https://youtu.be/NHc6OMSu0K4?si=SI_K4goOPEgwo6h2



ಜಪಾನ್‌ನ ಸನೋ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಜಪಾನ್ ನಡುವಣ ಟಿ20 ಪಂದ್ಯವು ಮಳೆಯ ಕಾರಣದಿಂದಾಗಿ ತಲಾ 5 ಓವರ್‌ಗಳಿಗೆ ಸೀಮಿತಗೊಂಡಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕಲೆಹಾಕಿದ್ದು ಕೇವಲ 32 ರನ್‌ಗಳು ಮಾತ್ರ. ಆದಾಗ್ಯೂ, ಈ ಅಲ್ಪ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿಕೊಂಡು ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿದ್ದು ವಿಶೇಷವೆನಿಸಿದೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ದುಕೊಂಡರು. 5 ಓವರ್‌ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಮೊದಲ ಓವರ್‌ನಲ್ಲೇ ಅಭಿಷೇಕ್ ಶರ್ಮಾ (0) ಶೂನ್ಯಕ್ಕೆ ಔಟಾದರೆ, ಎರಡನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ (9) ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ (3) ಮೂರನೇ ಓವರ್‌ನಲ್ಲಿ ನಿರ್ಗಮಿಸಿದರು.
ಬಳಿಕ ಕ್ರೀಸ್‌ಗಿಳಿದ ನಾಯಕ ಶ್ರೇಯಸ್ ಅಯ್ಯರ್ 12 ಎಸೆತಗಳಲ್ಲಿ 16 ರನ್ ಗಳಿಸಿದರು. ತಿಲಕ್ ವರ್ಮಾ 1 ರನ್ ಗಳಿಸಿದರೆ, ಶಿವಂ ದುಬೆ ಎದುರಿಸಿದ ಏಕೈಕ ಎಸೆತದಲ್ಲಿ ರನ್ ಗಳಿಸಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 32 ರನ್ ಗಳಿಸಿ ಇನಿಂಗ್ಸ್ ಮುಗಿಸಿತು.
33 ರನ್‌ಗಳ ಗುರಿ: 30 ಎಸೆತಗಳಲ್ಲಿ 33 ರನ್‌ಗಳ ಗುರಿ ಬೆನ್ನತ್ತಿದ ಜಪಾನ್ ತಂಡ ಉತ್ತಮ ಆರಂಭ ಕಾಣಲಿಲ್ಲ. ಆರಂಭಿಕ ಬ್ಯಾಟರ್ ಲಾಚ್ಲಾನ್ ಯಮಾಮೊಟೊ-ಲೇಕ್ 1 ರನ್‌ಗೆ ಔಟಾದರೆ, ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಬ್ರಾಹಿಂ ಟಕಾಝುಕಿಯಾ 3 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಆದರೆ, ನಾಯಕ ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ (12) ಏಕಾಂಗಿ ಹೋರಾಟ ಮುಂದುವರಿಸಿದರು. ಪರಿಣಾಮವಾಗಿ ಜಪಾನ್ ತಂಡಕ್ಕೆ ಕೊನೆಯ ಓವರ್‌ನಲ್ಲಿ 8 ರನ್‌ಗಳ ಅಗತ್ಯವಿತ್ತು. ಈ ವೇಳೆ ನಿರ್ಣಾಯಕ ದಾಳಿ ನಡೆಸಿದ ಅಕ್ಷರ್ ಪಟೇಲ್ 6 ಎಸೆತಗಳಲ್ಲಿ ಕೇವಲ 5 ರನ್ ಮಾತ್ರ ಬಿಟ್ಟುಕೊಟ್ಟರು. ಈ ಮೂಲಕ ಟೀಮ್ ಇಂಡಿಯಾ 2 ರನ್‌ಗಳ ರೋಚಕ ಜಯ ದಾಖಲಿಸಿತು.

-
ಭಾರತ: 32/4 (5 ಓವರ್)
-
ಜಪಾನ್: 30/3 (5 ಓವರ್)
ಭಾರತ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಯಶ್ ಠಾಕೂರ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.
ಜಪಾನ್ (ಪ್ಲೇಯಿಂಗ್ XI): ಲಾಚ್ಲಾನ್ ಯಮಾಮೊಟೊ-ಲೇಕ್, ರಿಯೊ ಸಕುರಾನೊ-ಥಾಮಸ್, ಕೆಂಡೆಲ್ ಕಡೋವಾಕಿ-ಫ್ಲೆಮಿಂಗ್ (ನಾಯಕ), ಬೆಂಜಮಿನ್ ಇಟೊ-ಡೇವಿಸ್, ವಟಾರು ಮಿಯೌಚಿ, ಅಲೆಕ್ಸಾಂಡರ್ ಶಿರೈ-ಪ್ಯಾಟ್ಮೋರ್ (ವಿಕೆಟ್ ಕೀಪರ್), ಚಾರ್ಲಿ ಹರಾ-ಹಿಂಝೆ, ಇಬ್ರಾಹಿಂ ಟಕಾಝುಕಿಯಾ, ಡೆಕ್ಲಾನ್ ಸುಜುಕಿ-ಮ್ಯಾಕ್‌ಕಾಂಬ್, ಮಕೋಟೊ ತನಿಯಾಮಾ, ಶೋಮಾ ಸುಗಯಾ-ಸ್ಲೇಟರ್.


More Stories
ಏಷ್ಯನ್ ಗೇಮ್ಸ್: ಭಾರತ ವನಿತೆಯರಿಗೆ ಬಂಗಾರದ ಗರಿ
ಏಷ್ಯನ್ ಗೇಮ್ಸ್: ಐತಿಹಾಸಿಕ ಕಂಚು
ಸೆಪ್ಟೆಂಬರ್ 22 ರಂದು ಭಾರತ ಮತ್ತು ಜಪಾನ್ ನಡುವೆ ಐತಿಹಾಸಿಕ ಏಕೈಕ ಟಿ20 ಪಂದ್ಯ