January 15, 2026

Hampi times

Kannada News Portal from Vijayanagara

ಜಾನಪದ ಲೋಕದ ಗಾರುಡಿಗ ಡಾ.ಚಂದ್ರಶೇಖರ

https://youtu.be/NHc6OMSu0K4?si=SI_K4goOPEgwo6h2

 

ನ್ನಡದ ಸಾಹಿತಿಗಳಲ್ಲಿ ಡಾ.ಚಂದ್ರಶೇಖರ ಕಂಬಾರ ಅವರದ್ದು ವಿಭಿನ್ನ ಹಾಗೂ ವಿಶಿಷ್ಟವಾದ ವ್ಯಕ್ತಿತ್ವ. ಉತ್ತರ ಕರ್ನಾಟಕದ ಜಾನಪದ ಸೊಗಡು ಹಾಗೂ ದೇಶಿಯತೆಯನ್ನು ಸಾಹಿತ್ಯದಲ್ಲಿ ಹಾಗೂ ಬದುಕಿನಲ್ಲಿ.ಮೈಗೂಡಿಸಿಕೊಂಡು ಬಂದವರು. ಕನ್ನಡ ,ಕಾವ್ಯ, ನಾಟಕ, ಕಾದಂಬರಿ, ಮಹಾಕಾವ್ಯ,ಸಿನಿಮಾ ಹಾಡು, ಸಿನಿಮಾ ನಿರ್ದೇಶನ ಹೀಗೆ ಎಲ್ಲದರಲ್ಲೂ,ಎಲ್ಲವುದರ ಮೂಲಕ ಜನರ ಮನೆಮನೆಗಳನ್ನು ತಲುಪಿರುವ ಏಕೈಕ ಕನ್ನಡದ ಸಾಹಿತಿ ಎಂದರೆ ಡಾ. ಚಂದ್ರಶೇಖರ್ ಕಂಬಾರ. ಅವರನ್ನು ಕವಿ, ಸಾಹಿತಿ,ನಾಟಕಕಾರ, ಜಾನಪದ ತಜ್ಞ, ಶಿಕ್ಷಣ ತಜ್ಞ ,ಸಿನಿಮಾ ಗೀತ ರಚನಕಾರರು,ಚಲನಚಿತ್ರ ಹಾಗೂ ಸಂಗೀತ ನಿರ್ದೇಶಕರು, ವಿಧಾನ ಪರಿಷತ್ತಿನ ಸದಸ್ಯರಾಗಿದ್ದವರು ಅಂಥ ಇಷ್ಟು ಹೇಳಿದರೆ ಅವರ ವ್ಯಕ್ತಿತ್ವ ಪೂರ್ಣಗೊಳ್ಳುವುದಿಲ್ಲ.

ಇವೆಲ್ಲವುಗಳಿಗಿಂತ ಇವರು ಕನ್ನಡ ವಿಶ್ವವಿದ್ಯಾಲಯ ಹಂಪಿಯನ್ನು ಸ್ಥಾಪಿಸಿ ಕಟ್ಟಿ ಬೆಳೆಸಿ, ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಪುನರ್ ರೂಪಿಸಿದ ಸಂಸ್ಥಾಪಕ ಕುಲಪತಿಗಳೆಂದರೆ ಪೂರ್ಣಗೊಳ್ಳುಬಹುದು. ಅವರು ರಚಿಸಿದ ಅಷ್ಟು ಸಾಹಿತ್ಯ ಒಂದು ಭಾಗವಾದರೆ,ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಕಟ್ಟಿ ಬೆಳೆಸಿದ್ದು ಮತ್ತೊಂದು ಭಾಗ.ಇವರ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಂತೆ,ಕನ್ನಡ ನಾಡು ನುಡಿ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಪುನಃ ಸೃಷ್ಟಿಸಿದ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಗೂ ಇಷ್ಟೇ ದೊಡ್ಡ ಪ್ರಮಾಣದ ಪ್ರಶಸ್ತಿಯನ್ನು ಇವರಿಗೆ ನೀಡಬೇಕಾಗುತ್ತದೆ. ಕವಿತೆ ನಾಟಕ ಕಾದಂಬರಿ ಜಾನಪದ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ಪರಂಪರೆಯನ್ನು ಸೃಷ್ಟಿಸಿದವರು ಡಾ.ಕಂಬಾರರು.

