December 15, 2025

Hampi times

Kannada News Portal from Vijayanagara

ನಿಗದಿತ ಸಮಯದೊಳಗೆ ಆದಾಯ ತೆರಿಗೆ ಪಾವತಿಸಿ

https://youtu.be/NHc6OMSu0K4?si=SI_K4goOPEgwo6h2

 

ಹಂಪಿಟೈಮ್ಸ್ ಹಗರಿಬೊಮ್ಮನಹಳ್ಳಿ.

ಆದಾಯಕ್ಕೆ ಅನುಗುಣವಾಗಿ ಸರಿಯಾದ ಸಮಯಕ್ಕೆ ಆದಾಯ ತೆರಿಗೆ ಪಾವತಿಸುವ ಮೂಲಕ ದಂಡ ಮತ್ತು ಬಡ್ಡಿಯಂತಹ ಮಾನದಂಡಗಳಿAದ ದೂರವಿರಿ ಎಂದು ಆದಾಯ ತೆರಿಗೆ ಅಧಿಕಾರಿ ಕೆ.ಲೋಕೇಶ್ ಹೇಳಿದರು.

ಇದನ್ನೂ ದಿ: ಹಂಪಿ ದೇವಸ್ಥಾನ ಪ್ರವೇಶಕ್ಕೆ ತುಂಡುಡುಗೆ ನಿಷೇಧ, ಭಕ್ತರಿಗೆ ಶುಲ್ಕ ರಹಿತ ಪಂಚೆ ವಿತರಣೆ: ಡಿಸಿ ದಿವಾಕರ

 

ಪಟ್ಟಣದ ಗುರುಭವನದಲ್ಲಿ ಛೇಂಬರ್ ಆಫ್ ಕಾಮರ್ಸ್, ಡಿಆರ್‌ಸಿಎಸ್ ವಿಜಯನಗರ ಜಿಲ್ಲೆ, ಚಾರ್ಟೆರ್ಡ್ ಅಕೌಂಟೆAಟ್‌ಗಳು ಮತ್ತು ಆದಾಯ ತೆರಿಗೆ ಸಲಹೆಗಾರರು ಹಾಗೂ ವ್ಯಾಪಾರಿ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಆದಾಯ ತೆರಿಗೆ ಕಾನೂನಿನ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿದರು, ವ್ಯಾಪಾರಸ್ಥರು, ನೌಕರರು ಹಾಗೂ ಸಹಕಾರಿ ಸಂಸ್ಥೆಗಳು ಸೇರಿದಂತೆ ವಿವಿಧ ಮೂಲಗಳಿಂದ ತಮಗೆ ಬರುವ ಆದಾಯದ ಪ್ರಕಾರ ಆದಾಯ ತೆರಿಗೆ ವರದಿ ಸಲ್ಲಿಸುವ ವಿಧಾನ, ಮುಂಗಡ ತೆರಿಗೆ ಪಾವತಿ, ಹೊಸ ಆದಾಯ ತೆರಿಗೆ ಪದ್ಧತಿ ಹಾಗೂ ತಡವಾಗಿ ಸಲ್ಲಿಸುವ ಇಟಿಆರ್-ಯು ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಆದಾಯ ತೆರಿಗೆಯನ್ನು ಸಮಯಕ್ಕೆ ಸರಿಯಾಗಿ ಪಾವತಿಸಿ ದಂಡ ಮತ್ತು ಬಡ್ಡಿಯಂತಹ ಮಾನದಂಡಗಳಿAದ ದೂರವಿರುವಂತೆ ತಿಳಿಸಿದರು.

ಇದೇ ವೇಳೆ ಚಾರ್ಟೆರ್ಡ್ ಅಕೌಂಟೆAಟ್ ಅಕ್ಕಿ ಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ವ್ಯಾಪಾರಸ್ಥರಿಗೆ ಅನುಕೂಲವಾಗಲೆಂದು ಆದಾಯ ತೆರಿಗೆಯ ಬಗ್ಗೆ ಜಾಗೃತಿ ಕಾರ್ಯಕ್ರಮದ ಮೂಲಕ ಪರಿಪೂರ್ಣ ಮಾಹಿತಿ ನೀಡಲಾಗುತ್ತಿದೆ. ಅಧಿಕಾರಿಗಳು ವ್ಯಾಪಾರಸ್ಥರಿಗೆ ಸ್ನೇಹದಾಯಕವಾಗಿ ಮಾಹಿತಿ ನೀಡುವ ಮೂಲಕ ಗೊಂದಲಗಳನ್ನು ಬಗೆಹರಿಸುವಲ್ಲಿ ಸಹಕರಿಸುತ್ತಿದ್ದು ಪ್ರತಿಯೊಬ್ಬರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು. ಆದಾಯ ತೆರಿಗೆ ಪಾವತಿಯ ನಿಯಮಗಳು ಹಾಗೂ ಆದಾಯ ತೆರಿಗೆ ಇಲಾಖೆಯು ತೆರಿಗೆ ಪಾವತಿದಾರರಿಗೆ ನೀಡಿರುವ ವಗ್ದಾನಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಛೇಂಬರ್ ಆಫ್ ಕಾಮರ್ಸ್ನ ಅಧ್ಯಕ್ಷ ಮೃತ್ಯುಂಜಯ ಬಾದಾಮಿ, ವಾಣಿಜ್ಯ ತೆರಿಗೆ ಅಧಿಕಾರಿ ಪ್ರವೀಣ್, ಚಾರ್ಟೆರ್ಡ್ ಅಕೌಂಟೆAಟ್ ಸರ್ಪಭೂಷಣ, ಆಡಿಟರ್ ಬಿ.ನಟರಾಜ, ಜವಳಿ ವರ್ತಕರ ಸಂಘದ ಅಧ್ಯಕ್ಷ ಸಾಲ್ಮನಿ ನಾಗರಾಜ, ಆದಾಯ ತೆರಿಗೆ ಸಲಹೆಗಾರರು, ಬಿಡಿಸಿಸಿ ಬ್ಯಾಂಕ್ ಸಿಬ್ಬಂದಿ, ನೌಕರರ ಸಂಘದ ಪದಾಧಿಕಾರಿಗಳು ಹಾಗೂ ವ್ಯಾಪಾರಸ್ಥರು ಭಾಗವಹಿಸಿದ್ದರು.

 

 

 

 

 

 

 

ಜಾಹೀರಾತು
error: Content is protected !!