https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹರಪನಹಳ್ಳಿ
ಡಿಸೆಂಬರ್ 23 ರಂದು ನಡೆಯಲಿರುವ ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ, ತಾಲ್ಲೂಕು ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಸೋಮವಾರ (ಡಿ. 15) ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ (ಇಒ) ಚಂದ್ರಶೇಖರ ವೈ.ಎಚ್. ಅವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದನ್ನೂ ಓದಿ: ಪೊಲೀಸ ಸಿಬ್ಬಂದಿಯ ಭರ್ಜರಿ ಪ್ರದರ್ಶನ : ಗಮನ ಸೆಳೆದ ಕ್ರೀಡಾಕೂಟ
ಕ್ರೀಡಾ ಸ್ಪರ್ಧೆಗಳ ಪೈಕಿ ದೈಹಿಕ ವಿಕಲಚೇತನರಿಗೆ ಊರು ಗೋಲು ಓಟ, ಗುಂಡು ಎಸೆತ, ವಿಲ್ ಚೇರ್ ಓಟ, ದೃಷ್ಟಿ ದೋಷವುಳ್ಳವರಿಗೆ ಬಿಳಿ ಕೋಲು ಓಟ, ಗುಂಡು ಎಸೆತ
ಶ್ರವಣ ದೋಷವುಳ್ಳವರಿಗೆ ರನ್ನಿಂಗ್ ರೇಸ್, ರಿಂಗ್ ಎಸೆತ, ಕ್ರಿಕೇಟ್, ಗುಂಡು ಎಸೆತ, ಬೌದ್ಧಿಕ ವಿಕಲಚೇತನರಿಗೆ ಚೆಂಡು ಎಸೆತ ಮ್ಯೂಸಿಕಲ್ ಚೇರ್ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಸಾಂಸ್ಕೃತಿಕ ಸ್ಪರ್ಧೆಗಳ ಪೈಕಿ ದೈಹಿಕ ವಿಕಲಚೇತನರಿಗೆ ಭಾವಗೀತೆ , ಜಾನಪದ ಗೀತೆ, ದೃಷ್ಟಿ ದೋಷವುಳ್ಳವರಿಗೆ ಭಾವಗೀತೆ ಜಾನ ಪದ ಗೀತೆ ಶ್ರವಣ ದೋಷವುಳ್ಳವರಿಗೆ ಚಿತ್ರ ಕಲೆ ಸ್ಪರ್ಧೆ, ಬೌದ್ಧಿಕ ವಿಕಲಚೇತನರಿಗೆ ಫ್ಯಾನ್ಸಿ ಡ್ರೆಸ್ ವೇಷ ಭೂಷಣ ಸ್ಪರ್ದೆ , ಗುಂಪು ಕ್ರೀಡೆಗಳ ಪೈಕಿ ಸಿಟ್ಟಿಂಗ್ ಕಬ್ಬಡಿ ಸ್ಪರ್ಧೆ ಆಯೋಜಿಸಲಾಗಿತ್ತು.
ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ತಾಲೂಕು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರಿಗೆ ಸೇವೆ ಸಲ್ಲಿಸುತ್ತಿರುವ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ತಾಲ್ಲೂಕಿನಲ್ಲಿರುವ ಆಸಕ್ತ ವಿಕಲಚೇತನರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ವಿ.ಗೀರೀಶ್ ಬಾಬು, ಲೇಪಾಕ್ಷಪ್ಪ ಶಿಕ್ಷಣ ಇಲಾಖೆ, ಟಿ.ಎಚ್.ಒ ಪೃಥ್ವಿ, ಷಣ್ಮುಖಪ್ಪ, ಜಿ.ಟಿ.ಅಶೋಕ, ಪಾಟ್ನಮಾದ್ ನಾಗರಾಜ್, ರೇಣುಕಾ ಜೂಟ್ಲೆ, ಡಾ. ಸೂರ್ಯನಾಥ, ರುದ್ರಚಾರಿ ಬಿ, ತ್ಯಾಗರಾಜ್ ಜಿ.ಪಿ, ಆರ್ ಧನರಾಜ್ ಎಂ.ಆರ್.ಡಬ್ಲೂö್ಯ, ಪೊನ್ನ ನಾಯ್ಕ್, ದುರುಗೇಶ್, ಎಂ.ಡಿ. ಮನ್ಸೂರ್, ಪ್ರತಿ ಗ್ರಾಮ ಪಂ. ವಿ.ಆರ್.ಡಬ್ಲೂö್ಯ ಸಿಬ್ಬಂಧಿ ವರ್ಗದವರು, ಯು,ಆರ್, ಡಬ್ಲೂö್ಯ ಹಾಗೂ ವಿಕಲಚೇತನರು ಭಾಗವಹಿಸಿದ್ದರು.





More Stories
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ
ಮೂರು ದಿನ ಸಾಂಸ್ಕೃತಿಕ ಹಬ್ಬಕ್ಕೆ ಸಜ್ಜಾದ ವಿಜಯನಗರ ಸಾಮ್ರಾಜ್ಯ
ಒನಕೆ ಓಬವ್ವ.. ಅಸಾಮಾನ್ಯ ಸಾಹಸಿ ಮಹಿಳೆ