ಜಾನಪದದ ಪರಂಪರೆಯನ್ನು ಉಳಿಸುವ, ಪುನರೂಪಿಸುವ ಬಹುಮುಖ್ಯ ಕಾರ್ಯವನ್ನು ಜೀವಂತ ಗೊಳಿಸುವ ಕಂಬಾರರ ಶ್ರಮ ಸೂಕ್ಷ್ಮವಾದದ್ದು. ಶ್ರಮ ಸಂಸ್ಕೃತಿಯ ಮನೆತನದಲ್ಲಿ ಹುಟ್ಟಿ ಬಂದಿರುವ ಕಂಬಾರರಿಗೆ ಸೂಕ್ಷ್ಮ ಸಂವೇದನೆಗಳು ಸಹಜವಾಗಿಯೇ ಇವರ ಸಾಹಿತ್ಯದಲ್ಲಿ ಮೂಡಿಬಂದಿವೆ. ಅವರ ಬಾಲ್ಯದ ಜಗತ್ತಾದ ಶಿವಪುರ ಕಂಬಾರರ ಮುಗ್ಧ ಜಗತ್. ಈ ಶಿವಪುರವನ್ನು ತಮ್ಮೆಲ್ಲ ಸಾಹಿತ್ಯ ಕಾದಂಬರಿಗಳಲ್ಲಿ ಅವರು ಧ್ಯಾನಿಸುತ್ತಾ ಬಂದಿದ್ದಾರೆ. ಬದುಕಿನ ನಿಗೂಢತೆ ಶೋಧವನ್ನು ತಮ್ಮ ಕಾವ್ಯ ಸಾಹಿತ್ಯದಲ್ಲಿ ಹುಡುಕುತ್ತಾರೆ.ವಿಶೇಷವಾಗಿ ಕಂಬಾರರು ಕಾಮದ ವಸ್ತುಗಳನ್ನು ತಮ್ಮ ಸಾಹಿತ್ಯದಲ್ಲಿ ಬಳಸಿಕೊಂಡಿದ್ದಾರೆ. ಇವರ ಕಾಮ ತುಂಬಾ ವಿಭಿನ್ನವಾಗಿ ಗಂಡು ಹೆಣ್ಣಿನ ಆಪ್ತ ಅನುರಾಗದ ಒಲಿಮೆಯಾಗಿ ಸಾಹಿತ್ಯದಲ್ಲಿ ಚಿತ್ರಿತವಾಗಿದೆ.

ನಮ್ಮ ತಲೆಮಾರಿನ ಬಹುತೇಕ ಅಕ್ಷರಸ್ಥ ಹಾಗೂ ಅನಕ್ಷರಸ್ಥ ಎಲ್ಲರಿಗೂ ಇವರದು ಪರಿಚಿತ ಹೆಸರು.ಗುಡ್ಡದ ಕೆಳಗೆ ಕುರಿ ಕಾಯುವ ಕುರಿಗಾರನಿಂದ ಹಿಡಿದು ವಿಧಾನಸೌಧದ ವರೆಗೆ,ದೆಹಲಿಯ ನಾಟಕ ಶಾಲೆ, ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಚಿಕಾಗೋ ವಿಶ್ವವಿದ್ಯಾಲಯ, ಅಮೆರಿಕನ್ ಓರಿಯಲ್ ಸೆಂಟರ್ ನ್ಯೂ ಯಾರ್ಕ್, ಬರ್ಲಿನ್, ಮಾಸ್ಕೋ, ಜಪಾನಿನ ಅಕೈತಾ ಮೊದಲಾದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಭಾರತೀಯ ಜಾನಪದ ಮತ್ತು ರಂಗಭೂಮಿಯ ಕುರಿತು ಅನೇಕ ಉಪನ್ಯಾಸಗಳನ್ನು ಸಹ ನೀಡಿದ್ದಾರೆ. ಅಂದರೆ ತಮ್ಮ ಹುಟ್ಟೂರಾದ ಘೋಡಗೆರೆಯಿಂದ ಚಿಕಾಗೋವರೆಗೂ ಇವರು ಪರಿಚಿತರು ಹಾಗೂ ಆತ್ಮೀಯರು. ನಮ್ಮ ತಲೆಮಾರಿನ ಜನರು ಇವರ ಹಾಡುಗಳನ್ನು ಕೇಳದೆ ಇರುವವರು ಹಾಗೂ ನಾಟಕಗಳನ್ನುನ್ನು ನೋಡದೆ ಇರುವವರು ಅಪರೂಪ.

