https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಕೊಟ್ಟೂರು
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಕೇವಲ ಪಠ್ಯಪುಸ್ತಕದ ಜ್ಞಾನ ನೀಡುವುದಕ್ಕಿಂತ, ಅವರಲ್ಲಿ ಶಿಸ್ತು, ಸಂಸ್ಕಾರ ಮತ್ತು ಗುಣಮಟ್ಟದ ಶಿಕ್ಷಣವನ್ನು ಮೈಗೂಡಿಸಿ ಸದೃಢ ಸಮಾಜ ನಿರ್ಮಾಣ ಮಾಡುವುದು ಅತ್ಯಗತ್ಯ ಎಂದು ಮಾತನಾಡಿದ ಮಹಾದೇವ ವಿದ್ಯಾ ಪ್ರಸಾರ ಪರಿಷತ್‌ನ ಆಡಳಿತಾಧಿಕಾರಿ ಪಂಪಾಪತಿ ಬಸಾಪುರ ಹೇಳಿದರು.
ಇದನ್ನೂ ಓದಿ: ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಕಲೋತ್ಸವ ಸೂಕ್ತ ವೇದಿಕೆ

ಪಟ್ಟಣದ ಮಹಾದೇವ ಆಂಗ್ಲ ಮಾಧ್ಯಮ ಪೂರ್ವ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.”ನಮ್ಮ ಸಂಸ್ಥೆಯು ಕಳೆದ ಮೂರು ದಶಕಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ನೀಡುತ್ತಾ ಬಂದಿದೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯು ಅತ್ಯುತ್ತಮ ಫಲಿತಾಂಶ ಪಡೆಯುತ್ತಿದ್ದು, ಈ ವರ್ಷ ವಿದ್ಯಾರ್ಥಿಗಳು ಪೂರ್ಣ ಅಂಕಗಳನ್ನು ಗಳಿಸುವ ವಿಶ್ವಾಸವಿದೆ” ಎಂದರು.
ಇದನ್ನೂ ಓದಿ: ನಿಶಾ ಐಎಫ್‌ಎಸ್‌ಗೆ ಆಯ್ಕೆ ಗ್ರಾಮೀಣ ಪ್ರತಿಭೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಸಾಧನೆ
ಪತ್ರಕರ್ತ ಸುರೇಶ ದೇವರಮನಿ ಮಾತನಾಡಿ, ಮಹಾದೇವ ಶಾಲೆ ಜಿಲ್ಲೆಯಲ್ಲಿಯೇ ಹೆಸರುವಾಸಿಯಾಗಲು ಗುಣಮಟ್ಟದ ಶಿಕ್ಷಣವೇ ಕಾರಣ. ಸಂಸ್ಥೆಯ ಏಳಿಗೆಗಾಗಿ ಪಂಪಾಪತಿ ಬಸಾಪುರ ಹಾಗೂ ಅವರ ಪತ್ನಿ ಸರೋಜಾ ಅವರು ಪಡುತ್ತಿರುವ ಶ್ರಮ ಶ್ಲಾಘನೀಯ ಎಂದರು.
ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಹಾಡು, ನೃತ್ಯ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಸರೋಜಾ ಪಂಪಾಪತಿ, ಖಜಾಂಚಿ ಬಿ.ಮೇಘಅರುಣ, ನಿರ್ದೇಶಕಿ ಬಿ.ಮಾನಸಮಧು, ಮುಖ್ಯ ಶಿಕ್ಷಕ ಪ್ರದೀಪ್, ಶಿಕ್ಷಕರಾದ ಹರಪನಹಳ್ಳಿ ಕೊಟ್ರೇಶ್, ಚಪ್ಪರದಹಳ್ಳಿ ಕೊಟ್ರೇಶ್, ಸಂಜಯ ಪ್ರಮುಖರಾದ ವೀಣಾ ಅಪೂರ್ವ ಉಪಸ್ಥಿತರಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಫೆಬ್ರವರಿಯಲ್ಲಿ ಶ್ರೀ ವಾಲ್ಮೀಕಿ ಜಾತ್ರೋತ್ಸವ
ಯಾರೂ ನಿರ್ಲಕ್ಷ್ಯವಹಿಸಬಾರದು: ಡಿ.ವೈ.ಎಸ್.ಪಿ ಸಂತೋಷ್ ಚೌಹಾಣ್