October 14, 2026

Hampi times

Kannada News Portal from Vijayanagara

ಹಸ್ತಪ್ರತಿಗಳು ನಮ್ಮ ಇತಿಹಾಸದ ಕನ್ನಡಿ: ಎಲ್. ಸುರೇಶ್ ಕುಮಾರ್

ಹೊಸಪೇಟೆ

ಹಸ್ತಪ್ರತಿಗಳು ಕೇವಲ ಹಳೆಯ ಬರಹಗಳಲ್ಲ, ಅವು ನಮ್ಮ ಇತಿಹಾಸದ ಕನ್ನಡಿ ಹಾಗೂ ಪೂರ್ವಜರ ಜ್ಞಾನದ ಅಮೂಲ್ಯ ಸಾಕ್ಷ್ಯಗಳಾಗಿವೆ. ಅವುಗಳ ಸಂರಕ್ಷಣೆ ನಮ್ಮ ಭವಿಷ್ಯದ ಜವಾಬ್ದಾರಿ ಎಂದು ಸಾಹಿತ್ಯ ಅಕಾದೆಮಿಯ ಕಾರ್ಯಕ್ರಮ ಅಧಿಕಾರಿ ಎಲ್. ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಅಖಂಡ ಕರ್ನಾಟಕ ಸಾಹಿತ್ಯ ಅಕಾದೆಮಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ‘ಜ್ಞಾನ ಭಾರತಂ ಮಿಷನ್’ ಅಡಿಯಲ್ಲಿ ಆಯೋಜಿಸಿದ್ದ ‘ಹಸ್ತಪ್ರತಿಗಳು ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಸಂರಕ್ಷಣೆ’ ವಿಶೇಷ ಉಪನ್ಯಾಸ ಮಾಲೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, “ಹಸ್ತಪ್ರತಿಗಳನ್ನು ಓದದೆ, ಬಳಸದೆ ಹೋದರೆ ಅವು ನಶಿಸಿಹೋಗುತ್ತವೆ. ಹಿರಿಯರ ಮನೆಯ ಆಸ್ತಿಯನ್ನು ಕಾಪಾಡುವಂತೆ ಪ್ರತಿಯೊಬ್ಬರೂ ಹಸ್ತಪ್ರತಿಗಳನ್ನು ಸಂರಕ್ಷಿಸಬೇಕು” ಎಂದು ಕರೆ ನೀಡಿದರು.

ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಪ್ರಾಸ್ತಾವಿಕ ನುಡಿದರು. ಡಾ. ಎಸ್.ಆರ್. ಚನ್ನವೀರಪ್ಪ ವಂದನಾರ್ಪಣೆ ಮಾಡಿದರು, ಮತ್ತು ಸಂಶೋಧನಾರ್ಥಿ ಲಿಂಗರಾಜು ನಿರೂಪಿಸಿದರು. ವಿವಿಧ ವಿಭಾಗಗಳ ಡೀನರು, ಬೋಧಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ನಡೆದ ಗೋಷ್ಠಿಯಲ್ಲಿ ಡಾ. ಮಾಧವ ಪೆರಾಜೆ, ಜಾಜಿ ದೇವೇಂದ್ರಪ್ಪ, ಡಾ. ಎಫ್.ಟಿ. ಹಳ್ಳಿಕೇರಿ ಹಾಗೂ ಡಾ. ಸಣ್ಣಪಾಪಯ್ಯ ಉಪಸ್ಥಿತರಿದ್ದರು.

Please follow and like us:

 

 

Translate »
[t4b-ticker]
error: Content is protected !!