ಕಂಬಾರರು ದೇಶಿಯತೆ ಹಾಗೂ ಜಾನಪದ ವಸ್ತುವನ್ನು ಒಳಗೊಂಡು ಸುಮಾರು ೧೦ಕ್ಕೂ ಹೆಚ್ಚು ಕವನ ಸಂಕಲನಗಳನ್ನು,೨೫ಕ್ಕೂ ಹೆಚ್ಚು ನಾಟಕಗಳನ್ನ, ೫ ಕಾದಂಬರಿಗಳನ್ನು ರಚನೆ ಮಾಡಿದ್ದಾರೆ ಇವುಗಳಲ್ಲಿ ಜೋಕುಮಾರಸ್ವಾಮಿ, ಸಂಗ್ಯಾ ಬಾಳ್ಯ, ಜೈ ಸಿದ್ದ ನಾಯಕ,ಕಾಡು ಕುದುರೆ, ಅಲಿಬಾಬಾ ಮತ್ತು ೪೦ ಕಳ್ಳರು, ಹರಕೆಯ ಕುರಿ, ಸಿರಿಸಂಪಿಗೆ, ಮಹಾಮಾಯಿ, ಶಿವರಾತ್ರಿ ಮೊದಲಾದವು. ಕವಿತೆ, ನಾಟಕ, ಕಾದಂಬರಿಗಳ ಜೊತೆಗೆ ಬಹು ಮುಖ್ಯವಾಗಿ ಅಧ್ಯಯನ ಮತ್ತು ಸಂಶೋಧನೆ ಮಾಡಿ ಉತ್ತರ ಕರ್ನಾಟಕದ ಜಾನಪದ ರಂಗಭೂಮಿ, ಕನ್ನಡ ನಾಟಕ ಸಂಪುಟ, ಕನ್ನಡ ಜಾನಪದ ವಿಶ್ವಕೋಶ ಎರಡು ಸಂಪುಟಗಳು, ನೆಲದ ಮರೆಯ ನಿಧಾನ ಹೀಗೆ ೧೬ ಸಂಶೋಧನಾ ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ.

ತಮ್ಮ ನಾಟಕಗಳನ್ನು, ಕಾದಂಬರಿಗಳನ್ನು ಚಲನಚಿತ್ರಕ್ಕೂ ಸಹ ಅಳವಡಿಸಿದವರು. ಸುಮಾರು ೫ ಚಲನಚಿತ್ರ ಗಳನ್ನು ಹಾಗೂ ಎಂಟು ಸಾಕ್ಷಿ ಚಿತ್ರಗಳನ್ನು ನಿರ್ಮಿಸಿರುವ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಇವರ ಕಾಡು ಕುದುರೆ ನಾಟಕ ಚಲನಚಿತ್ರವಾಗಿಯೂ ಪ್ರಸಿದ್ಧಿ ಪಡೆಯಿತು. ೧೯೭೮ ರಲ್ಲಿ ಭಾರತೀಯ ಮನೋರಮವನ್ನು ಪ್ರವೇಶಿಸಿತ್ತು ಈ ಚಿತ್ರದ ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯೂ ಸಹ ಲಭಿಸಿದೆ. ಕಂಬಾರರು ಅತ್ಯುತ್ತಮ ಚಲನಚಿತ್ರ ನಿರ್ದೇಶಕ, ಉತ್ತಮ ಚಲನಚಿತ್ರ ಕಥೆಗಾರ, ಉತ್ತಮ ಸಂಭಾಷಣೆಕಾರರು, ಸಂಗೀತ, ಚಲನಚಿತ್ರದ ಉತ್ತಮ ಸಂಗೀತ ನಿರ್ದೇಶಕ ಮೊದಲಾದ ಸಿನಿಮಾ ಪ್ರಶಸ್ತಿಗಳಿಗೆ ಸಹ ಇವರು ಪುರಸ್ಕೃತರಾಗಿದ್ದಾರೆ. ಮೂಡಲ ಮನೆ ಹಾಗೂ ಮಹಾನವಮಿ ಜನಪ್ರಿಯ ಧಾರವಾಹಿಗಳಿಗೆ ಟೈಟಲ್ ಸಾಂಗ್ ಸಹ ಇವರು ಬರೆದು ಸಂಗೀತ ಸಂಯೋಜನೆಯನ್ನು ಮಾಡಿದ್ದು ವಿಶೇಷ.

ಚಲನಚಿತ್ರ ಪ್ರಶಸ್ತಿಗಳ ಜೊತೆಗೆ ಇವರ ಶ್ರೇಷ್ಠ ಕೃತಿಗಳಿಗೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ಸಹ ಲಭಿಸಿವೆ. ಇವರ ಕವಿತೆ, ನಾಟಕ, ಕಾದಂಬರಿಯ ಐದು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ. ಆಂಧ್ರ ಸರ್ಕಾರದ ೨೦೦೫ರ ಅತ್ಯುತ್ತಮ ಕವಿ ಪ್ರಶಸ್ತಿ.ಸಿರಿ ಸಂಪಿಗೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ೧೯೯೭ ರಲ್ಲಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ. ೧೯೮೮ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ೨೦೦೨ ರಲ್ಲಿ ಕಬೀರ್ ಸನ್ಮಾನ ಪ್ರಶಸ್ತಿ.೨೦೦೪ರಲ್ಲಿ ಪಂಪ ಪ್ರಶಸ್ತಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಪದವಿ ಗೌರವ.೨೦೦೯ರಲ್ಲಿ ಕರ್ನಾಟಕ ಸರ್ಕಾರದ ದೇವರಾಜ ಅರಸು ಪ್ರಶಸ್ತಿ.೨೦೦೯ರಲ್ಲಿ ಟ್ಯಾಗೊರ್ ಪ್ರಶಸ್ತಿ.

