https://youtu.be/NHc6OMSu0K4?si=SI_K4goOPEgwo6h2
ಸಿಬಿಎಸ್ಇ ಶಾಲೆಗಳ ಆಯ್ಕೆ: ಪೋಷಕರ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಮಾನ್ಯತೆ ಪಡೆದ ಸಿಬಿಎಸ್ಇ, ಐಸಿಎಸ್ಇ ಶಾಲೆಗಳ ಪಟ್ಟಿ ಪ್ರಕಟ: ಶಾಲಾ ಶಿಕ್ಷಣ ಇಲಾಖೆ ಸೂಚನೆ
ಹಂಪಿ ಟೈಮ್ಸ್ ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ 2026-27ನೇ ಸಾಲಿನಲ್ಲಿ ಸಿಬಿಎಸ್‌ಇ (CBSE) ಮತ್ತು ಐಸಿಎಸ್‌ಇ (ICSE) ಮಂಡಳಿಗಳ ಮಾನ್ಯತೆ ಪಡೆದು ಅಧಿಕೃತವಾಗಿ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳ ವಿವರವಾದ ಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ (ಆಡಳಿತ) ಕಚೇರಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಿದೆ.
ಮಾನ್ಯತೆ ಪಡೆದ ಸಿಬಿಎಸ್ಇ ಶಾಲೆಗಳು:
-
ಹಡಗಲಿ ತಾಲೂಕು: ಸಾಧನ ಇಂಗ್ಲಿಷ್ ಮೀಡಿಯಂ ಸ್ಕೂಲ್ (ಹೊಳಲು), ಜೆ.ಎಸ್.ಎಸ್. ಪಬ್ಲಿಕ್ ಸ್ಕೂಲ್ (ಹಡಗಲಿ), ಮೌಂಟ್ ಕಾರ್ಮೆಲ್ ಸ್ಕೂಲ್ (ಹಡಗಲಿ), ಗ್ಲೋಬಲ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ (ಹೊಳಗುಂದಿ).
-
ಹಗರಿಬೊಮ್ಮನಹಳ್ಳಿ ತಾಲೂಕು: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಶ್ರೀ ಎಂ.ವೈ. ಘೋರ್ಪಡೆ ಇಂಗ್ಲಿಷ್ ಮೀಡಿಯಂ ಹಿರಿಯ ಪ್ರಾಥಮಿಕ ಶಾಲೆ.

-
ಹರಪನಹಳ್ಳಿ ತಾಲೂಕು: ವಿದ್ಯಾನಿಧಿ ಅಕಾಡೆಮಿ, ಪರ್ಲ್ ಪಬ್ಲಿಕ್ ಸ್ಕೂಲ್.
-
ಹೊಸಪೇಟೆ ತಾಲೂಕು: ಆಕಾಶ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್, ಶ್ರೀ ಮಾರ್ಕಂಡೇಶ್ವರ ಇಂಗ್ಲಿಷ್ ಮೀಡಿಯಂ ಪ್ರೈಮರಿ ಅಂಡ್ ಹೈಸ್ಕೂಲ್, ಟಿ.ಎಂ.ಎ.ಇ. ಸೊಸೈಟಿ ಡಿ.ಎ.ವಿ. ಪಬ್ಲಿಕ್ ಸ್ಕೂಲ್, ಶ್ರೀಕರಿ ಪಬ್ಲಿಕ್ ಸ್ಕೂಲ್, ಲಿಟಲ್ ಫ್ಲವರ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ಸುರಭಿ ವಿದ್ಯಾನಿಕೇತನ, ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಸೇಂಟ್ ಜೋಸೆಫ್ ಇಂಗ್ಲಿಷ್ ಮೀಡಿಯಂ ಸ್ಕೂಲ್, ವಿಜ್ಞಾನ್ ಇ-ಟೆಕ್ನೋ ಸ್ಕೂಲ್.
-
ಕೂಡ್ಲಿಗಿ ತಾಲೂಕು: ವಿಸ್ಡಮ್ ವಿಂಗ್ಸ್ ಇಂಗ್ಲಿಷ್ ಮೀಡಿಯಂ ಸ್ಕೂಲ್ (ಕೊಟ್ಟೂರು), ಶ್ರೀ ಮಹಾದೇವ ಇಂಟರ್ನ್ಯಾಷನಲ್ ಸ್ಕೂಲ್ (ಕೂಡ್ಲಿಗಿ), ದೆಹಲಿ ವರ್ಲ್ಡ್ ಸ್ಕೂಲ್ (ಕೊಟ್ಟೂರು), ಜೆ.ಎನ್.ಎಂ. ಮೌಂಟೇನ್ ವ್ಯೂ ಸ್ಕೂಲ್ (ಕೂಡ್ಲಿಗಿ), ಇಂದು ಸ್ಕೂಲ್ (ಕೊಟ್ಟೂರು).
ಮಾನ್ಯತೆ ಪಡೆದ ಐಸಿಎಸ್ಇ ಶಾಲೆಗಳು:
-
ಹೆಚ್.ಎಸ್. ಶಾಂತಿನಿಕೇತನ ಪಬ್ಲಿಕ್ ಸ್ಕೂಲ್, ಡಾನ್ ಬೊಸ್ಕೊ ಸ್ಕೂಲ್, ಸಂಡೂರು ಗರ್ಲ್ಸ್ ರೆಸಿಡೆನ್ಶಿಯಲ್ ಸ್ಕೂಲ್.
ವಿಜಯನಗರ ಜಿಲ್ಲಾ ವ್ಯಾಪ್ತಿಯ ಒಟ್ಟು 25 ಶಾಲೆಗಳು ಮಾತ್ರ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮ ಬೋಧಿಸಲು ಅಧಿಕೃತ ಅನುಮೋದನೆ ಪಡೆದುಕೊಂಡಿವೆ. ಇವುಗಳನ್ನು ಹೊರತುಪಡಿಸಿ ಉಳಿದ ಶಾಲೆಗಳು ರಾಜ್ಯ ಪಠ್ಯಕ್ರಮವನ್ನು ಬೋಧಿಸುವ ಶಾಲೆಗಳಾಗಿರುತ್ತವೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳ ಪ್ರವೇಶಾತಿ ಸಮಯದಲ್ಲಿ ಈ ಅಂಶವನ್ನು ಕಡ್ಡಾಯವಾಗಿ ಗಮನಿಸಬೇಕು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು (BEO) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





More Stories
ಪೂತನಾಳ ವಿಷದ ಹಾಲಿಗೆ ಸೋತ ಮಮತೆ
ಯಶೋದೆಯ ಮಡಿಲಿನ ಬಾಲಕೃಷ್ಣ
ಕತ್ತಲೆಯ ಕಾರಾಗೃಹದಲ್ಲಿ ಹುಟ್ಟಿದ ಬೆಳಕು