October 12, 2026

Hampi times

Kannada News Portal from Vijayanagara

 ಅಮ್ಮ ಮಗಳು : ಸುವರ್ಣಾ ಭಟ್ಟ

 ಅಮ್ಮ ಮಗಳು
ಉದ್ದನೆ ಕೂದಲು ಬೇಕಮ್ಮ
ಎರಡು ಜಡೆಯ ಕಟ್ಟಮ್ಮ
ಶಾಲೆಗೆ ತಡವಾಯಿತಮ್ಮ
ಬೇಗ ಬೇಗ  ಜಡೆ ಹೆಣೆಯಮ್ಮ
ಕೂದಲಿಗೆ ಹಚ್ಚುವೆ ಮೊದಲು ಎಣ್ಣೆ
ಕೈ ಕಟ್ಟಿ ಕುಳಿತುಕೊ ಸುಮ್ಮನೆ
ನಾಳೆಯಿಂದ ಬೇಗನೆ ಏಳಬೇಕು
ಬೇಗ ಬೇಗ ನೀನು ತಯಾರಾಗಬೇಕು
ದಿನವು ಇವರದ್ದು ಇದೆ ಮಾತು
ಕೇಳಿ ಕೇಳಿ ಸಾಕಾಯಿತು
ನನಗು ದೋಸೆಯು ಬರುವುದು  ತಡವಾಯಿತು
ಮನದಲೆ ನುಡಿಯುತ ಟಾಮಿಯು ಮಲಗಿತು
–  ಸುವರ್ಣಾ ಭಟ್ಟ.
Please follow and like us:

 

 

Translate »
[t4b-ticker]
error: Content is protected !!