೨೦೧೦ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಡಾ. ಕಂಬಾರರ ಸಾಹಿತ್ಯದ ಕಾರ್ಯಗಳನ್ನು ಕಂಡು ಇವರನ್ನು ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿಯ ಹಾಗೂ ನಾಟಕ ಅಕಾಡೆಮಿ ಸದಸ್ಯರಾಗಿ, ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ಕರ್ನಾಟಕ ರಂಗಾಯಣದ ಸದಸ್ಯರಾಗಿ ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯನಿರ್ವಾಹಕ ಸದಸ್ಯರಾಗಿ ಈಗ ಅಧ್ಯಕ್ಷರಾಗಿ ದೆಹಲಿಯ ಸಂಗೀತ ನಾಟಕ ಅಕಾಡೆಮಿ ರಾಷ್ಟ್ರೀಯ ನಾಟಕ ಶಾಲೆ ಉಪಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಸಂಸ್ಥಾಪಕ ಕುಲಪತಿಗಳಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಆ ಹುದ್ದೆಗಳಿಗೆ ಸಂಸ್ಥೆಗಳಿಗೆ ಘನತೆ ಗೌರವ ಮೌಲ್ಯಗಳನ್ನು ತಂದುಕೊಟ್ಟವರು.

ಡಾ. ಚಂದ್ರಶೇಖರ ಕಂಬಾರರು ಕನ್ನಡ ಸಾಹಿತ್ಯಕ್ಕೆ ದೇಸಿಯತೆ ಮತ್ತು ಜಾನಪದದಿಂದ ತಮ್ಮದೇ ಆದ ಕೊಡುಗೆಯನ್ನು ನೀಡಿ ಕನ್ನಡಕ್ಕೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟಿದ್ದು ಅವರ ಬದುಕಿನ ಒಂದು ಭಾಗವಾದರೆ, ಕನ್ನಡ ವಿಶ್ವವಿದ್ಯಾಲಯ ಹಂಪಿಯನ್ನು ಸ್ಥಾಪನೆಮಾಡಿ, ಸಂಸ್ಥಾಪಕ ಕುಲಪತಿಗಳಾಗಿ ಅದನ್ನು ಕಟ್ಟಿ ಬೆಳೆಸಿದ್ದು ಅವರ ಬದುಕಿನ ಮತ್ತೊಂದು ಭಾಗ ಅಂಥ ನಾನು ಭಾವಿಸಿದ್ದೇನೆ.

ಕನ್ನಡ ಕನ್ನಡಿಗ ಕರ್ನಾಟಕದ ಪರಂಪರೆ ಸಂಸ್ಕೃತಿ ಅಧ್ಯಯನ ಸಂಶೋಧನೆ ಮತ್ತು ಪ್ರಸಾರಗಳ ಬಹು ಮುಖ್ಯ ಹೊಣೆಯನ್ನು ಹೊತ್ತು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹಂಪಿಯಲ್ಲಿ ಸ್ಥಾಪಿತಗೊಂಡಿದೆ ಕನ್ನಡ ವಿಶ್ವವಿದ್ಯಾಲಯ ಹಂಪಿ.ಈ ವಿಶ್ವವಿದ್ಯಾಲಯಕ್ಕೆ ಈಗ ೩೩ ವರ್ಷಗಳು ಸ್ಥಾಪನೆಯಾಗಿ ಒಂದು ದಶಕದಲ್ಲೇ ಶತಮಾನ ಕಂಡ ವಿಶ್ವವಿದ್ಯಾಲಯಗಳು ಮಾಡದ ಸಾಧನೆಯನ್ನು ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿ ಹೆಸರು ಮಾಡಿದ್ದು ಈ ವಿಶ್ವವಿದ್ಯಾಲಯದ ಹೆಗ್ಗಳಿಕೆ ಇದಕ್ಕೆ ಕಾರಣೀಕರ್ತರು ಸಂಸ್ಥಾಪಕ ಕುಲಪತಿಗಳಾದ ಡಾ. ಚಂದ್ರಶೇಖರ್ ಕಂಬಾರ ಅವರು. ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸುವಲ್ಲಿ ಕಂಬಾರರ ಶ್ರಮ ಸಂಸ್ಕೃತಿ ಹಾಗೂ ಅವರ ಕನ್ನಡದ ಚಿಂತನೆ ಕನಸು ಕ್ರಿಯಾಶೀಲತೆ ಬಹು ಮುಖ್ಯ ಕೆಲಸವನ್ನು ಮಾಡಿದೆ ವಿಶ್ವವಿದ್ಯಾಲಯದ ಸ್ಥಾಪನೆ ಮತ್ತು ಬೆಳವಣಿಗೆ ಹಿಂದೆ ಅನೇಕ ರೋಚಕ ಕಥೆಗಳಿವೆ.

