https://youtu.be/NHc6OMSu0K4?si=SI_K4goOPEgwo6h2

ಹರಿಯಾಣದ ಪ್ರಶಾಂತವಾದ ಭೂಮಿತಾಯಿಯ ಅಂಗಳದಲ್ಲಿ ಮನೆ ಮಾಡಿಕೊಂಡಿದ್ದ ಆ ಕುಟುಂಬವು ತಮ್ಮ ಇಡೀ ಬದುಕನ್ನು ರೋಗಿಗಳ ಸೇವೆಗೆ ಅರ್ಪಿಸಿಕೊಳ್ಳುವ ಪ್ರಮಾಣವನ್ನು ಮಾಡಿತ್ತು. ತಂದೆ, ತಾಯಿ, ಸಹೋದರ ಎಲ್ಲರೂ ವೈದ್ಯರಾಗಿದ್ದರು. ಇನ್ನು ಆ ಕುಟುಂಬದ ಮಗಳು ಪಾಯಲ್ ಛಾಬ್ರಾ ಬದುಕು ವಿಭಿನ್ನವಾಗಿರಲು ಹೇಗೆ ಸಾಧ್ಯ? ಕಲ್ಲಿನಲ್ಲಿ ಕೆತ್ತಿದಂತೆ ಆಕೆಯ ಭವಿಷ್ಯ ಅತ್ಯಂತ ನಿಖರವಾಗಿತ್ತು….ಆದರೆ ಓರ್ವ ಎಂಬಿಬಿಎಸ್ ಪದವೀಧರ ವೈದ್ಯೆ, ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಶಸ್ತ್ರಚಿಕಿತ್ಸಕಳಾದಳು. ಸುಸಜ್ಜಿತವಾದ ಆಸ್ಪತ್ರೆಯ ಗೌರವಾನ್ವಿತ ಕ್ಯಾಬಿನ್ ನಲ್ಲಿ ಆಕೆ ತನ್ನನ್ನು ತಾನು ಗುರುತಿಸಿಕೊಂಡ ಆಕೆ ಅಲ್ಲೂ ಕೂಡ ತನ್ನ ವೈಯುಕ್ತಿಕ ಹಿತಾಸಕ್ತಿಗಾಗಿ ಕಾದು ಕುಳಿತಿರಲಿಲ್ಲ… ಬದಲಾಗಿ ಕರ್ತವ್ಯದ ಕರೆಗೆ ಕಾಯುತ್ತಿದ್ದರು.
ಹಿರಿಯ ಸ್ಥಾನಿಕ ವೈದ್ಯಳಾಗಿ ಕಲ್ಪನಾ ಚಾವ್ಲಾ ಗೌರ್ಮೆಂಟ್ ಮೆಡಿಕಲ್ ಕಾಲೇಜಿನಲ್ಲಿ 2020 ರಲ್ಲಿ ಕಾರ್ಯನಿರ್ವಹಿಸಿದ ಪಾಯಲ್ 2021ರ ಜನವರಿ ತಿಂಗಳಲ್ಲಿ ಅದಕ್ಕಿಂತ ಹೆಚ್ಚಿನದನ್ನು ಸಾಧಿಸುವ ಇಚ್ಛೆಯಿಂದ ತಾನು ಧರಿಸಿದ ವೈದ್ಯೆಯ ಬಿಳಿ ಕೋಟಿನ ಜೊತೆಗೆ ಹಸಿರು ಬಣ್ಣದ ಮಿಲಿಟರಿ ಸಮವಸ್ತ್ರವನ್ನು ಧರಿಸಿ ಮಿಲಿಟರಿಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿ ಗುರುತಿಸಿಕೊಂಡರು. ಆಕೆಯ ಆರಂಭಿಕ ಶಿಕ್ಷಣ ಅಂಬಾಲಾದಲ್ಲಿ ಪ್ರಾರಂಭವಾಯಿತು ವಿಧಿ ಆಕೆಯನ್ನು ಜಗತ್ತಿನ ಅತ್ಯಂತ ಎತ್ತರದ ಯುದ್ಧ ಭೂಮಿಯಾದ ಲೇಹ್ ನ ಖರ್ದುಂಗ ಲಾ ದತ್ತ ಕರೆದೊಯ್ಯಿತು.
