https://youtu.be/NHc6OMSu0K4?si=SI_K4goOPEgwo6h2
ಹಂಪಿ ಟೈಮ್ಸ್ ಹೂವಿನಹಡಗಲಿ
ಕೃಷಿ ಜಮೀನುಗಳಲ್ಲಿ ತೂಗಾಡುತ್ತಿರುವ ಅಪಾಯಕಾರಿ ವಿದ್ಯುತ್ ತಂತಿಗಳನ್ನು ಸರಿಪಡಿಸದ ವಿದ್ಯುತ್ ಸರಬರಾಜು ಮಂಡಳಿಯ (ಜೆಸ್ಕಾಂ) ಘೋರ ನಿರ್ಲಕ್ಷ್ಯಕ್ಕೆ ಯುವ ರೈತನೊಬ್ಬ ಸೋಮವಾರ ದಾರುಣವಾಗಿ ಬಲಿಯಾಗಿದ್ದು, ಇಬ್ಬರು ಮುಗ್ಧ ಕಂದಮ್ಮಗಳ ಭವಿಷ್ಯವೇ ಕತ್ತಲಿಗೆ ತಳ್ಳಲ್ಪಟ್ಟಿದೆ.

ತಾಲೂಕಿನ ಹರವಿ ಗ್ರಾಮದ ನಂಜಪ್ಪ ಕಾಟಣ್ಣನವರ (29) ತಮ್ಮ ಹೊಲಕ್ಕೆ ನೀರು ಹಾಯಿಸಲು ಹೋದಾಗ, ಸಡಿಲಗೊಂಡು ಕಟ್ಟಿದ್ದ ಲೈವ್ ಸರ್ವಿಸ್ ವಿದ್ಯುತ್ ತಂತಿ ಮೈಮೇಲೆ ಬಿದ್ದು ಸ್ಥಳದಲ್ಲೇ ಪ್ರಾಣ ತೆತ್ತಿದ್ದಾರೆ. ಆರು ತಿಂಗಳು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳು ಹಾಗೂ ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ಸಡಿಲವಾಗಿರುವ ವಿದ್ಯುತ್ ಲೈನ್‌ಗಳ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದೇ ಈ ದುರಂತಕ್ಕೆ ನೇರ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರೇಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇವಲ ಸಾಂತ್ವನಕ್ಕೆ ಸೀಮಿತವಾಗದೆ, ಕಳಪೆ ನಿರ್ವಹಣೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಸಂಕಷ್ಟಕ್ಕೊಳಗಾದ ಬಡ ಕುಟುಂಬಕ್ಕೆ ಸರ್ಕಾರ ತಕ್ಷಣವೇ ಸೂಕ್ತ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಸಕ ಕೃಷ್ಣನಾಯ್ಕ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ನಿರ್ಲಕ್ಷ್ಯವಹಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು ಮತ್ತು ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳ ಜೊತೆ ಚರ್ಚಿಸಿ ಕುಟುಂಬಕ್ಕೆ ಅಗತ್ಯ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಢಿದರು.











More Stories
ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ: ಸಿಎಂ ಡಿ.ಕೆ.ಶಿವಕುಮಾರ್
ಕೂಡ್ಲಿಗಿಯಲ್ಲಿ ಖುದ್ದು ಅಹವಾಲು ಸ್ವೀಕರಿಸಿದ ಸಿಎಂ ಡಿ ಕೆ ಶಿವಕುಮಾರ್
ಕೂಡ್ಲಿಗಿ, ಕೊಟ್ಟೂರು ತಾಲೂಕುಗಳನ್ನು ‘ಬರಪೀಡಿತ’ ಎಂದು ಘೋಷಿಸಲು ಶಾಸಕ ಎನ್.ಟಿ.ಶ್ರೀನಿವಾಸ್ ಆಗ್ರಹ