 

ಹಂಪಿಯ ಬಿಸಿಲು ಪ್ರದೇಶದಲ್ಲಿ ವಿಶ್ವ ವಿದ್ಯಾಲಯ ಪ್ರಾರಂಭ ಗೊಳ್ಳಬೇಕು ಎನ್ನುವಾಗ ಈಗಿನ ವಿದ್ಯಾರಣ್ಯ ಬಿಸಿಲನ್ನೇ ಹೊದ್ದು ಮಲಗಿತ್ತು. ಈ ಒಣ ಭೂಮಿಯಲ್ಲಿ ದೊಡ್ಡ ಕನಸು ಸಂಕಲ್ಪ ದೂರ ದೃಷ್ಟಿ ,ಕನ್ನಡದ ಚಿಂತನೆಯಿAದ ಭೌತಿಕವಾಗಿ ಹಾಗೂ ಬೌದ್ಧಿಕವಾಗಿಯೂ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಬೆಳೆಸಿದವರು.

ಕನ್ನಡ ವಿಶ್ವ ವಿದ್ಯಾಲಯದ ವಿಶೇಷ ಅಧಿಕಾರಿ ಯಾಗಿ ಸಂಸ್ಥಾಪಕ ಕುಲಪತಿಗಳಾಗಿ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ಎರಡು ಅವಧಿಯಲ್ಲಿ ಮುನ್ನಡೆಸಿದವರು. ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸರಕಾರ ಇವರನ್ನು ನೇಮಿಸಿದಾಗ, ವಿಶ್ವವಿದ್ಯಾಲಯಕ್ಕೆಬೇಕಾಗಿದ್ದ ಭೂಮಿಯನ್ನು ಸರಕಾರ ವಶಪಡಿಸಿಕೊಂಡ ಭೂಮಿಯ ನಕ್ಷೆ ಹಾಗೂ ವಿಶ್ವವಿದ್ಯಾಲಯದ ಅಧಿನಿಯಮದ ನಿಯಮಾವಳಿಯ ಪ್ರತಿಯನ್ನು ಹಿಡಿದುಕೊಂಡುಬAದು,ಈಗಿನ ವಿದ್ಯಾರಣ್ಯದಲ್ಲಿ ಕನ್ನಡದ ಜಗತ್ತನ್ನು ಸೃಷ್ಟಿಸಿದವರು ಡಾ. ಚಂದ್ರಶೇಖರ ಕಂಬಾರರು.

ಆರ್ಥಿಕ ಸೌಲಭ್ಯ, ಕನಿಷ್ಟಮೂಲಭೂತ ಸೌಕರ್ಯಗಳು ಹಾಗೂ ಮಾನವ ಸಂಪನ್ಮೂಲದ ಕೊರತೆಯ ಮಧ್ಯೆಯು,ನನ್ನಿಂದ ಆಗದು ಎನ್ನುವ ಮಾತೇ ಇಲ್ಲದೆ ಎಲ್ಲವನ್ನು ಜಾದುವಿನಂತೆ ಸೃಷ್ಟಿಸಿ ವಿಶ್ವವಿದ್ಯಾಲಯ ನಾಡಿನಲ್ಲಿ ತಲೆಯೆತ್ತಿ ನಿಲ್ಲುವಂತೆ ಮಾಡಿದ ಕೀರ್ತಿ ಕಂಬಾರರಿಗೆ ಸಲ್ಲುತ್ತದೆ. ಪಾದರಸದಂತೆ ಕ್ರಿಯಾಶೀಲರಾಗಿ ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು. ಕನ್ನಡ ವಿವಿ ಸ್ಥಾಪಿಸುವ ಸಂದರ್ಭ ವಿಚಾರವಾದಿ ಸಾಹಿತಿ ಹೆಚ್. ನರಸಿಂಹಯ್ಯ ಅವರನ್ನು ವಿಶ್ವವಿದ್ಯಾಲಯ ಕಟ್ಟುವ ಸ್ಥಳವನ್ನು ತೋರಿಸಲು ಕರೆದುಕೊಂಡು ಬಂದಾಗ, ಆ ಸ್ಥಳವನ್ನು ದೂರದಿಂದಲೇ ನೋಡಿದ ನರಸಿಂಹಯ್ಯನವರು ಈ ಸ್ಥಳದಲ್ಲಿ ವಿಶ್ವವಿದ್ಯಾಲಯವನ್ನು ಕಟ್ಟಲು ಸಾಧ್ಯವಿಲ್ಲವೆಂದು ಸ್ಥಳಕ್ಕೆ ಹೋಗದೆ ಅರ್ಧಹಾದಿಯಿಂದಲೆ ವಾಪಾಸ ಹೋದವರು.

