https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್
ಹೊಸಪೇಟೆ: ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 25, 2022 ರಂದು ಮಧ್ಯಾಹ್ನ 2 ಗಂಟೆ 28 ನಿಮಿಷದಿಂದ ಸಂಜೆ 6 ಗಂಟೆ 38 ನಿಮಿಷದವರೆಗೆ ಸೂರ್ಯಗ್ರಹಣ ವಿರುವುದರಿಂದ ಅಂದು ನಿತ್ಯದ ಪೂಜಾ ಹಾಗೂ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.


ಸೂರ್ಯಗ್ರಹಣದ ನಿಮಿತ್ತ ಅಂದು ಬೆಳಿಗ್ಗೆ 6.30ಕ್ಕೆ ಬೆಳಗಿನ ಪೂಜೆ, ಬೆಳಿಗ್ಗೆ 9 ಗಂಟೆಗೆ ಮಧ್ಯಾಹ್ನದ ಪೂಜೆ ಮತ್ತು ಬೆಳಿಗ್ಗೆ 10.30 ರಿಂದ ಸಂಜೆಯ ಪೂಜೆ ನೆರವೇರಿಸಲಾಗುತ್ತದೆ. ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ. ಅಕ್ಟೋಬರ್ 26 ಬುಧವಾರ ಎಂದಿನಂತೆ ಪೂಜಾಕಾರ್ಯಗಳು, ದರ್ಶನ ಸಮಯ ಮುಂದುವರೆಯಲಿದೆ ಎಂದು ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆ, ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಮಹೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಇಂದು
ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