ದೇಹವನ್ನು ಮಾತ್ರವಲ್ಲ, ದೇಹದ ಒಳಗಿರುವ ಮೂಳೆಗಳನ್ನು ಕೂಡ ಕೊರೆಯುವ ಹಿಮಾಲಯದ ಕಡುಚಳಿಯಲ್ಲಿ ಆಕೆ ಗಾಯಗೊಂಡ ಸೈನಿಕರ ಶುಶ್ರೂಷೆ ಮಾಡುತ್ತಿದ್ದಳು… ಅಗತ್ಯ ಬಿದ್ದರೆ ಶಸ್ತ್ರ ಚಿಕಿತ್ಸೆ ಕೂಡ. ಯುದ್ಧದಲ್ಲಿ ಗಾಯಗೊಂಡ ಯೋಧರಿಗೆ ನಾನು ಚಿಕಿತ್ಸೆ ನೀಡಿ ಅವರ ಕಾಳಜಿ ಮಾಡಬಲ್ಲೆನಾದರೆ ನಾನೇಕೆ ಅವರಂತೆ ಯೋಧಳಾಗಬಾರದು? ಎಂಬ ಪ್ರಶ್ನೆ ಆಕೆಯಲ್ಲಿ ಮೂಡಿತು. ಈ ರೀತಿ ವೈದ್ಯರಿಗೆ ಮಿಲಿಟರಿಯ ಕಠಿಣ ತರಬೇತಿಯನ್ನು ನೀಡುವುದು ಅತ್ಯಂತ ಕಷ್ಟಕರ ಹಾಗೂ ಯಾವುದೇ ರೀತಿಯ ಭರವಸೆಯನ್ನು ಅವರ ಜೀವದ ಮೇಲೆ ಕೊಡುವುದು ಸಾಧ್ಯವಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆಕೆಯ ತರಬೇತಿಗೆ ಪ್ರಾರಂಭದಲ್ಲಿ ಅವಕಾಶವನ್ನು ನೀಡಲಿಲ್ಲ…ಆದರೆ ಆಕೆ ಈಗಾಗಲೇ ತನ್ನ ಮನಸ್ಸಿನಲ್ಲಿ ಈ ಕುರಿತು ಯೋಜನೆಯನ್ನು ಮಾಡಿಕೊಂಡಿದ್ದಳು, ಪರಿಣಾಮವಾಗಿ
ಆಕೆ ಬೇರೆ ಯಾವುದೇ ಆಯ್ಕೆಯನ್ನು ತನ್ನದಾಗಿಸಿಕೊಳ್ಳದೆ ಅದೇ ದಾರಿಯಲ್ಲಿ ಮುಂದುವರೆಯಲು ನಿಶ್ಚಯಿಸಿದ್ದಳು. ಮಿಲಿಟರಿ ಆಸ್ಪತ್ರೆಯಲ್ಲಿ ಗಾಯಗೊಂಡ ಯೋಧರಿಗೆ ಶಸ್ತ್ರಚಿಕಿತ್ಸೆಯ ತನ್ನ ಕರ್ತವ್ಯದ ಜೊತೆ ಜೊತೆಗೆ ಆಕೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಕಠಿಣ ತರಬೇತಿಯಲ್ಲಿ ತೊಡಗಿಕೊಂಡಳು. ಆಗ್ರಾದಲ್ಲಿರುವ ಪ್ಯಾರಾ ಟ್ರೂಪರ್ ಗಳ ತರಬೇತಿ ಶಾಲೆಯಲ್ಲಿ ಪ್ರತಿದಿನ ನಸುಕಿನ ಜಾವದ 3 ಗಂಟೆಗೆ ಆರಂಭವಾಗುತ್ತಿದ್ದ ತರಬೇತಿಯಲ್ಲಿ ಆಕೆ ಕೇವಲ ತನ್ನ ವೈದ್ಯಕೀಯ ಜ್ಞಾನವನ್ನು ಮಾತ್ರವಲ್ಲ ಬದಲಾಗಿ