ಡಾ. ಕಂಬಾರ ಅವರು ಅದೇ ಸ್ಥಳದಲ್ಲಿ ವಿವಿತೆಲೆಎತ್ತಿ ನಿಲ್ಲುವಂತೆ ಮಾಡಿ ನಾಡಿನ ಗಮನ ಸೆಳೆದಿದ್ದವರು. ಆ ಸ್ಥಳದಲ್ಲಿ ಏನನ್ನು ಕಟ್ಟಲು ಬೆಳೆಯಲು ಸಾಧ್ಯವಿಲ್ಲವೆಂದು ಭಾವಿಸಲಾಗಿತ್ತು ಅದೇ ಸ್ಥಳವು ಇವತ್ತು ನಂದನವನವಾಗಿದೆ ಕನ್ನಡ ನಾಡಿನ ಸಾಹಿತ್ಯ ಸಂಸ್ಕೃತಿ ಪರಂಪರೆಯನ್ನು ಅಧ್ಯಯನ ಮಾಡುವ ಸಂಶೋಧಿಸುವ ಹಾಗೂ ಪ್ರಕಟಿಸುವ ಕಾರ್ಯದ ಕೇಂದ್ರವಾಗಿದೆ. ವಿಶ್ವವಿದ್ಯಾಲಯದ ಕನ್ವಾಕೇಶನ್ನು ನುಡಿ ಹಬ್ಬ ಹಾಗೂ ಘಟಕೋತ್ಸವವೆಂದು ಪ್ರತಿ ವರ್ಷ ಆಚರಿಸುವ ಪದ್ಧತಿಯನ್ನು ಪ್ರಾರಂಭಿಸಿದರು.ಬೇರೆ ವಿಶ್ವವಿದ್ಯಾಲಯಗಳಲ್ಲಿ ಗೌನು ಟೊಪ್ಪಿಗೆಯನ್ನು ಹಾಕುವ ಪರಂಪರೆ ಇದ್ದರೆ ಕಂಬಾರರು ಕನ್ನಡ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಬಿಳಿ ಬಟ್ಟೆಗಳನ್ನು ಜರಿಶಲ್ಯವನ್ನು ಹಾಕಿಕೊಂಡು ಪದವಿ ಪ್ರಧಾನ ಮಾಡುವ ಹಾಗೂ ಪದವಿ ಪಡೆಯುವವರು ಅದೇ ಧೀರಿಸನ್ನು ಧರಿಸಬೇಕೆಂಬ ನಿಯಮವನ್ನು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದವರು.

ಇಷ್ಟೆ ಅಲ್ಲದೆ ಘಟ್ಟಿಕೋತ್ಸವವನ್ನು ಬಯಲು ರಂಗಮAದಿರ ನವರಂಗದಲ್ಲಿ ಏರ್ಪಡಿಸುವ ಮೂಲಕ ಸಾರ್ವಜನಿಕರು ಪಾಲ್ಗೊಳ್ಳುವಂತೆ ಮಾಡಿದ ಘನತೆ ಗೌರವ ಕಂಬಾರರಿಗೆ ಸಲ್ಲುತ್ತದೆ.ಇಂದಿಗೂ ಘಟಿಕೋತ್ಸವದಲ್ಲಿ ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಇದನ್ನೆ ಹೊಸವಿಶ್ವವಿದ್ಯಾಲಯಗಳು ಅನುಸರಿಸುತ್ತವೆ. ಡಾ. ಕಂಬಾರರಿಗೂ ಅವಿಭಾಜಿತ ಬಳ್ಳಾರಿ ಜಿಲ್ಲೆಗೂ ಒಂದು ಅವಿನಾಭಾವ ಸಂಬAಧವಿದೆ.ಇವರ ಜೋಕುಮಾರ ಸ್ವಾಮಿ ಹಾಗೂ ಸಂಗ್ಯಾ ಬಾಳ್ಯಾ ನಾಟಕಗಳನ್ನು ಮೊಟ್ಟಮೊದಲ ಬಾರಿಗೆ ರಂಗಭೂಮಿಯಲ್ಲಿ ನಿರ್ದೇಶನ ಮಾಡಿ ಹಡಗಲಿಯ ರಂಗ ಭಾರತೀಯ ಮೂಲಕ ಪ್ರದರ್ಶನ ಮಾಡಿದವರು

