https://youtu.be/NHc6OMSu0K4?si=SI_K4goOPEgwo6h2

ಜೈ ಭೀಮ್ ವೃತ್ತದಲ್ಲಿ ಅಂಬೇಡ್ಕರ್ ಹಾದಿಯಲ್ಲಿ ಸಂವಿಧಾನ ರಕ್ಷಣೆಗೆ ಕರೆ
ಹೊಸಪೇಟೆ: ನಗರದ ಜೈ ಭೀಮ್ ವೃತ್ತದಲ್ಲಿ ಗುರುವಾರ ಸಂವಿಧಾನ ಸಂರಕ್ಷಣಾ ಸಮಿತಿವತಿಯಿಂದ “ಮನುಸ್ಮೃತಿ ದಹನ ದಿನ”ವನ್ನು ಆಚರಿಸಲಾಯಿತು.

೧೯೨೭ರ ಡಿಸೆಂಬರ್ ೨೫ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ ಅಸಮಾನತೆಯನ್ನು ಸಾರುವ ಮನುಸ್ಮೃತಿಯನ್ನು ದಹಿಸಿದ ನೆನಪಿಗಾಗಿ ಈ ಕಾರ‍್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಿತಿಯ ಸಂಚಾಲಕರಾದ ಸೋಮಶೇಖರ್ ಬಣ್ಣದಮನೆ ಮತ್ತು ಮರಡಿ ಜಂಬಯ್ಯ ನಾಯಕ ಅವರು ಮಾತನಾಡಿ, ಮನುಸ್ಮೃತಿಯು ಸಮಾಜದಲ್ಲಿ ಜಾತಿ ಪದ್ಧತಿ ಮತ್ತು ಸ್ತ್ರೀ ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುತ್ತದೆ. ಇಂತಹ ಅಸಮಾನತೆಯ ಗ್ರಂಥವನ್ನು ಸುಡುವ ಮೂಲಕ ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶಕ್ಕೆ ಸಮಾನತೆಯ ದಾರಿಯನ್ನು ತೋರಿಸಿಕೊಟ್ಟರು. ಭಾರತದ ಸಂವಿಧಾನವು ಇಂದು ಪ್ರತಿಯೊಬ್ಬರಿಗೂ ಘನತೆಯ ಬದುಕನ್ನು ನೀಡಿದೆ. ಸಂವಿಧಾನ ವಿರೋಧಿ ಶಕ್ತಿಗಳು ದೇಶದಲ್ಲಿ ಮತ್ತೆ ತಲೆ ಎತ್ತುತ್ತಿರುವ ಈ ಕಾಲಘಟ್ಟದಲ್ಲಿ, ಸಂವಿಧಾನವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ರ‍್ತವ್ಯವಾಗಿದೆ ಎಂದು ಒಕ್ಕೊರಲಿನಿಂದ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳಾದ ಶಿವುಕುಮಾರ್, ತಾಯಪ್ಪ ನಾಯಕ, ರಾಮಚಂದ್ರ ಬಾಬು, ನಗರ ಸಭಾ ಸದಸ್ಯರಾದ ಖದೀರ್, ಗುಜರಿ ಮೊಹಮದ್ ಹಾಗೂ ಪ್ರಮುಖರಾದ ಜೆ.ಸಿ. ಈರಣ್ಣ, ರಮೇಶ್, ವೆಂಕಟರಮಣ, ಬಿಸಾಟಿ ಮಹೇಶ್, ರವಿ ಕುಮಾರ್, ಸಜ್ಜಾದ್ ಖಾನ್, ಪ್ರಮೋದ್ ಪುಣ್ಯಮರ‍್ತಿ, ಇಂತಿಯಾಜ್, ಗಿರೀಶ್, ಹೊಬಳೇಶ್, ಯಲಪ್ಪ, ಜಬಯ್ಯ ಸೇರಿದಂತೆ ವಿವಿಧ ದಲಿತ ಪರ ಮತ್ತು ಪ್ರಗತಿಪರ ಸಂಘಟನೆಗಳ ಮುಖಂಡರು, ಇತರರು ಇದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್