https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ನಗರದ ಆರ್‌ಟಿಒ ಕಚೇರಿ ಮುಂಭಾಗದ ಹರಿಹರದಿಂದ ಬರುವ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಈಗ `ಬ್ರೇಕರ್ಸ್’ ಭಯ ಶುರುವಾಗಿದೆ. ಇಲ್ಲಿ ಅಳವಡಿಸಲಾಗಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳು ಸವಾರರ ನೆಮ್ಮದಿಗೆಡಿಸಿವೆ. ರಸ್ತೆ ಸುರಕ್ಷತೆಯ ಬಗ್ಗೆ ಪಾಠ ಮಾಡಬೇಕಾದ ಆರ್‌ಟಿಒ ಕಚೇರಿಯ ಮುಂದೆಯೇ ಇಷ್ಟು ಅಸಮರ್ಪಕವಾಗಿ ರಸ್ತೆ ಉಬ್ಬುಗಳನ್ನು ಹಾಕಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅನಾಹುತಗಳ ಆತಂಕ: ಈ ಬ್ರೇಕರ್ಸ್ ಗಳು ನಿಗದಿತ ಎತ್ತರಕ್ಕಿಂತ ಹೆಚ್ಚಾಗಿದ್ದು, ವಾಹನಗಳು ಚಲಿಸುವಾಗ ತೀವ್ರವಾದ ಜಿಗಿತ ಉಂಟಾಗುತ್ತಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ವಿಶೇಷವಾಗಿ ಗರ್ಭಿಣಿಯರು, ವೃದ್ಧರು ಮತ್ತು ಸೊಂಟದ ನೋವಿನಿಂದ ಬಳಲುತ್ತಿರುವವರಿಗೆ ಈ ರಸ್ತೆ ಸಂಚಾರ ದುಸ್ತರವಾಗಿದೆ. ರಾತ್ರಿ ವೇಳೆ ಈ ಉಬ್ಬುಗಳು ಸರಿಯಾಗಿ ಕಾಣಿಸದ ಕಾರಣ ಅಪಘಾತಗಳಾಗುವ ಆತಂಕ ಎದುರಾಗಿದೆ.

ಇದನ್ನೂ: ಸಂಕ್ರಾಂತಿಯಲ್ಲಿ ಅಡಗಿದೆ ವೈಜ್ಞಾನಿಕ ಮಹತ್ವ: ಬಿಎಂ ರಾಜಶೇಖರ
ಹೊಣೆಗಾರಿಕೆ ಯಾರದ್ದು?: ಸಾರಿಗೆ ಇಲಾಖೆ, ಸಂಚಾರಿ ಪೊಲೀಸರು, ಲೋಕಪಯೋಗಿ ಇಲಾಖೆ, ನಗರಸಭೆ ಅಧಿಕಾರಿಗಳು ಗಮನಹರಿಸಬೇಕಿದೆ. ಅಪಘಾತಗಳ ನಂತರ ಕಾರಣ ಹುಡುಕು ವುದಕ್ಕಿಂಥ ಮುಂಚಿತವಾಗಿಯೇ ಅಧಿಕಾರಿಗಳು ಗಮನಿಸಿ ಸರಿ ಪಡಿಸಿದರೆ ಅನಾಹುತಗಳನ್ನು ತಪ್ಪಿಸ ಬಹುದಾಗಿದೆ. ಇಲ್ಲಿ ಅನಾಹುತ ನಡೆದು ಪ್ರಾಣಹಾನಿಯಾದರೆ ಅದಕ್ಕೆ ಅಧಿಕಾರಿಗಳು ಜವಾಬ್ದಾರರೇ ಅಥವಾ ಕಾಮಗಾರಿ ನಡೆಸಿದ ಗುತ್ತಿಗೆದಾರರೇ?” ಎಂದು ಸ್ಥಳೀಯ ವಾಹನ ಸವಾರರು ಪ್ರಶ್ನಿಸಿದ್ದಾರೆ. ಕೂಡಲೇ ಈ ಅಪಾಯಕಾರಿ ಉಬ್ಬುಗಳನ್ನು ತೆರವುಗೊಳಿಸಿ, ವೈಜ್ಞಾನಿಕವಾಗಿ ಅಳವಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ನೈಜ ಕಲಾವಿದರಿಗೆ ಪ್ರಶಸ್ತಿ ತಪ್ಪಬಾರದು: ನಿಷ್ಠಿ ರುದ್ರಪ್ಪ
ಅಸಮಾನತೆ ಸುಟ್ಟು ಸಮಾನತೆ ಬೆಳಗಿ : ಸಂವಿಧಾನ ಸಂರಕ್ಷಣಾ ಸಮಿತಿ