ಸಾಂಸ್ಕೃತಿಕ ರಾಯಭಾರಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು. ಹಡಗಲಿಯಲ್ಲಿ ಈ ಪ್ರಯೋಗಗಳನ್ನು ಮಾಡಿ ನಾಡಿನ ತುಂಬಾ ಪ್ರದರ್ಶಿಸಿದರು ಅಂದಿನಿAದ ಈಹೋತ್ತಿನ ತನಕ ಈ ನಾಟಕಗಳು ಅತ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಈಗ ಮತ್ತೆ ಅದೇ ಜೋಕುಮಾರಸ್ವಾಮಿ ನಾಟಕ ಇದೇ ಸ್ಥಳದಲ್ಲಿ ಪ್ರದರ್ಶನ ಕೊಳ್ಳುತ್ತಿರುವುದು ವಿಶೇಷವಾಗಿದೆ.ಕನ್ನಡ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಸಂದರ್ಭದಲ್ಲಿ ಎಂಪಿ ಪ್ರಕಾಶರ ಕನ್ನಡ ಸಂಸ್ಕೃತಿ ಸಚಿವರಾಗಿ ಕಂಬಾರರೊAದಿಗೆ ಕೈಜೋಡಿಸಿ ಅವರ ಬೆಂಬಲಕ್ಕೆ ನಿಂತು ಕನ್ನಡ ವಿಶ್ವವಿದ್ಯಾಲಯವು ತಲೆಯೆತ್ತಿ ನಿಲ್ಲುವಂತೆ ಮಾಡಿದವರು.

ಇವರುಗಳ ಹಲವು ವರ್ಷಗಳ ಗೆಳತನದಿಂದ ಕಂಬಾರರು ಕನ್ನಡ ವಿಶ್ವದ್ಯಾಲಯವನ್ನು ಕಟ್ಟುವ ಸಂದರ್ಭದಲ್ಲಿ ಎಂ. ಪಿ. ಪ್ರಕಾಶರು ಕಂಬಾರರ ಬೆಂಬಲಕ್ಕಿದ್ದವರು. ಸ್ನೇಹದ ಕಾರಣದಿಂದಾಗಿಯೇ ಅವರು ಜೋಕುಮಾರಸ್ವಾಮಿ ನಾಟಕದಿಂದ ಕನ್ನಡ ವಿಶ್ವವಿದ್ಯಾಲಯವನ್ನು ಕಟ್ಟುವ ಸಂದರ್ಭದಯು ಪರಸ್ಪರಲ್ಲಿಯು ಸಹಕಾರ, ಸ್ನೇಹದಿಂದ ಇದ್ದವರು.

ಡಾ. ಚಂದ್ರಶೇಖರ್ ಕಂಬಾರ ಅವರು ತಮ್ಮ ವ್ಯಯಕ್ತಿಕ ಬದುಕು ಮತ್ತು ಸಾಹಿತ್ಯದಲ್ಲಿ ನುಡಿದಂತೆ ನಡೆದು ತೋರಿಸಿರುವವರು. ಘೋಡಗೇರಿಯಿಂದ ಹಂಪಿಯವರೆಗೆ ಅವರ ನಡೆದು ಬಂದ ಹಾದಿಯ ಚರಿತ್ರೆ ಅದ್ಭುತವಾಗಿದೆ.ಇತರೆ ಸಾಹಿತಿಗಳಿಗಿಂತ ಅವರು ವಿಭಿನ್ನಹಾಗೂ ವಿಶಿಷ್ಟ ವ್ಯಕ್ತಿತ್ವದವರು ಅಂತ ಹೇಳಿದೆ ಪ್ರಾರಂಭದಲ್ಲಿ ಹೇಳಿದೆ,ಹೌದು ಅವರು ಕನ್ನಡ ವಿಶ್ವವಿದ್ಯಾಲಯವನ್ನು ತಮ್ಮ ಕನಸಿನ ಅಥವಾ ಕಲ್ಪನೆಯಂತೆ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಕಟ್ಟುವ ಸಂದರ್ಭದಲ್ಲಿ ತಮ್ಮ ಕನಸಿನಂತೆ ಕಟ್ಟಡವನ್ನು ನಿರ್ಮಿಸದಿದ್ದರೆ ಅದನ್ನು ಕೆಡವಿ ಮತ್ತೊಮ್ಮೆ ಕಟ್ಟಿದ ಸಂದರ್ಭಗಳಿವೆ.ಹಾಗೂ ಇದುವರೆಗೂ ಜ್ಞಾನಪೀಠ ಪ್ರಶಸ್ತಿ ಪಡೆದವರು ಕುವೆಂಪು ಆದಿಯಾಗಿ ಎಲ್ಲರೂ ದೆಹಲಿಗೆ ಹೋಗಿ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡು ಬಂದವರು.