ಸರಿಸುಮಾರು 65 ಕೆಜಿ ತೂಕದ ರಕ್ ಸ್ಯಾಕನ್ನು ಹೊರ ಬೇಕಾಗುತ್ತಿತ್ತು. 40 ಕಿ.ಮೀ ದೂರದವರೆಗೆ ನಡೆಯುವ ಮತ್ತು ಓಡುವ ಸಾಮರ್ಥ್ಯವನ್ನು ಪಡೆದುಕೊಳ್ಳಲು ನಿರಂತರವಾಗಿ ಆಕೆಯ ತರಬೇತಿ ನಡೆಯುತ್ತಿತ್ತು. ಚಿಕಿತ್ಸೆಯ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ನಿಖರತೆಯನ್ನು ಹೊಂದಿದ ಆಕೆಯ ಕೈಗಳು ಇದೀಗ ಮಣ್ಣಿನ ಒಡನಾಟದಲ್ಲಿ ಗಟ್ಟಿ ಮುಟ್ಟಾಗಿದ್ದವು. ಇದೀಗ ಆಕೆ ಕೇವಲ ಓರ್ವ ವೈದ್ಯಳಾಗಿರಲಿಲ್ಲ ಬದಲಾಗಿ ಹರಿತವಾದ ಆಯುಧವಾಗಿ ಬದಲಾಗಿದ್ದಳು. 2020ರ ಸೆಪ್ಟೆಂಬರ್ ತಿಂಗಳ ಆ ದಿನ ಭಾರತೀಯ ಮಿಲಿಟರಿ ಇತಿಹಾಸದ ಐತಿಹಾಸಿಕ ದಂತ ಕಥೆಯೊಂದರ ಉದಯವಾಯಿತು. ಆಗ್ರಾದ ಮಣ್ಣಿನಲ್ಲಿ ಓರ್ವ ನವ ಸ್ಪೂರ್ತಿಯ ಉದಯವಾಯಿತು. ಅತ್ಯಂತ ಗಟ್ಟಿಯಾದ ಗಾಜಿನ ತಾರಸಿಯನ್ನು ಒಡೆಯುವಂತೆ ಡಾಕ್ಟರ್ ಪಾಯಲ್ ಛಾಬ್ರಾ ಅವರು ತಮ್ಮೆಲ್ಲ ದೈಹಿಕ
ಅಡೆತಡೆಗಳನ್ನು ಮೀರಿ ಭಾರತೀಯ ಮಿಲಿಟರಿ ಯೋಧರ ಸಮವಸ್ತ್ರದಲ್ಲಿ ಹೆಮ್ಮೆಯಿಂದ ತಲೆಯೆತ್ತಿ ನಿಂತಿದ್ದರು. ಮೊದಲ ಮಹಿಳಾ ಶಸ್ತ್ರಚಿಕಿತ್ಪರಯಾಗಿ ಭಾರತದ ಮಿಲಿಟರಿ ಇತಿಹಾಸದಲ್ಲಿ ದಾಖಲಾಗಿರುವ ಆಕೆ ಎಲೈಟ್ ಪ್ಯಾರಾ ಸ್ಪೆಷಲ್ ಪೋರ್ಸ್ ನಲ್ಲಿ ಪದಗ್ರಹಣ ಮಾಡಿದಳು. ಆಕೆಯ ತಂದೆ ರಾಜೇಂದ್ರ ಛಾಬ್ರಾ ಅವರು ಹೆಮ್ಮೆಯ ಜೊತೆಗೆ ಕಂಪಿಸುತ್ತಿರುವ ಧ್ವನಿಯಲ್ಲಿ ಮಾತನಾಡಿ ಅತ್ಯಧಿಕ ಸಂಪಾದನೆಯ ಹಲವಾರು ವಿದೇಶಿ ಅವಕಾಶಗಳನ್ನು ತಿರಸ್ಕರಿಸಿದ ತಮ್ಮ ಮಗಳ ಹೃದಯ ಕೇವಲ ತಾಯ್ನಾಡಿನ ಸೇವೆಗಾಗಿ ತುಡಿಯುತ್ತಿತ್ತು ಎಂದು ಗದ್ಗದಿತರಾಗಿ ಹೇಳಿದರು.
