October 26, 2026

Hampi times

Kannada News Portal from Vijayanagara

ಬಳ್ಳಾರಿಯಲ್ಲಿ ಮಳೆ ಕೊರತೆ

ಬಳ್ಳಾರಿ: ಜಿಲ್ಲೆಯಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಂಭವನೀಯ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಯುದ್ಧೋಪಾದಿಯಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ. ತುಂಗಭದ್ರಾ ಜಲಾಶಯದಿಂದ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಲಾಗಿದ್ದು, ಯಾವುದೇ ಕಾರಣಕ್ಕೂ ಕೃಷಿ ಬೆಳೆಗಳಿಗೆ ಬಳಸದಂತೆ ಕಟ್ಟುನಿಟ್ಟಿನ ನಿಷೇಧ ವಿಧಿಸಲಾಗಿದೆ.

ಎಲ್‌ಎಲ್‌ಸಿ ಮತ್ತು ಎಚ್‌ಎಲ್‌ಸಿ ಕಾಲುವೆಗಳಲ್ಲಿ ನೀರು ಹರಿಯುವ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡು, ನವೆಂಬರ್ 15 ರಿಂದ 20ರ ಒಳಗಾಗಿ ಎಲ್ಲಾ ಕುಡಿಯುವ ನೀರಿನ ಕೆರೆಗಳು ಮತ್ತು ಇನ್‌ಫಿಲ್ಟ್ರೇಷನ್ ರಿಸರ್ವಾಯರ್‌ಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ವಿಶೇಷವಾಗಿ ಸಿರುಗುಪ್ಪ ಹಾಗೂ ಆಂಧ್ರಪ್ರದೇಶದ ಗಡಿ ಭಾಗದ ಕೊನೆ ಹಂತದ ಪ್ರದೇಶಗಳ ಕೆರೆಗಳಿಗೂ ನೀರು ಮುಟ್ಟುವಂತೆ ನೋಡಿಕೊಳ್ಳಬೇಕಿದೆ.

ಕಾಲುವೆ ನೀರನ್ನು ಅಕ್ರಮವಾಗಿ ಪಂಪ್ ಮಾಡುವುದನ್ನು ತಡೆಯಲು ಕಂದಾಯ, ಪೊಲೀಸ್, ಆರ್‌ಡಬ್ಲ್ಯೂಎಸ್ ಮತ್ತು ಜೆಸ್ಕಾಂ ಇಲಾಖೆಗಳನ್ನೊಳಗೊಂಡ ತಾಲೂಕು ಮಟ್ಟದ ಜಂಟಿ ಕಾರ್ಯಪಡೆ (ಟಾಸ್ಕ್‌ಫೋರ್ಸ್) ರಚಿಸಿ ನಿರಂತರ ಗಸ್ತು ತಿರುಗಲು ಸೂಚಿಸಲಾಗಿದೆ. ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಕಡಿತಗೊಳಿಸಿ, ಕುಡಿಯುವ ನೀರಿನ ಪಂಪಿಂಗ್ ವ್ಯವಸ್ಥೆಯು ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ವಹಿಸಲಾಗುತ್ತಿದೆ.

Please follow and like us:

 

 

 

 

 

 

 

 

 

 

Translate »
[t4b-ticker]
error: Content is protected !!