ಆದರೆ ಕಂಬಾರರು ಜ್ಞಾನಪೀಠ ಪ್ರಶಸ್ತಿಯನ್ನು ತಮ್ಮ ತವರು ಜಿಲ್ಲೆಗೆ ತರಿಸಿಕೊಂಡು ಪಡೆದುಕೊಂಡವರು . ಹೌದು ಇವರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅದನ್ನು ತಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ಪಡೆಯಬೇಕೆಂಬ ಕನಸನ್ನು ಕಂಡವರು. ಅದಕ್ಕಾಗಿ ಜ್ಞಾನಪೀಠ ಸಮಿತಿಯವರಿಗೆ ಮನವಿ ಮಾಡಿಕೊಂಡು ಪ್ರಧಾನ ಮಾಡಬೇಕೆಂದು ಮನವಿ ಮಾಡಿಕೊಂಡುರು. ಅದರಂತೆ. ಜ್ಞಾನಪೀಠ ಪ್ರಶಸ್ತಿಯ ಅಧ್ಯಕ್ಷರು ಹಾಗೂ ಅಂದಿನ ರಾಷ್ಟ್ರಪತಿಗಳಾಗಿದ್ದ ಪ್ರಣವ್ ಮುಖರ್ಜಿ ಅವರು ಬೆಳಗಾವಿಗೆ ಬಂದು ಜ್ಞಾನಪೀಠ ಪ್ರಶಸ್ತಿಯನ್ನು ಡಾ. ಚಂದ್ರಶೇಖರ ಕಂಬಾರರಿಗೆ ತವರಿನಲ್ಲಿ ಪ್ರಧಾನ ಮಾಡಿದ್ದುರು.

ಇದು ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆದ ಹೆಗ್ಗಳಿಕೆ ಡಾ. ಕಂಬಾರ ಸರ್ ಗೆ ಸಲ್ಲುತ್ತದೆ. ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಕಂಬಾರರಷ್ಟು ಶಕ್ತಿವಂತರು ಮತ್ಯಾರು ಇರಲು ಸಾಧ್ಯವಿಲ್ಲ. ಹೀಗಾಗಿಯೇ ಸಾಹಿತ್ಯ ಕ್ಷೇತ್ರದಲ್ಲಿ ಕಂಬಾರರದು ವಿಶಿಷ್ಟ ಹಾಗೂ ವಿಭಿನ್ನ ವ್ಯಕ್ತಿತ್ವ. ಕನ್ನಡ ಸಾಹಿತ್ಯ ಹಾಗೂ ಜ್ಞಾನಪೀಠ ಪರಂಪರೆಯನ್ನು ನೋಡಿದಾಗ ಕುವೆಂಪು ಬೇಂದ್ರೆ ಕಾರಂತ, ಮಾಸ್ತಿ,ಗೋಕಾಕ್ ಇವರುಗಳು ಒಂದು ಕಾಲಘಟ್ಟದ ಸಾಹಿತ್ಯದ ಸಂದರ್ಭದಲ್ಲಿ ಸಾಹಿತ್ಯವನ್ನು ರಚನೆ ಮಾಡಿ ಕನ್ನಡಕ್ಕೆ ಅಷ್ಟು ಜ್ಞಾನಪೀಠಗಳನ್ನು ತಂದುಕೊಟ್ಟರೆ ಅನಂತಮೂರ್ತಿ ಗಿರೀಶ್ ಕಾರ್ನಾಡ್ ಚಂದ್ರಶೇಖರ ಕಂಬಾರ ಇವರುಗಳು ನಮ್ಮ ತಲೆಮಾರಿನ ಕಾಲಘಟ್ಟದ ಸಾಹಿತಿಗಳು. ಈ ಆತ್ಮೀಯ ಗೆಳೆಯರು ಒಬ್ಬರಾದ ನಂತರ ಒಬ್ಬರು ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದು ಕೊಟ್ಟವರು. ನಮ್ಮ ಮಧ್ಯ ಇರುವ ಡಾ. ಕಂಬಾರ್ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಮಹಾಕನಸಿನ ಕವಿ.

Please follow and like us:

 

 

 

 

 

 

Translate »
[t4b-ticker]
error: Content is protected !!