
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಅವರ ಧರ್ಮಪತ್ನಿ ಪ್ರಗತಿ ಶೆಟ್ಟಿ ಅವರು ತಮ್ಮ ನಿವಾಸದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಲಕ್ಷ್ಮಿ ಪೂಜೆಯನ್ನು ನೆರವೇರಿಸಿದ್ದಾರೆ. ಸಿನಿಮಾಗಳಲ್ಲಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ನಾಡಿನ ಧಾರ್ಮಿಕ ಸಂಪ್ರದಾಯ ಹಾಗೂ ಮಣ್ಣಿನ ಸಂಸ್ಕೃತಿಗೆ ಅಪಾರ ಗೌರವ ನೀಡುವ ರಿಷಬ್ ದಂಪತಿಯ ಈ ಭಕ್ತಿಭಾವದ ಆಚರಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ.

ಮನೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಅವರು ಸಾಂಪ್ರದಾಯಿಕ ಬಿಳಿ ವಸ್ತ್ರ ಧರಿಸಿದ್ದರೆ, ಪ್ರಗತಿ ಶೆಟ್ಟಿ ಅವರು ನೇರಳೆ ಬಣ್ಣದ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದರು. ಹೂವು ಮತ್ತು ದೀಪಗಳಿಂದ ಸಿಂಗರಿಸಲ್ಪಟ್ಟ ಸುಂದರ ಮಂಟಪದಲ್ಲಿ ದಂಪತಿ ಒಟ್ಟಾಗಿ ಕುಳಿತು ವ್ರತ-ಪೂಜೆಗಳನ್ನು ಸಂಪನ್ನಗೊಳಿಸಿದರು. ಸುಖ, ಶಾಂತಿ ಮತ್ತು ಸಮೃದ್ಧಿಗಾಗಿ ಲಕ್ಷ್ಮಿ ದೇವಿಯ ಆರಾಧನೆ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಶ್ರೀ ಸತ್ಯನಾರಾಯಣ ಸ್ವಾಮಿಯ ಕೃಪೆಗೆ ಪಾತ್ರರಾದರು.
ಈ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪ್ರಗತಿ ಶೆಟ್ಟಿ ಅವರು, “ಎಲ್ಲಿ ನಂಬಿಕೆ ಗಾಢವಾಗಿರುತ್ತದೆಯೋ ಅಲ್ಲಿ ಕುಟುಂಬ ಇನ್ನಷ್ಟು ಹತ್ತಿರವಾಗುತ್ತದೆ ಮತ್ತು ದೈವದ ಪ್ರತಿಯೊಂದು ಆಶೀರ್ವಾದವೂ ಅಮೂಲ್ಯ ಕೊಡುಗೆಯಂತೆ ಭಾಸವಾಗುತ್ತದೆ” ಎಂದು ಬರೆದುಕೊಂಡಿದ್ದಾರೆ. ಸಿನಿಮಾಗಳಲ್ಲಿ ಕರಾವಳಿಯ ಪರಂಪರೆ ಮತ್ತು ದೈವಾರಾಧನೆಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿರುವ ರಿಷಬ್ ಶೆಟ್ಟಿ, ನಿತ್ಯ ಜೀವನದಲ್ಲೂ ನಮ್ಮ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಮೌಲ್ಯಗಳಿಗೆ ಸದಾ ಬದ್ಧರಾಗಿರುವುದನ್ನು ಈ ಪೂಜೆ ಮತ್ತೊಮ್ಮೆ ಸಾಬೀತುಪಡಿಸಿದೆ.


More Stories
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು