September 21, 2026

Hampi times

Kannada News Portal from Vijayanagara

ಮಾದಕದ್ರವ್ಯ ಮುಕ್ತ ಭಾರತಕ್ಕೆ ಸಂಕಲ್ಪ

https://youtu.be/NHc6OMSu0K4?si=SI_K4goOPEgwo6h2

2047ರ ವೇಳೆಗೆ ‘ವಿಕಸಿತ ಭಾರತ’ ನಿರ್ಮಾಣದ ಗುರಿ ಹೊಂದಿರುವ ಕೇಂದ್ರ ಸರ್ಕಾರವು ದೇಶದ ಯುವಜನತೆಯನ್ನು ಮಾದಕದ್ರವ್ಯದ ದುಷ್ಪರಿಣಾಮಗಳಿಂದ ರಕ್ಷಿಸಲು ‘ಮಿಷನ್ ಮೋಡ್’ನಲ್ಲಿ ಸಮಗ್ರ ಕಾರ್ಯಾಚರಣೆ ರೂಪಿಸಿದೆ. ಮಾದಕದ್ರವ್ಯ ಮುಕ್ತ ಭಾರತವನ್ನು ನಿರ್ಮಿಸದೆ ವಿಕಸಿತ ಭಾರತದ ಸಂಕಲ್ಪ ಈಡೇರಲು ಸಾಧ್ಯವಿಲ್ಲ ಎಂಬ ನಿಟ್ಟಿನಲ್ಲಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದಕದ್ರವ್ಯ

ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್) ಮುಖ್ಯಸ್ಥರ 3ನೇ ರಾಷ್ಟ್ರೀಯ ಸಮ್ಮೇಳನವನ್ನು ನವದೆಹಲಿಯಲ್ಲಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (ಎನ್‌ಸಿಬಿ) ಆಯೋಜಿಸಿದೆ. ಈ ಎರಡು ದಿನಗಳ ಮಹತ್ವದ ರಾಷ್ಟ್ರೀಯ ಸಮ್ಮೇಳನವನ್ನು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ಉದ್ಘಾಟಿಸಲಿದ್ದಾರೆ.

 

ಇದೇ ಸಂದರ್ಭದಲ್ಲಿ ಸಚಿವರು ಮಾದಕದ್ರವ್ಯ ವಿರುದ್ಧ ಜನಜಾಗೃತಿ ಮೂಡಿಸುವ ಟಿವಿ ಜಾಹೀರಾತುಗಳನ್ನು ಬಿಡುಗಡೆ ಮಾಡಲಿದ್ದು, ಲಕ್ನೋ ಹಾಗೂ ಡೆಹ್ರಾಡೂನ್‌ನಲ್ಲಿ ನಿರ್ಮಾಣವಾಗಲಿರುವ ನೂತನ ಎನ್‌ಸಿಬಿ ವಲಯ ಸಂಕೀರ್ಣಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಎಎನ್‌ಟಿಎಫ್‌ಗಳನ್ನು ಗೌರವಿಸಿ, ನವೀಕರಿಸಿದ ಎನ್‌ಸಿಬಿ ಅಧಿಕೃತ ಜಾಲತಾಣಕ್ಕೂ ಚಾಲನೆ ನೀಡಲಿದ್ದಾರೆ.

“ಒಗ್ಗೂಡಿದ ಸಂಕಲ್ಪ, ಎಲ್ಲರ ಒಂದೇ ಜವಾಬ್ದಾರಿ” ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಎನ್‌ಟಿಎಫ್ ಮುಖ್ಯಸ್ಥರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಮಾದಕದ್ರವ್ಯ ನಿಯಂತ್ರಣದ ದೂರದೃಷ್ಟಿ ದಾಖಲೆ (2026-2029)ಯ ಆಧಾರಸ್ತಂಭಗಳ ಮೇಲೆ ಒಟ್ಟು ಎಂಟು ತಾಂತ್ರಿಕ ಅಧಿವೇಶನಗಳು ನಡೆಯಲಿದ್ದು, ಡಾರ್ಕ್ ನೆಟ್, ಕ್ರಿಪ್ಟೋ ವ್ಯವಹಾರಗಳ ಮೂಲಕ ನಡೆಯುವ ದಂಧೆ, ಸಿಂಥೆಟಿಕ್ ಮಾದಕವಸ್ತುಗಳು ಹಾಗೂ ಅಕ್ರಮ ಪ್ರಯೋಗಾಲಯಗಳ ಜಾಲ ಧ್ವಂಸಗೊಳಿಸಲು ಜಂಟಿ ಕಾರ್ಯಾಚರಣೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತದೆ.

Please follow and like us:

 

 

Translate »
[t4b-ticker]