https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹೊಸಪೇಟೆ
ಜೆಸಿಐ ಹೊಸಪೇಟೆ ಘಟಕದ ನೂತನ ಅಧ್ಯಕ್ಷರಾಗಿ ರೇಖಾಶಿವರಾಜ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು.
ನಗರದ ಹಂಪಿ ಇಂಟರ್ ನ್ಯಾಷನಲ್ ಹೋಟೇಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಘಟಕದ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಜೆಸಿಐನ ನೀತಿ-ನಿಯಮಗಳ ಅಡಿಯಲ್ಲಿ ಶಿಸ್ತಿನಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು. “ಜೆಸಿಐ ಸಂಸ್ಥೆಯು ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಮತ್ತು ಸಕಾರಾತ್ಮಕ ಬದಲಾವಣೆಯನ್ನು ತರುವ ಧ್ಯೇಯವನ್ನು ಹೊಂದಿದೆ. ಸಂಸ್ಥೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಗೆ, ಸಮುದಾ ಯದ ಅಭಿವೃದ್ಧಿಗಾಗಿ ಶ್ರಮಿಸುವುದು ನನ್ನ ಆದ್ಯತೆಯಾಗಿದೆ ಎಂದು ತಿಳಿಸಿದರು.

ಮಾನವ ವ್ಯಕ್ತಿತ್ವದ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ ಎಂಬ ಜೆಸಿಐನ ಮೂಲತತ್ವದಂತೆ, ಘಟಕದ ಮೂಲಕ ವಿವಿಧ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಹಾಗೂ ಜನಪರ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು. ಸದಸ್ಯರ ನಾಯಕತ್ವ ಬೆಳವಣಿಗೆಗೆ ಪೂರಕವಾದ ವೇದಿಕೆಯನ್ನು ಕಲ್ಪಿಸುವ ಮೂಲಕ ಜೆಸಿಐ ಹೊಸಪೇಟೆ ಘಟಕವನ್ನು ಮಾದರಿಯನ್ನಾಗಿ ರೂಪಿಸಲಾಗುವುದು ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜೆಸಿಐ ಹೊಸಪೇಟೆ ಘಟಕದ ಕಾರ್ಯದರ್ಶಿಯಾಗಿ ಜೆಸಿ ದೀಪಾ ಅಧಿಕಾರವಹಿಸಿಕೊಂಡರು. ೨೦೨೫ರ ಅಧ್ಯಕ್ಷರಾಗಿದ್ದ ಹರಿಶ್ ಬಡಿಗೇರ ಅವರು ಅಧಿಕಾರ ಹಸ್ತಾಂತರ ಮಾಡಿದರು. ಜೆಸಿಐ ನಿಕಟಪೂರ್ವ ಅಧ್ಯಕ್ಷರಾದ ಎಂ.ಆರ್. ವೀರಭದ್ರ, ಜೆಎಫ್‌ಡಿ ಮಧುಸೂದನ ನಾವಡ, ಜೆಸಿ ಅಮೃತ್ ಸಿ, ಮುಖ್ಯ ಅತಿಥಿಯಾಗಿ ಕವಿತಾ ಈಶ್ವರಸಿಂಗ್, ಜೆ.ಸಿ.ಅಶೋಕಕುಮಾರ ಸೇರಿದಂತೆ ಜೆಸಿಐನ ಪದಾಧಿಕಾರಿಗಳಾದ ಶರ್ವಾಣಿ ಕಾಕುಬಾಳ್, ಡಾ.ಶಬ್ಬೀರ್ ಅಹ್ಮದ್, ಶಿವಪ್ರಸಾದ, ಸಮೀರ್ ಅಹ್ಮದ್, ಶ್ರೀವತ್ಸ, ಅಶೋಕ ಕುಮಾರ್, ದೀಪಾ, ಚಂದ್ರು ಎಚ್.ಎಂ. ಸೋಹನ್ ಎಚ್.ಪಿ. ಅಶೋಕ್ ಪಾಟಿಲ್ ಸೇರಿದಂತೆ ಜೆಸಿಐ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್