https://youtu.be/NHc6OMSu0K4?si=SI_K4goOPEgwo6h2

ಹೂವಿನ ಹಡಗಲಿ: 2025-26 ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚು ಮಾಡಲು ಮಿಷನ್ 40 ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ವಿ ಪೂಜಾರ ಹೇಳಿದರು.
ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಶನಿವಾರ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ತಾಲೂಕು ಮುಖ್ಯ ಗುರುಗಳ ಶೈಕ್ಷಣಿಕ ಪ್ರಗತಿ ಸಭೆಯಲ್ಲಿ ಮಾತನಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ ಎಲ್ಲಾ ಪ್ರೌಢಶಾಲೆಗಳಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಬೇಕು. ಇದಕ್ಕೆ ಪೂರಕವಾಗಿ ಆರು ವಿಷಯಗಳಿಗೆ ಪ್ರತಿ ವಾರ
ಮಿಷನ್ 40 ವ್ಯಾಪ್ತಿಗೆ ಬರುವ ನಿಧಾನಗತಿ ಕಲಿಕೆಯ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ ಮಾರ್ಗದರ್ಶನ ನೀಡಿರಿ ಎಂದು ತಿಳಿಸಿದರು.
ಟಾರ್ಗೆಟ್ 625: ಪ್ರತಿ ಪ್ರೌಢಶಾಲೆಯಿಂದ 625 ಅಂಕ ಗಳಿಸುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಪರೀಕ್ಷಾ ಮಂಡಳಿಯ ಜಾಲತಾಣದಲ್ಲಿ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿಸಬೇಕು. ಎಲ್ಲಾ ವಿಷಯಗಳ ಬಗ್ಗೆ ನೀಲ ನಕಾಶೆ ಪ್ರತಿ ಘಟಕಗಳಿಗೆ ಇರುವ ಅಂಕಗಳ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿರಿ ಎಂದು ಹೇಳಿದರು.
ಶೇಕಡಾ 100: ಈ ಬಾರಿ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆಯಲು ನಿರ್ಧಿಷ್ಟ ಗುರಿ ಸಾಧಿಸುವ ದಿಕ್ಕಿನೆಡೆಗೆ ಪ್ರಯತ್ನ ಮಾಡಿರಿ ಎಂದರು.

ಪಟ್ಟಣದ ಸೊಪ್ಪಿನ ಕಾಳಮ್ಮ ಬಾಲಕಿಯರ ಪ್ರೌಢಶಾಲೆ ಇಟ್ಟಿಗಿ, ಉತ್ತಂಗಿ ಸರ್ಕಾರಿ ಪ್ರೌಢಶಾಲೆಗಳು ಹಾಗೂ ದಾಸರಹಳ್ಳಿ ತಾಂಡಾ ಪ್ರಾಥಮಿಕ ಶಾಲೆ ನಾಲ್ಕು ಶಾಲೆಗಳು ಕೆ ಪಿ ಎಸ್ ಶಾಲೆಗಳಾಗಿ ಆಯ್ಕೆ ಆಗಿವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಎ ಕೋಟೆಪ್ಪ ಯು ಡೈಸ್ ಅಪಾರ್ ಐಡಿ ಎಸ್ ಎ ಟಿ ಎಸ್ ಬಗ್ಗೆ ಮಾಹಿತಿ ನೀಡಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ ಹನುಮಂತಪ್ಪ ಪ್ರತಿನಿತ್ಯ ಮಧ್ಯಾಹ್ನ 2 ಗಂಟೆಯೊಳಗೆ ಬಿಸಿಯೂಟ ಮೊಟ್ಟೆ ಬಾಳೇಹಣ್ಣು ಫಲಾನುಭವಿಗಳ ಮಾಹಿತಿ ಇಂದೀಕರಿಬೇಕು. ಶಾಲೆಗಳಿಗೆ ಪೂರೈಕೆ ಆಗುವ ಅಕ್ಕಿ ಬೇಳೆ ಗೋಧಿ ಕೆಡದಂತೆ ಸ್ವಚ್ಛಗೊಳಿಸಿ ಅಡುಗೆಗೆ ಬಳಸಿರಿ ಎಂದು ಹೇಳಿದರು.
ತಾಲೂಕು ಪ್ರೌಢಶಾಲಾ ಮುಖ್ಯ ಗುರುಗಳ ಸಂಘದ ಅಧ್ಯಕ್ಷ ಜಿ ಎಂ ಕಾಂತೇಶ್ ಉಪ ಪ್ರಾಂಶುಪಾಲ ರವೀಂದ್ರನಾಥ ಬಿ ಉಪಸ್ಥಿತರಿದ್ದರು.
ಶಿಕ್ಷಣ ಸಂಯೋಜಕ ಹಣ್ಣಿ ನರೇಶ್ ನಿರ್ವಹಿಸಿದರು.
ತಾಲೂಕಿನ ಸರ್ಕಾರಿ ಅನುದಾನಿತ ಅನುದಾನರಹಿತ ಮೊರಾರ್ಜಿ ದೇಸಾಯಿ ವಸತಿ ಪ್ರೌಢಶಾಲೆಗಳ ಮುಖ್ಯ ಗುರುಗಳು ಸಭೆಯಲ್ಲಿ ಭಾಗವಹಿಸಿದ್ದರು.





More Stories
ಫೆ.13 ರಿಂದ 3ದಿನ ‘ಹಂಪಿ ಉತ್ಸವ-2026ಕ್ಕೆ ಸಿಎಂ ಚಾಲನೆ : ಸಚಿವ ಜಮೀರ್ ಖಾನ್
ಆಕಾಶಕ್ಕೆ ರೆಕ್ಕೆ ಕಟ್ಟಿದ ಕನಸು“ತನುಷ್ಕಾ ಸಿಂಗ್”ಯಶೋಗಾಥೆ
ನೈಜ ಕಲಾವಿದರಿಗೆ ಪ್ರಶಸ್ತಿ ತಪ್ಪಬಾರದು: ನಿಷ್ಠಿ ರುದ್ರಪ್ಪ