
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಮುಖ 25 ಪ್ರಶ್ನೋತ್ತರಗಳು (ಸೆಪ್ಟೆಂಬರ್ 28, 2026 – ವಿಶ್ವ ರೇಬೀಸ್ ದಿನ ವಿಶೇಷ)
-
ಪ್ರಶ್ನೆ: ಪ್ರತಿವರ್ಷ ಸೆಪ್ಟೆಂಬರ್ 28 ಅನ್ನು ಯಾವ ಪ್ರಮುಖ ಅಂತರರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ ಮತ್ತು ಇದರ ಮುಖ್ಯ ಉದ್ದೇಶವೇನು?
ಉತ್ತರ: ವಿಶ್ವ ರೇಬೀಸ್ ದಿನ (World Rabies Day); ರೇಬೀಸ್ ಕಾಯಿಲೆಯ ತಡೆಗಟ್ಟುವಿಕೆ ಮತ್ತು ಅದರ ಕುರಿತು ಜಾಗೃತಿ ಮೂಡಿಸಲು.
-
ಪ್ರಶ್ನೆ: 2026ನೇ ಸಾಲಿನ ವಿಶ್ವ ರೇಬೀಸ್ ದಿನದ (World Rabies Day 2026) ಅಧಿಕೃತ ಥೀಮ್ ಏನು?
ಉತ್ತರ: “Breaking Boundaries for Rabies Prevention”.
-
ಪ್ರಶ್ನೆ: ಭಾರತದಲ್ಲಿ ಇತ್ತೀಚೆಗೆ ನಡೆದ 18ನೇ ಬ್ರಿಕ್ಸ್ (BRICS) ಶೃಂಗಸಭೆಯಲ್ಲಿ ಭಾರತವು ತನ್ನದೇ ಆದ ಪ್ರತ್ಯೇಕ ಬಾಹ್ಯಾಕಾಶ ನಿಲ್ದಾಣವನ್ನು ಯಾವ ವರ್ಷದೊಳಗೆ ಸ್ಥಾಪಿಸುವುದಾಗಿ ಘೋಷಿಸಿತು?
ಉತ್ತರ: 2035ರೊಳಗೆ.
-
ಪ್ರಶ್ನೆ: ನವದೆಹಲಿಯ ಯಶೋಭೂಮಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಜಾಗತಿಕ ಶೃಂಗಸಭೆ ಯಾವುದು?
ಉತ್ತರ: ಸೆಮಿಮಕಾನ್ ಇಂಡಿಯಾ 2026 (SEMICON India 2026).
-
ಪ್ರಶ್ನೆ: ಧ್ವನಿ ಆಧಾರಿತ ಬ್ರೈಲ್ ಮುದ್ರಕವನ್ನು (Voice-enabled Braille Printer) ಆವಿಷ್ಕರಿಸಿ ಭಾರತದ ‘ಜೇಮ್ಸ್ ಡೈಸನ್ ಪ್ರಶಸ್ತಿ 2026’ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಯಾರು?
ಉತ್ತರ: ಹಿಮಜಾ ಲಿಂಗಂಪಲ್ಲಿ.
-
ಪ್ರಶ್ನೆ: ಭಾರತದಲ್ಲಿ ಕಾನೂನುಬದ್ಧ ಮತ್ತು ವಾಣಿಜ್ಯಕ ಸಮನಾದ ಕಾಲಮಾನದ ಉಲ್ಲೇಖಕ್ಕಾಗಿ ನ್ಯಾವಿಕ್ ಬೆಂಬಲದೊಂದಿಗೆ ಅಧಿಕೃತವಾಗಿ ಜಾರಿಗೆ ಬಂದ ವ್ಯವಸ್ಥೆ ಯಾವುದು?
ಉತ್ತರ: ಭಾರತೀಯ ಮಾನಕ ಸಮಯ (IST) ನಿಯಮಗಳು.
-
ಪ್ರಶ್ನೆ: ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR-IARI) CRISPR-Cas9 ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ದೇಶದ ಮೊದಲ ಜೀನೋಮ್-ಎಡಿಟೆಡ್ ಭತ್ತದ ತಳಿ ಯಾವುದು?
ಉತ್ತರ: ಪೂಸಾ ರೈಸ್ ಡಿಎಸ್‌ಟಿ1 (Pusa Rice DST1).
-
ಪ್ರಶ್ನೆ: ಭಾರತದ ಯಾವ ಬಾಹ್ಯಾಕಾಶ ವೀಕ್ಷಣಾಲಯವು ಬೃಹತ್ ಸೌರಜ್ವಾಲೆಗಳು (Solar Flares) ಸಂಭವಿಸುವ ಹಲವು ಗಂಟೆಗಳ ಮುಂಚೆಯೇ ವಾತಾವರಣದ ಪ್ರಕಾಶಮಾನ ಬದಲಾವಣೆಗಳನ್ನು ಪತ್ತೆ ಮಾಡಿದೆ?
