https://youtu.be/NHc6OMSu0K4?si=SI_K4goOPEgwo6h2

ಐತಿಹಾಸಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೂ ಕಲೆ ಮತ್ತು ಸಂಸ್ಕೃತಿಯ ಮೂಲಕ ಜನಮನವನ್ನು ಬೆಸೆಯುವ ಉದ್ದೇಶದಿಂದ ಹಂಪಿಯಲ್ಲಿ ಈ ಬಾರಿಯ ಸಾಂಸ್ಕೃತಿಕ ವೈಭವಕ್ಕೆ ಕ್ಷಣಗಣನೆ ಆರಂಭವಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಇದನ್ನೂ ಓದಿ: ವಿಜಯನಗರ ಜಿಲ್ಲಾಧಿಕಾರಿಯಾಗಿ ಕವಿತಾ ಎಸ್ ಮಣ್ಣಿಕೇರಿ ನೇಮಕ, ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ
ಹೊಸಪೇಟೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಫೆ.13, 14 ಮತ್ತು 15ರಂದು ಮೂರು ದಿನಗಳ ಕಾಲ ‘ಹಂಪಿ ಉತ್ಸವ-2026’ ಅತ್ಯಂತ ಅದ್ದೂರಿಯಾಗಿ ಜರುಗಲಿದೆ.

3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದು, ಅಂದು ಹಂಪಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಈ ಬಾರಿಯ ಉತ್ಸವಕ್ಕಾಗಿ ಎಂ.ಪಿ. ಪ್ರಕಾಶ್ ವೇದಿಕೆ (ಪ್ರಧಾನ ವೇದಿಕೆ), ಕೃಷ್ಣದೇವರಾಯ ವೇದಿಕೆ, ವಿರೂಪಾಕ್ಷ ವೇದಿಕೆ ಸೇರಿ ಒಟ್ಟು 6 ಬೃಹತ್ ವೇದಿಕೆಗಳನ್ನು ನಿರ್ಮಿಸಲಾಗಿದೆ. ಪ್ರಧಾನ ವೇದಿಕೆಯಲ್ಲಿ 50,000 ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದ್ದು, ಒಟ್ಟಾರೆ 8 ರಿಂದ 10 ಲಕ್ಷ ಜನರು ಸೇರುವ ನಿರೀಕ್ಷೆಯಿದೆ.
ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿಯಾಗಿ 15,000 ಆಸನಗಳನ್ನು ಕಾಯ್ದಿರಿಸಲಾಗಿದೆ. ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಗಣೇಶ್ ಸೇರಿ ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಉತ್ಸವಕ್ಕೆ ಮೆರುಗು ನೀಡಲಿದ್ದಾರೆ. ಭದ್ರತೆಗಾಗಿ 2,000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಇದರಲ್ಲಿ ಒಬ್ಬ ಎಸ್‌ಪಿ, 8 ಅಡಿಷನಲ್ ಎಸ್‌ಪಿ, 15 ಡಿವೈಎಸ್‌ಪಿ ಮತ್ತು 61 ಇನ್ಸ್‌ಪೆಕ್ಟರ್‌ಗಳು ಒಳಗೊಂಡಿದ್ದಾರೆ. ಸಾರ್ವಜನಿಕರಿಗೆ ಉಚಿತ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಸಿಇಒ ಎನ್ .ಎಂ.ಅಲಿ ಅಕ್ರಂ ಷಾ, ಎಸ್‌ಪಿ ಜಾಹ್ನವಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





More Stories
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಹಂಪಿ ಉತ್ಸವ: ನೀಲಿ ಬಾನಲ್ಲಿ ಪಟಗಳ ಪೈಪೋಟಿ
ವಸಂತ ವೈಭವ: ರಕ್ಕಸರ ಅಬ್ಬರ, ಹಾಸ್ಯದ ದರ್ಬಾರ್