾನ
ಸಂಜೆ ೦೭:೦೦ಕ್ಕೆ: ಜೀವನ ದರ್ಶನ ಪ್ರವಚನ ಮಂಗಲೋತ್ಸವ.

Please follow and like us:

 

 

 

 

 

 

Translate »
[t4b-ticker]
error: Content is protected !!