December 15, 2025

Hampi times

Kannada News Portal from Vijayanagara

ಅಭಿವೃದ್ಧಿಗೆ ಸರ್ಕಾರ ಸೌಲಭ್ಯ ಒದಗಿಸಲಿ

https://youtu.be/NHc6OMSu0K4?si=SI_K4goOPEgwo6h2

 

ಹಂಪಿ ಟೈಮ್ಸ್ ಹಗರಿಬೊಮ್ಮನಹಳ್ಳಿ
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳನ್ನೊಳಗೊಂಡAತೆ ತಾಲೂಕು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು ಸರ್ಕಾರ ತಾಲೂಕಿನ ಅಭಿವೃದ್ಧಿಯತ್ತ ಗಮನಹರಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಸಿಪಿಎಂ ಪಕ್ಷದ ತಾಲೂಕು ಸಮಿತಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿತು.

ಸಿಪಿಎಂ ಪಕ್ಷದ ತಾಲೂಕು ಸಮಿತಿಕಾರ್ಯದರ್ಶಿ ಬಿ.ಮಾಳಮ್ಮ ಮಾತನಾಡಿ, ಹಗರಿಬೊಮ್ಮಹಳ್ಳಿ ತಾಲೂಕಿನ ಪಟ್ಟಣ ಮತ್ತು ಗ್ರಾಮೀಣ ಭಾಗದ ರಸ್ತೆಗಳು ಹಾಗೂ ಹರಿಹರ-ಹೊಸಪೇಟೆ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದ್ದು ಕೂಡಲೇ ದುರಸ್ತಿ ಕಾರ್ಯನಿರ್ವಹಿಸಬೇಕು. ತಾಲೂಕಿಗೆ ಸರ್ಕಾರಿ ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿAಗ್ ಕಾಲೇಜು ಸ್ಥಾಪಿಸಬೇಕು.

 

ತಾಲೂಕು ಬಹುತೇಕ ನೀರಾವರಿ ಸೌಲಭ್ಯದಿಂದ ವಂಚಿತಗೊAಡಿರುವುದರಿAದ ಬರಗಾಲ ಸಾಮಾನ್ಯವಾಗಿದೆ. ಕೂಡಲೇ ಭದ್ರಾ ಮೇಲ್ದಂಡೆ ಯೋಜನೆ ಮತ್ತು ತಾಲೂಕಿನಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿ ಮಾಡಬೇಕು. ಪಟ್ಟಣ ವ್ಯಾಪ್ತಿಯಲ್ಲಿರುವ ರೈಲ್ವೆ ಗೇಟ್ ೩೭, ೩೮ರ ಮೇಲ್ಸೇತುವೆ ಕಾಮಗಾರಿ ಕೂಡಲೇ ಪ್ರಾರಂಭಿಸಬೇಕು. ಹೊಸಪೇಟೆ-ಹರಿಹರ ಮಾರ್ಗದಲ್ಲಿ ರೈಲುಗಳ ಸೌಲಭ್ಯ ಹೆಚ್ಚಳಗೊಳಿಸಿ,

ಗದಗ-ಮುಂಡ್ರಗಿ-ಹಡಗಲಿ-ಹ.ಬೊ.ಹಳ್ಳಿ-ಕೂಡ್ಲಗಿ-ರಾಮದುರ್ಗ ಮಾರ್ಗವಾಗಿ ತುಮಕೂರಿನವರೆಗೆ ನೂತನ ರೈಲ್ವೆ ಮಾರ್ಗ ನಿರ್ಮಿಸುವ ಮೂಲಕ ರೈಲ್ವೆ ಸೌಕರ್ಯ ಕಲ್ಪಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ರೈಲ್ವೆ ಮಂತ್ರಿಗಳಿಗೆ ತಹಸಿಲ್ದಾರ್ ಮೂಲಕ ಮನವಿ ಪತ್ರ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಸಿಪಿಎಂ ಪಕ್ಷದ ಜಿಲ್ಲಾ ಮುಖಂಡರಾದ ಆರ್.ಎಸ್.ಬಸವರಾಜ, ಎಸ್.ಜಗನ್ನಾಥ. ತಾಲೂಕು ಮುಖಂಡರಾದ ಎಂ.ಆನAದ್, ಕೆ.ರಮೇಶ್, ಪಿ.ಚಾಂಬೀ, ತಟ್ನೆಮ್ಮ, ದುರುಗಮ್ಮ ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

 

 

 

 

 

 

 

ಜಾಹೀರಾತು
error: Content is protected !!