October 14, 2026

Hampi times

Kannada News Portal from Vijayanagara

ವಿಜಯನಗರದ 11 ವುಶು ಕ್ರೀಡಾಪಟುಗಳು ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ

ಹೊಸಪೇಟೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯೋಜಿಸಿದ್ದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿಜಯನಗರ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದ್ದಾರೆ.

ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದ ಈ ಕೂಟದಲ್ಲಿ ವಿಜಯನಗರ ಜಿಲ್ಲೆಯ 27 ಕ್ರೀಡಾಪಟುಗಳು ಸ್ಪರ್ಧಿಸಿದ್ದರು. ಅವರಲ್ಲಿ 11 ಮಂದಿ ಪ್ರಥಮ ಸ್ಥಾನ ಪಡೆದು, ಮೈಸೂರಿನಲ್ಲಿ ಜರುಗಲಿರುವ ರಾಜ್ಯಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ರಾಜ್ಯಮಟ್ಟಕ್ಕೆ ಆಯ್ಕೆಯಾದ ಪುರುಷರ ವಿಭಾಗದಲ್ಲಿ ಅಖಿಲ್ ಎಸ್., ಅಜಿತ್ ಕುಮಾರ್, ಸಿ.ಆರ್. ವಿಜಯ್ ಕುಮಾರ್, ಎನ್. ಗಣೇಶ್, ಯೋಗಿ ಹಾಗೂ ರಂಜಿತ್ ಸ್ಥಾನ ಪಡೆದಿದ್ದಾರೆ.

ಮಹಿಳಾ ವಿಭಾಗದಲ್ಲಿ ಎಸ್. ಅಂಕಿತಾ, ತನಿಷಾ, ಫಾರಿಯಾ, ಮಂಜುಳಾ ಹಾಗೂ ಸುಹಾನಾ ಆಯ್ಕೆಯಾಗಿದ್ದಾರೆ.

ಉಳಿದ 15 ಕ್ರೀಡಾಪಟುಗಳು ಉತ್ತಮ ಪ್ರದರ್ಶನದೊಂದಿಗೆ ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಜಿಲ್ಲೆಯ ಕ್ರೀಡಾಪಟುಗಳ ಈ ಸಾಧನೆಗೆ ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ ಎಂದು ರಾಷ್ಟ್ರಮಟ್ಟದ ತೀರ್ಪುಗಾರರು, ತರಬೇತುದಾರ ಹಾಗೂ ವಿಜಯನಗರ ಜಿಲ್ಲಾ ಕುಂಗ್‌ಫು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

Please follow and like us:

 

 

Translate »
[t4b-ticker]
error: Content is protected !!