ಶೌರ್ಯದ ನಿಜವಾದ ಪರಂಪರೆಯ ಕೊಂಡಿಯಾಗಿರುವ ಪಾಯಲ್ ಅವರು ಇದೀಗ ಮೇಜರ್ ಹುದ್ದೆಗೆ ಬಡ್ತಿಯನ್ನು ಹೊಂದಿದ್ದು ದೇಶದ ಉತ್ತರ ಗಡಿ ಭಾಗವಾದ ಲಡಾಖನಲ್ಲಿ ಸೇವೆ ಸಲ್ಲಿಸುತ್ತಿದ್ದು ಆಕೆ ನಿಜವಾದ ರಕ್ಷಕಿ ಎಂದು ಗುರುತಿಸಿಕೊಂಡಿದ್ದಾರೆ.
ತನ್ನ ಒಂದು ಕೈಯಲ್ಲಿ ಶಸ್ತ್ರಚಿಕಿತ್ಸೆಯ ಉಪಕರಣವನ್ನು ಹಿಡಿದುಕೊಂಡು ಯುದ್ಧದ ಗಾಯಾಳುಗಳನ್ನು ರಕ್ಷಿಸುವ ಕೆಲಸ ಮಾಡುತ್ತ ಭರವಸೆಯ ದೀಪವನ್ನು ಹೊತ್ತಿಸುವ ಆಕೆ ಮತ್ತೊಂದು ಕೈಯಲ್ಲಿ ಶತ್ರುಗಳನ್ನು ಹಿಡಿದು ದೇಶಕ್ಕೆ ಎದುರಾಗುವ ಯಾವುದೇ ಅಪಾಯವನ್ನು ಎದುರಿಸಲು ಸನ್ನದ್ದರಾಗಿ ನಿಂತಿದ್ದಾಳೆ. ಮೋಡಗಳ ಮರೆಯಿಂದ ಪ್ಯಾರಾಚೂಟ್ ಸಹಾಯದಿಂದ ವೈರಿಗಳ ಗಡಿ ಪ್ರದೇಶದಲ್ಲಿ ಕೆಳಗಿಳಿದು
ಹೋಗುವ ಛಾತಿಯನ್ನು ಹೊಂದಿರುವ ಆಕೆ ಮುಂದಿನ ಕ್ಷಣವೇ ಜೀವವನ್ನು ರಕ್ಷಿಸುವ ಶಸ್ತ್ರಚಿಕಿತ್ಸೆಯನ್ನು ಆಗಸದ ಅಡಿಯ ತೆರೆದ ಬಯಲಿನಲ್ಲಿ ಮಾಡುವ ಧೈರ್ಯವನ್ನು ಕೂಡ ಹೊಂದಿದ್ದಾಳೆ ಮೇಜರ್ ಡಾ. ಪಾಯಲ್ ಛಾಬ್ರಾ ಹೆಣ್ಣು ಮಕ್ಕಳ ಧೈರ್ಯ ಮತ್ತು ಸಾಹಸಕ್ಕೆ ಮಿತಿಯೇ ಇಲ್ಲ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದಾಳೆ. ಆಕೆ ಆಪರೇಷನ್ ಥಿಯೇಟರ್ ನಲ್ಲಿ ಕಾರ್ಯ ನಿರ್ವಹಿಸಿದಷ್ಟೇ ಸಹಜವಾಗಿ, ಅಷ್ಟೇ ಧೈರ್ಯ ಸಾಹಸ ಹಾಗೂ ಚಾಕಚಕ್ಯತೆಯಿಂದ ಯುದ್ಧ ರಂಗದಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾಳೆ. ಪಾಯಲ್ ಛಾಬ್ರಾರಂತಹ ಹೆಣ್ಣು ಮಕ್ಕಳ ಸಂತತಿ ಸಾವಿರವಾಗಲಿ ಎಂದು ಹಾರೈಸುವ




More Stories
ದೂರದ ಬೆಟ್ಟದ ನುಣ್ಣನೆಯ ಭ್ರಮೆ
ಕ್ರೀಡಾ ಜಗತ್ತಿಗೆ ಸ್ಫೂರ್ತಿ ಭಾರತದ ಮಹಿಳಾ ಆರ್ಚರಿ ಪಟು ಪಾಯಲ್ ನಾಗ್
ಆಪತ್ತಿನಲ್ಲಿ ಆದವನೇ ನಿಜವಾದ ಸ್ನೇಹಿತ