ಉತ್ತರ: ಆದಿತ್ಯ-ಎಲ್1 (Aditya-L1).
-
ಪ್ರಶ್ನೆ: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಹಳೆಯ ಬಿಎಸ್-4 (BS-IV) ವಾಣಿಜ್ಯ ವಾಹನಗಳ ಬದಲಿಗೆ ಶುದ್ಧ ವಾಹನಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆ ಯಾವುದು?
ಉತ್ತರ: ಪರಿವರ್ತನ್ ಯೋಜನೆ (PARIVARTAN Scheme).
-
ಪ್ರಶ್ನೆ: ನವದೆಹಲಿಯಲ್ಲಿ ಜರುಗಿದ ‘ಗ್ಲೋಬಲ್ ಡ್ರೈಲ್ಯಾಂಡ್ ಕಾಂಗ್ರೆಸ್ 2026’ ಸಮ್ಮೇಳನದ ಅಂತಿಮ ದಿನದಂದು ಅಂಗೀಕರಿಸಲ್ಪಟ್ಟ ಪ್ರಮುಖ ಘೋಷಣೆ ಯಾವುದು?
ಉತ್ತರ: ಒಣಭೂಮಿಗಳಿಗಾಗಿ ದೆಹಲಿ ಘೋಷಣೆ (Delhi Declaration on Drylands – 3D).
-
ಪ್ರಶ್ನೆ: 16ನೇ ಸಂಸತ್ ರತ್ನ ಪ್ರಶಸ್ತಿ ಸಮಾರಂಭದಲ್ಲಿ ‘ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಜನ ಸೇವಾ ಪ್ರಶಸ್ತಿ 2026’ ಪಡೆದ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (NCSC) ಅಧ್ಯಕ್ಷರು ಯಾರು?
ಉತ್ತರ: ಕಿಶೋರ್ ಮಕ್‌ವಾನಾ (Kishor Makwana).
-
ಪ್ರಶ್ನೆ: ಭಾರತೀಯ ನೌಕಾಪಡೆ ಮತ್ತು ಮಲೇಷ್ಯಾ ನೌಕಾಪಡೆಯ ನಡುವೆ ಮಲೇಷ್ಯಾದ ಲುಮುಟ್‌ನಲ್ಲಿ ಜರುಗಿದ ದ್ವಿಪಕ್ಷೀಯ ಸಮುದ್ರಯಾನ ಅಭ್ಯಾಸದ ಹೆಸರೇನು?
ಉತ್ತರ: ಸಮುದ್ರ ಲಕ್ಷ್ಮಣ ವ್ಯಾಯಾಮ (Exercise Samudra Laksamana).
-
ಪ್ರಶ್ನೆ: ನೇಪಾಳ ಸ್ಥಳೀಯ ಚಲನಚಿತ್ರ ಉತ್ಸವಕ್ಕೆ (NIFF 2026) ಆಯ್ಕೆಯಾದ ಹಿಮಾಲಯನ್ ರಾಜ್ಯ ಸಿಕ್ಕಿಂಗೆ ಸೇರಿದ ಪ್ರಸಿದ್ಧ ಚಲನಚಿತ್ರ ಯಾವುದು?

ಉತ್ತರ: ‘ನುಹಂಗ್ಮಾ’ (Numahangma).
-
ಪ್ರಶ್ನೆ: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗಾಗಿ ನ್ಯಾಬಾರ್ಡ್ (NABARD) ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ ಜಂಟಿಯಾಗಿ ಬಿಡುಗಡೆ ಮಾಡಿದ ಹೊಸ ತಂತ್ರಜ್ಞಾನ ವೇದಿಕೆ ಯಾವುದು?
ಉತ್ತರ: RSVC-AMRIT ಪ್ಲಾಟ್‌ಫಾರ್ಮ್.
-
ಪ್ರಶ್ನೆ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಹಣಕಾಸು ನೀತಿಯ ಪ್ರಕಾರ ಪ್ರಸ್ತುತ ಚಿಲ್ಲರೆ ಹಣದುಬ್ಬರ ಪ್ರಮಾಣ ಎಷ್ಟಿದೆ?
ಉತ್ತರ: ಶೇ. 3.65.
-
ಪ್ರಶ್ನೆ: ನೀತಿ ಆಯೋಗದ ಮಹತ್ವಾಕ್ಷಾಂಕ್ಷೆಯ ಜಿಲ್ಲೆಗಳ (Aspirational Districts) ವರದಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದ ಜಿಲ್ಲೆ ಯಾವುದು?
ಉತ್ತರ: ರಾಯಪುರ (ಛತ್ತೀಸ್‌ಗಢ).
-
ಪ್ರಶ್ನೆ: ಭಾರತ ಮತ್ತು ಸಿಂಗಾಪುರ್ ದೇಶಗಳ ನಡುವೆ ಇತ್ತೀಚೆಗೆ ಯಾವ ಪ್ರಮುಖ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದ್ವಿಪಕ್ಷೀಯ ಒಪ್ಪಂದ ಏರ್ಪಟ್ಟಿದೆ?
