https://youtu.be/NHc6OMSu0K4?si=SI_K4goOPEgwo6h2
- ವಿಮಾ ಹಣಕ್ಕಾಗಿ ಅನಾರೋಗ್ಯ ಪೀಡಿತ ಗಂಗಾಧರ.ಕೆ ಕೊಲೆ.
- ಕೊಲೆಯನ್ನು ರಸ್ತೆ ಅಪಘಾತವೆಂದು ಬಿಂಬಿಸಲು ಸಂಚು.
- ತನಿಖಾ ತಂಡದಿಂದ 24 ಗಂಟೆಯೊಳಗೆ ಆರೋಪಿಗಳ ಬಂಧನ.
ಹಂಪಿ ಟೈಮ್ಸ್ ಹೊಸಪೇಟೆ:
ಕೋಟ್ಯಂತರ ರೂಪಾಯಿಗಳ ವಿಮಾ ಹಣ ಪಡೆಯುವ ದುರಾಸೆಯಿಂದ, ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಅದನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಯತ್ನಿಸಿದ ಆರು ಜನರ ತಂಡವನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸರು 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕರಾದ ಎಸ್.ಜಾಹ್ನವಿ ತಿಳಿಸಿದರು.
ನಗರದ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸೆಪ್ಟೆಂಬರ್ 28, 2025 ರಂದು ಸಂಜೆ 6-00 ಗಂಟೆಗೆ ಕೌಲ್‌ಪೇಟೆಯ ಗಂಗಾಧರ. ಕೆ ಅವರು ಎಚ್.ಎಲ್.ಸಿ ಕಾಲುವೆ ರಸ್ತೆಯಲ್ಲಿ ಅಪಘಾತದಿಂದ ಮೃತಪಟ್ಟಿದ್ದರು. ಮೃತರ ಪತ್ನಿ ಕೆ. ಶಾರದಮ್ಮ ಅವರು ತನ್ನ ಗಂಡನಿಗೆ ಬೈಕ್ ಓಡಿಸಲು ಬರುವುದಿಲ್ಲ. ಆದ್ದರಿಂದ ತನ್ನ ಗಂಡನ ಸಾವಿನ ಬಗ್ಗೆ ಅನುಮಾನವಿದೆ ಎಂದು ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ವಿಶೇಷ ತಂಡ ರಚನೆ ಮತ್ತು ತನಿಖೆ:
ಪ್ರಕರಣದ ಗಂಭೀರತೆ ಅರಿತ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ, ಐ.ಪಿ.ಎಸ್., ಅವರು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್ ಮತ್ತು ಡಿ.ಎಸ್.ಪಿ. ಡಾ. ಟಿ. ಮಂಜುನಾಥ್ ಅವರೊಂದಿಗೆ ಚರ್ಚಿಸಿ, ಪ್ರಕರಣದ ತನಿಖೆಗಾಗಿ ಮೂರು ವಿಶೇಷ ತಂಡಗಳನ್ನು ರಚಿಸಿ ಆದೇಶ ನೀಡಿದರು.
ಕೃತ್ಯದ ಹಿನ್ನೆಲೆ ಮತ್ತು ಒಳಸಂಚು:
ತನಿಖೆ ವೇಳೆ ಈ ಪ್ರಕರಣದ ಹಿಂದೆ ಆರು ಮಂದಿ ಆರೋಪಿಗಳ ಸುದೀರ್ಘ ಒಳಸಂಚು ಇರುವುದು ಬಯಲಾಗಿದೆ. ಹೊಸಪೇಟೆಯ ನಿವಾಸಿಯಾಗಿದ್ದ ಗಂಗಾಧರ. ಕೆ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಆರ್ಥಿಕವಾಗಿ ದುರ್ಬಲರಾಗಿದ್ದರು. ಈ ಪರಿಸ್ಥಿತಿಯ ದುರ್ಲಾಭ ಪಡೆದ ಆರೋಪಿಗಳು, ಅವರಿಗೆ ಈಗಾಗಲೇ ಮದುವೆಯಾಗಿದ್ದರೂ ಸಹ, ಮತ್ತೊಬ್ಬ ಮಹಿಳೆಯೊಂದಿಗೆ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮದುವೆ ಮಾಡಿಸಿ, ನಕಲಿ ನಾಮಿನಿಯನ್ನು ಸೃಷ್ಟಿಸಿದ್ದರು.
