https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್
ಹೊಸಪೇಟೆ: ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡಿದರೆ ಸಾಲದು ಅವುಗಳಿಗೆ ಬೇಕಾದ ಸೌಲಭ್ಯಗಳನ್ನು ಆಯಾ ಸರ್ಕಾರಗಳು ಮಾಡಬೇಕು, ಕನ್ನಡ ಭಾಷೆ ಇಂಗ್ಲೀಷ್ ಹಿಂದಿಗಿಂತ ಪುರಾತನ. ಇಡೀ ವಿಶ್ವದ ಜ್ಞಾನ ಕನ್ನಡದಲ್ಲಿದ್ದು ಅದನ್ನು ದೇಶದ ವಿವಿಧ ಭಾಷೆಗೆ ತಿಳಿಸುವಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಪ್ರಮುಖ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯಿಲಿ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯದಲ್ಲಿ ಉನ್ನತ ಶಿಕ್ಷಣದ ಕುರಿತು ಸಂಶೋಧನಾರ್ಥಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಭಾನುವಾರ ಉಧ್ಘಾಟಿಸಿ ಮಾತನಾಡಿದರು. ಕನ್ನಡ ವಿಶ್ವವಿದ್ಯಾಲಯ ನನ್ನ ಕನಸಿನ ಕೂಸು. ಇದು ಭವಿಷ್ಯದಲ್ಲಿ ವಿಶ್ವದ ವಿಶ್ವವಿದ್ಯಾಲಯವಾಗಿ ರೂಪಗೊಳ್ಳಬೇಕಿದ್ದು. ಜ್ಞಾನದ ಬಗ್ಗೆ ಅನ್ವೇಷಣೆ ಅಧ್ಯಯನದಲ್ಲಿ ಪ್ರಯೋಗಶೀಲ ಮನಸ್ಥಿತಿ ಹೊಂದಿದಲ್ಲಿ ಎಲ್ಲ ವರ್ಗದ ಮಕ್ಕಳು ಮಹಾನ್ ಸಾಧನೆ ಮಾಡುವ ಸಾಧ್ಯತೆ ಇದೆ ಎಂದರು.
ಸಂವಾದದಲ್ಲಿ ಸಂಶೋಧನಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ಹೊಸ ಶಿಕ್ಷಣ ನೀತಿ ಈ ಯುಗದ ಆಶಯಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದರು.


ವಿಜ್ಞಾನ ನಿಕಾಯದ ಡೀನ್ ಪ್ರೊ ಡಾ.ಮಾಧವ ಪೆರಾಜೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಡಾ. ವೀರಪ್ಪ ಮೊಯಿಲಿ ಅವರು ಕೇವಲ ರಾಜಕಾರಣಕ್ಕೆ ಸೀಮಿತಗೊಳ್ಳದೇ ವಿದ್ವಾಂಸರಾಗಿ, ಸಾಹಿತ್ಯಾಸಕ್ತರಾಗಿ ಜನಮನ್ನಣೆ ಗಳಿಸಿದ್ದು ಅವರ ಕ್ರೀಯಾಶೀಲತೆಯಿಂದ ಕನ್ನಡ ವಿಶ್ವವಿದ್ಯಾಲಯ ಈ ಮಟ್ಟದ ಅಭಿವೃದ್ದಿ ಹೊಂದಿದೆ ಎಂದರು.
ಅಕ್ಷರ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಡಾ. ಕೆ.ಎಂ. ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಗ್ರಂಥವಾಲಕರಾದ ಡಾ.ಎಂ.ಸಿ.ಗುಡಿಮನಿ ಸ್ವಾಗತಿಸಿದರು. ಸಹಾಯಕ ಗ್ರಂಥಪಾಲಕರಾದ ಶಂಕರಗೌಡ ಗುಂಡಕನಾಳ ನಿರೂಪಿಸಿದರು. ಗ್ರಂಥಾಲಯದ ಅಧಿಕ್ಷರಾದ ಗ್ಯಾನಪ್ಪ ಬಡಿಗೇರ ವಂದಿಸಿದರು. ವಿವಿಧ ನಿಕಾಯದ ಡೀನರು, ಅಧ್ಯಾಪಕರು, ಸಂಶೋಧನಾರ್ಥಿಗಳು ಇದ್ದರು.



More Stories
ಸೋಷಿಯಲ್ ಮೀಡಿಯಾ: ಕಣ್ಣಿಗೆ ಆಕರ್ಷಕ, ಮನಸ್ಸಿಗೆ ಮಾರಕ!
ಉದ್ಯಮಿ ಕೆ.ರವಿಶಂಕರ್ ಜನ್ಮದಿನದ ಸಾರ್ಥಕ ಸೇವೆ: ಆಸ್ಪತ್ರೆಯ ರೋಗಿಗಳಿಗೆ ಪೌಷ್ಟಿಕಾಹಾರ ವಿತರಣೆ
ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್, ಕೋಟ್ಯಂತರ ರೂಪಾಯಿ ರಾಜಸ್ವ ಸಂಗ್ರಹ : ಅಬಕಾರಿ ನಿರೀಕ್ಷಕಿ ಎಸ್.ಬಿ.ಮಮತಾ