ಉತ್ತರ: ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಆಡಳಿತ.
-
ಪ್ರಶ್ನೆ: ಕೇಂದ್ರ ಸರ್ಕಾರದ ನೂತನ ಜಲಸಂಪನ್ಮೂಲ ಮತ್ತು ಗಂಗಾ ಪುನರುಜ್ಜೀವನ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕಗೊಂಡವರು ಯಾರು?
ಉತ್ತರ: ವಿಕ್ರಮ್‌ದೀಪ್ ದತ್.
-
ಪ್ರಶ್ನೆ: ಪ್ರತಿವರ್ಷ ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉತ್ತರ: ಸೆಪ್ಟೆಂಬರ್ 8.
-
ಪ್ರಶ್ನೆ: ನಾಸಾದ (NASA) ವಾಯೇಜರ್ ಬಾಹ್ಯಾಕಾಶ ನೌಕೆಗಳ ಜೀವಿತಾವಧಿ ವಿಸ್ತರಿಸಲು ಅಳವಡಿಸಲಾದ ತಂತ್ರಜ್ಞಾನ ನವೀಕರಣಕ್ಕೆ ಆಂತರಿಕವಾಗಿ ಏನೆಂದು ಕರೆಯಲಾಗುತ್ತದೆ?
ಉತ್ತರ: ‘ಬಿಗ್ ಬ್ಯಾಂಗ್’ ಫಿಕ್ಸ್ (Big Bang Fix).
-
ಪ್ರಶ್ನೆ: ಕೇಂದ್ರ ಸರ್ಕಾರದ ಮಹತ್ವಾಕ್ಷಾಂಕ್ಷೆಯ ‘ಪಿಎಂ ವಿಶ್ವಕರ್ಮ ಯೋಜನೆ’ಯು ಪ್ರಸ್ತುತಕ್ಕೆ ಯಶಸ್ವಿಯಾಗಿ ಎಷ್ಟು ವರ್ಷಗಳನ್ನು ಪೂರೈಸಿದೆ?
ಉತ್ತರ: 3 ವರ್ಷಗಳು.
-
ಪ್ರಶ್ನೆ: ಜಾಗತಿಕ ಮಟ್ಟದಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತದ ಪ್ರಸ್ತುತ ಸ್ಥಾನವೇನು?
ಉತ್ತರ: ವಿಶ್ವದ ಎರಡನೇ ಅತಿ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರ.
-
ಪ್ರಶ್ನೆ: ಭಾರತೀಯ ಅಣುಶಕ್ತಿ ವಲಯದಲ್ಲಿ ಐತಿಹಾಸಿಕ ಮೈಲುಗಲ್ಲಾಗಿ 500 MWe ಪ್ರೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಎಲ್ಲಿ ಮೊದಲ ಸಕ್ರಿಯತೆಯನ್ನು ಸಾಧಿಸಿದೆ?
ಉತ್ತರ: ಕಲ್ಪಾಕಮ್.
-
ಪ್ರಶ್ನೆ: GE Aerospace ನಿಂದ ಭಾರತದಲ್ಲಿ ಮೊದಲ ಬಾರಿಗೆ S400 ಪ್ರಯೋಗಾಲಯ ಅನುಮೋದನೆ ಪಡೆದ ಸಾರ್ವಜನಿಕ ವಲಯದ ಕಂಪನಿ ಯಾವುದು?
ಉತ್ತರ: ಮಿಶ್ರಾ ಧಾತು ನಿಗಮ ಲಿಮಿಟೆಡ್ (MIDHANI).
-
ಪ್ರಶ್ನೆ: ಸಂಪೂರ್ಣವಾಗಿ ಇ-ಆಡಳಿತ (e-Governance) ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದ ಭಾರತದ ಮೊದಲ ರಾಜ್ಯ ಯಾವುದು?
ಉತ್ತರ: ಕೇರಳ.
ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿರುವ ಎಲ್ಲ ಓದುಗರಿಗೂ ಹಾರ್ದಿಕ ಶುಭಾಶಯಗಳು! ಮುಂಬರುವ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿ.


More Stories
ಸಿನಿಮಾಗಳ ಮೂಲಕ ಸಾಮಾಜಿಕ ವಾಸ್ತವಗಳ ಅನಾವರಣ: ಡಾ. ವೆಂಕಟಗಿರಿ ದಳವಾಯಿ
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಕ್ರೀಡೆಗಳು ಬಂದಿಗಳಲ್ಲಿ ಮಾನಸಿಕ ಉಲ್ಲಾಸ, ಸಕಾರಾತ್ಮಕ ಬದಲಾವಣೆ ತರಲು ಸಹಕಾರಿ: ಮಧುಸೂದನ್