
ಹಂಪಿ ಟೈಮ್ಸ್ ಹರಪನಹಳ್ಳಿ
ತಾಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಡಿ.೧೫ರಿಂದ ೧೮ರವರೆಗೆ ನಡೆಸಲಾಗುವುದು ಎಂದು ದೇವಸ್ಥಾನದ ಸಮಿತಿಯವರು ತಿಳಿಸಿದ್ದಾರೆ.
೧೫ರಂದು ಮಹಾಸ್ವಾಮಿಯ ಪೂಜೆ ಅಭಿಷೇಕ ಮತ್ತು ಭಕ್ತರಿಂದ ನೈವೇದ್ಯ ಸಮರ್ಪಣೆ ಪಂಪಾಪತಿ ದೇವಸ್ಥಾನದಲ್ಲಿ ನಡೆಸಲಾಗಿದೆ.
ಇದನ್ನೂ ಓದಿ: ನವಮಿಗೆ ಶಕ್ತಿ ದೇವತೆಗಳ ಸಮ್ಮಿಲನ ಧರ್ಮದ ಗುಡ್ಡದಲ್ಲಿ ದೇವರ ಬನ್ನಿ ಅದ್ಧೂರಿ

೧೬ ರಂದು ಮಹೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಐತಿಹಾಸಿಕ ಪ್ರಸಿದ್ಧ ಪಂಪಾಪತಿ ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಾಗಿ ಜಾತ್ರೆ ನಡೆಯುವ ಸ್ಥಳ ಗದ್ದಿಗೆ ಮಂಟಪ ತಲುಪುತ್ತಾದೆ. ೧೬ ಮತ್ತು ೧೭ರಂದು ಎರಡು ದಿನ ಪ್ರಸಾದ ವಿನಿಯೋಗ ನಡೆಸಲಾಗುವುದು.
ಡಿಸೆಂಬರ್ ೧೬ ರಂದು ಸಂಜೆ ಕಾಳಿಕಾದೇವಿ ಮತ್ತು ದುರ್ಗಾಂಬಿಕ ದೇವತೆಗಳ ಕಾರ್ತಿಕೋತ್ಸವ ನಡೆಯುತ್ತದೆ. ೧೭ರಂದು ಸಂಜೆ ಪಟಾಕ್ಷಿ ಹರಾಜು, ೧೮ರಂದು ಬೆಳಗಿನ ಜಾವ ಮಹಾಸ್ವಾಮಿಯ ಪಲ್ಲಕ್ಕಿ ಉತ್ಸವದ ಮೂಲಕ ಪಂಪಾಪತಿ ದೇವಸ್ಥಾನಕ್ಕೆ ಆಗಮಿಸುತ್ತದೆ. ಸರ್ವ ಮಕ್ಕಳಿಗೆ ಪ್ರಸಾದ ವಿನಿಯೋಗ ನಡೆಸಲಾಗುವುದು ಎಂದು ತಿಳಿ¬¬ಸಿದರು.


More Stories
ರಾಜ್ಯ ಮಟ್ಟದ ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಹೊಸಪೇಟೆಯ ಪಿ.ಎಂ. ಶ್ರೀವರ್ಧನ್ ರೆಡ್ಡಿಗೆ ಪ್ರಥಮ ಸ್ಥಾನ
ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ಶಕ್ತಿಯ ಕೇಂದ್ರ: ಕೊಪ್ಪಳ ಗವಿಶ್ರೀಗಳು
ಕೆಲಸದವಳು “ಅಮ್ಮಾ ನಾಳೆ ಬರಲ್ಲ”: ಒಂದೇ ಮಾತಿಗೆ ತಲೆಕೆಳಗಾಯ್ತು ಇಡೀ ಸಂಸಾರ! : ನಂದಿನಿ ಸನಬಾಳ