https://youtu.be/NHc6OMSu0K4?si=SI_K4goOPEgwo6h2

ಜ.26 ರಂದು ಸಾಧಕರಿಗೆ ಸನ್ಮಾನ, ಸ್ವಾವಲಂಬಿ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣೆ
ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರಸಿಂಗ್ ಹೇಳಿಕೆ | ಶೀಘ್ರದಲ್ಲೆ 3000 ಮಹಿಳೆಯರಿಗೆ ಸಂಘದಿಂದ ಉದ್ಯೋಗ ಮೇಳ
ಹಂಪಿ ಟೈಮ್ಸ್ ಹೊಸಪೇಟೆ
ತಾಯಮ್ಮ ಶಕ್ತಿ ಸಂಘದ ದಶಮಾನೋತ್ಸವದಂಗವಾಗಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜ.26 ರಂದು ಸಂಜೆ.5ಕ್ಕೆ 10 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ತಲಾ ಇಬ್ಬರನ್ನು ಗುರುತಿಸಿ ಸನ್ಮಾನ, ಟೈಲರಿಂಗ್ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿ ಪಡೆದು ಸ್ವಾವಲಂಬಿ ಬದುಕು ರೂಪಿಸಿಕೊಂಡ ಮಹಿಳೆಯರಿಗೆ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಶೀಘ್ರದಲ್ಲೇ 3000 ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಡುವ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುವುದು ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಮಹಿಳೆಯರು ಸೇರಿದಂತೆ ಯುವಕರಿಗೆ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸಂಸ್ಥೆ ಹಲವು ಯೋಜನೆಗಳನ್ನು ರೂಪಿಸುತ್ತಿದೆ. 1000 ಸದಸ್ಯರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ. ಗ್ರಾಮೀಣ ಹಾಗೂ ನಗರದ ವಾರ್ಡ್‌ಗಳಲ್ಲಿ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಶಿಕ್ಷಣ, ತರಬೇತಿ ನೀಡುತ್ತಾ ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತಾರಗೊಳಿಸುವ ನಿಟ್ಟಿನಿಂದ ತಾಯಮ್ಮ ಶಕ್ತಿ ಸಂಘ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಈಗಾಗಲೇ ಸರ್ಕಾರ ಸಹಯೋಗದಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ, ಫ್ಯಾಶನ್ ಡಿಸೈನಿಂಗ್ ಕಲಿಸಲಾಗುತ್ತಿದೆ. ಮಹಿಳಾ ಸಬಲೀಕರಣಗೊಸ್ಕರ ಅಗರ ಬತ್ತಿ ತಯಾರಿಸುವ ಘಟಕ ಸ್ಥಾಪಿಸಲಾಗುವುದು. ಪುನೀತ್ ರಾಜಕುಮಾರ ಹೆಸರಲ್ಲಿ ಆಯ್ದ ಗ್ರಾಮೀಣ ಭಾಗದ ಮಕ್ಕಳಿಗೆ ಫ್ರೀ ಟ್ಯೂಷನ್ ಹಮ್ಮಿಕೊಳ್ಳಲಾಗುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸೌಲಭ್ಯ ಪಡೆದುಕೊಳ್ಳಲು ಮಹಿಳೆಯರಿಗೆ ಅಗತ್ಯ ಅರಿವು, ನೆರವು ನೀಡಲಾಗುತ್ತದೆ. 15 ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲೆ ಹೆಚ್ಚು ಖುಷಿ ನೀಡುತ್ತಿರುವುದರಿಂದ ಸಂಸ್ಥೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಾಗುತ್ತಿದೆ ಎಂದರು.

ಕಾರ್ಯಕ್ರಮಕ್ಕೆ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಎಸ್ಪಿ ಶ್ರೀಹರಿಬಾಬು ಬಿ.ಎಲ್., ನಗರಸಭೆ ಅಧ್ಯಕ್ಷೆ ಲತಾ, ಸಮಾಜ ಸೇವಕ ಸಿದ್ದಾರ್ಥಸಿಂಗ್, ಮುಖಂಡರಾದ ಎಚ್.ಎನ್.ಎಫ್.ಇಮಾಮ್ ನಿಯಾಜಿ, ತಾರಿಹಳ್ಳಿ ಹನುಮಂತಪ್ಪ, ಭಾರತ್ ವಿಕಾಸ ಪರಿಷತ್ ನ ರೇವಣಸಿದ್ದಪ್ಪ, ರಾಮಕೃಷ್ಣ ನಿಂಬಗಲ್, ಭಾಗ್ಯಲಕ್ಷ್ಮಿ ಭರಾಡೆ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
ಸಂಘದ ಕಾರ್ಯದರ್ಶಿ ಎಸ್.ರಾಘವೇಂದ್ರ ಮಾತನಾಡಿ, ಸಂಘದ ದಶಮಾನೋತ್ಸವ ಮತ್ತು ಕವಿತಾ ಈಶ್ವರಸಿಂಗ್ ಅವರ ಜನ್ಮದಿನದ ನಿಮಿತ್ತ ತಾಯಮ್ಮ ಶಕ್ತಿ ಸಂಘದ ಅಭಿಮಾನಿಗಳು ರಕ್ತದಾನ ಶಿಬಿರ, ಅಂಧ ಮಕ್ಕಳಿಗೆ ನೀರಿನ ಟ್ಯಾಂಕ್ ವಿತರಣೆ, ಪುಸ್ತಕ, ಸಮವಸ್ತ್ರ ವಿತರಣೆ ಸೇರಿದಂತೆ ವಿವಿದೆಡೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.
ಸಂಘದ ಲಲಿತಾ ನಾಯಕ, ರಾಜು ಗುಜ್ಜಲ, ಹನುಮಂತ, ರಘುನಾಯ್ಕ, ರಾಘವೇಂದ್ರ ಕೆ ಇತರರ ಇದ್ದರು.



More Stories
ಬಿಡಿಸಿಸಿ ಬ್ಯಾಂಕ್ಗೆ 106ನೇ ಸಂಸ್ಥಾಪನಾ ದಿನಾಚರಣೆ ಸಂಭ್ರಮ
ಸಿರಿ ಧಾನ್ಯ ಬೆಳೆಗೆ ಹೆಚ್ಚಿನ ಆದ್ಯತೆ ನೀಡಿ: ಡಾ. ಸುರೇಶ ಇಟ್ನಾಳ
ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??