ನಂತರ ಮೃತ ಗಂಗಾಧರ ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು, ಪಾನ್ ಕಾರ್ಡ್ ಮಾಡಿಸಿ, ಆದಾಯ ತೆರಿಗೆ ಕಟ್ಟಿ, ವಿವಿಧ ವಿಮಾ ಕಂಪನಿಗಳಿAದ ಒಟ್ಟು ರೂ. 5 ಕೋಟಿ 25 ಲಕ್ಷ ಮೌಲ್ಯದ ಆರು ಅಪಘಾತ ಮತ್ತು ಇತರೆ ವಿಮಾ ಪಾಲಿಸಿಗಳನ್ನು ಮಾಡಿಸಿದ್ದರು. ಇವುಗಳ ಪ್ರೀಮಿಯಂ ಹಣವನ್ನು ಆರೋಪಿಗಳೇ ತುಂಬಿ, ನಕಲಿ ನಾಮಿನಿಯನ್ನು ವಿಮೆಗೆ ಸೇರಿಸಿದ್ದರು. ಬ್ಯಾಂಕ್ ಖಾತೆಯನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊAಡಿದ್ದರು. ಗಂಗಾಧರ ಅವರು ಅನಾರೋಗ್ಯದಿಂದ ಬೇಗ ಮೃತಪಡದ ಕಾರಣ ಮತ್ತು ಕೆಲವು ವಿಮೆಗಳು ತಿರಸ್ಕೃತಗೊಂಡ ಕಾರಣ, ಅಪಘಾತದ ವಿಮೆಗಳನ್ನು ಕ್ಲೇಮ್ ಮಾಡಿದರೆ ಬೇಗ ಹಣ ಪಡೆಯಬಹುದು ಎಂಬ ದುರಾಲೋಚನೆಯಿಂದ, ಕೊಲೆಗೆ ಸಂಚು ರೂಪಿಸಿದ್ದರು.ಕೊಲೆಯ ಹಿಂದಿನ ದಿನ, ಗಂಗಾಧರ ಅವರ ಹೆಸರಿನಲ್ಲಿ ಸೆಕೆಂಡ್ ಹ್ಯಾಂಡ್ ಟಿ.ವಿ.ಎಸ್ ಎಕ್ಸ್-ಎಲ್ ಬೈಕ್ ಖರೀದಿಸಿ, ಅದೇ ದಿನ ವಿಮೆಯನ್ನೂ ಮಾಡಿಸಿ, ಕೊಲೆ ಮಾಡಿ ಅದನ್ನು ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದರು.
ಆರೋಪಿಗಳ ಬಂಧನ ಮತ್ತು ವಶಪಡಿಸಿಕೊಳ್ಳುವಿಕೆ:
ಪ್ರಕರಣದ ತನಿಖೆ ಕೈಗೊಂಡ ಅಧಿಕಾರಿಗಳು ಕೇವಲ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಬಂಧಿತರಿAದ ಕೃತ್ಯಕ್ಕೆ ಸಂಬAಧಿಸಿದ ವಾಹನಗಳು, ಹಣ, ಮೊಬೈಲ್‌ಗಳು ಹಾಗೂ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆ ತಂಡದ ಶ್ಲಾಘನೆ:
ವಿಜಯನಗರ ಪೊಲೀಸ್ ಅಧೀಕ್ಷಕರಾದ ಜಾಹ್ನವಿ, ಐ.ಪಿ.ಎಸ್., ಹೆಚ್ಚುವರಿ ಎಸ್.ಪಿ. ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ. ಡಾ. ಟಿ. ಮಂಜುನಾಥ್ ಅವರ ನೇತೃತ್ವದಲ್ಲಿ, ಪಿ.ಐ.ಗಳಾದ ಲಖನ್.ಆರ್.ಮಸಗುಪ್ಪಿ (ಪಟ್ಟಣ ಠಾಣೆ), ಡಿ. ಹುಲುಗಪ್ಪ (ಸಂಚಾರ ಠಾಣೆ), ಪಿ.ಎಸ್.ಐ. ಎಸ್.ಪಿ. ನಾಯ್ಕ (ಪಟ್ಟಣ ಠಾಣೆ), ಎ.ಎಸ್.ಐ.ಗಳಾದ ಕೋರಿ ಕೃಷ್ಣಪ್ಪ, ಕೀಮ್ಯಾನಾಯ್, ದೊಡ್ಡ ಈರಣ್ಣ, ಹೆಚ್.ಸಿ.ಗಳು ಹಾಗೂ ಪಿ.ಸಿ.ಗಳನ್ನೊಳಗೊಂಡ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ತಂಡದ ಕಾರ್ಯವನ್ನು ಎಸ್.ಪಿ. ಜಾಹ್ನವಿ ಅವರು ಶ್ಲಾಘಿಸಿದ್ದು, ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
More Stories
ಜಗದ್ಗುರು ಬಸವಲಿಂಗ ಶ್ರೀಗಳಿಗೆ 32ನೇ ವರ್ಷದ ಜನ್ಮದಿನೋತ್ಸವದ ಸಂಭ್ರಮ
ಯುದ್ಧಭೂಮಿಯಲ್ಲಿಯೇ ನಿಪುಣ ಆಡಳಿತಗಾರ ಅಳಿಯ ರಾಮರಾಯನ ಶಿರಚ್ಛೇದನ
ಸಮೀಕ್ಷೆಯು ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗಲಿದ್ದು, ಸಮೀಕ್ಷೆಯನ್ನು ಮುಂದೂಡುವುದಿಲ್ಲ : ಸಿಎಂ ಸಿದ್ದರಾಮಯ್ಯ