https://youtu.be/NHc6OMSu0K4?si=SI_K4goOPEgwo6h2

ಹಂಪಿ ಟೈಮ್ಸ್ ಹರಪನಹಳ್ಳಿ
ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಭಗಟ್ಟ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾತ್ರಿ ಸಮಯದಲ್ಲಿ ನಡೆದ ವಿವಿಧ ವಸ್ತುಗಳ ಕಳ್ಳತನ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ತಾಲೂಕಿನ ಪುಣಭಗಟ್ಟ ಗ್ರಾಮದಲ್ಲಿ ನವೆಂಬರ್ 25ರಂದು ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ 2 ಸಿಸಿ ಕ್ಯಾಮೆರಾಗಳು, 2 ಸೀಲಿಂಗ್ ಫ್ಯಾನ್‌ಗಳು, 20 ಟ್ಯೂಬ್ ಲೈಟ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ವಸ್ತುಗಳು ಕಳ್ಳತನವಾಗಿದ್ದವು.
ಇದನ್ನೂ ಓದಿ: ಪೊಲೀಸರ ಬದುಕಿನ ಬಹುಪಾಲು ಸಮಯ ನಮ್ಮೆಲ್ಲರ ಒಳಿತಿಗಾಗಿ ಮೀಸಲು : ವೀಣಾ ಹೇಮಂತ್‌ಗೌಡ ಪಾಟೀಲ್
ಈ ಬಗ್ಗೆ ಪುಣಭಗಟ್ಟ ಗ್ರಾಮದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಗಿರಿಯಪ್ಪ ಬಸವರಾಜ ಅವರು ಡಿಸೆಂಬರ್ 9ರಂದು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡರು.
ಈ ಪ್ರಕರಣಕ್ಕೆ ಸಂಬAಧಿಸಿದAತೆ ಕಳ್ಳರು ಮತ್ತು ಕಳುವಾದ ಮಾಲನ್ನು ಪತ್ತೆ ಮಾಡಲು ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎಸ್. ಜಾಹ್ನವಿ, ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ಮಂಜುನಾಥ ಜಿ, ಹರಪನಹಳ್ಳಿ ಉಪ ವಿಭಾಗದ ಪ್ರಭಾರ ಪೊಲೀಸ್ ಉಪಾಧೀಕ್ಷಕರಾದ ಡಾ. ಸಂತೋಷ ಚವ್ಹಾಣ ಮತ್ತು ವೃತ್ತ ನಿರೀಕ್ಷಕ ಮಹಾಂತೇಶ್ ಜಿ. ಸಜ್ಜನ್ ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ಇದನ್ನೂ ಓದಿ: ಹಗಲೊತ್ತಿನಲ್ಲೆ ಹೆಚ್ಚಿದ ಕಳ್ಳತನ, ಭದ್ರತೆಗೆ ಸಾರ್ವಜನಿಕರ ಆಗ್ರಹ
ಅರಸೀಕೆರೆ ಪೊಲೀಸ್ ಠಾಣೆಯ ಪಿಎಸ್‌ಐ ವಿಜಯಕೃಷ್ಣ, ಸಿಬ್ಬಂದಿಗಳಾದ ಎಎಸ್‌ಐ ಪೀಕ್ಯಾ ನಾಯ್ಕ್, ಹರೀಶ್ ದೇವರಹಟ್ಟಿ, ಕೆ. ಗುರುರಾಜ್, ಗರ್ಯಾನಾಯ್ಕ್, ಚಂದ್ರಶೇಖರ ಮತ್ತು ಮತ್ತಿಹಳ್ಳಿ ಕೊಟ್ರೇಶ್ ಅವರನ್ನೊಳಗೊಂಡ ತಂಡವು ಪ್ರಕರಣ ದಾಖಲಿಸಿಕೊಂಡ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿ: ದಾವಣಗೆರೆ ತಾಲೂಕಿನ ಕಾಟಿಹಳ್ಳಿ ಗ್ರಾಮದ ನಿವಾಸಿ ಅಭಿ ತಂದೆ ನಾಗಪ್ಪ. ಕೂಲಿ ಕೆಲಸ ಮಾಡುತ್ತಿದ್ದ ಈ ಆರೋಪಿಯಿಂದ ಕಳ್ಳತನ ಮಾಡಿದ 2 ಸಿಸಿ ಕ್ಯಾಮೆರಾ, ಮಾನಿಟರ್, ಕನ್ಸಿಸ್ಟಂಟ್, 8 ಚಾನೆಲ್ ಎಸ್.ಎಂ.ಪಿ.ಎಸ್., ಹೆಚ್.ಡಿ.ಎಂ.ಐ. ಕೇಬಲ್, ಡಿವಿಆರ್ ಅಡಾಪ್ಟರ್, 2 ಸೀಲಿಂಗ್ ಫ್ಯಾನ್‌ಗಳು, 10 ಟ್ಯೂಬ್ ಲೈಟ್‌ಗಳು ಮತ್ತು 1 ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ. 1,01,486 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಿ ಕಳ್ಳತನವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡ ತಂಡದ ಕಾರ್ಯಕ್ಕೆ ವಿಜಯನಗರ ಜಿಲ್ಲಾ ಅಧೀಕ್ಷಕರಾದ ಎಸ್. ಜಾಹ್ನವಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.





More Stories
ಹೊಸಪೇಟೆಯಲ್ಲಿ ಫೆ. ೨೭ಕ್ಕೆ ‘ಸರ್ವಧರ್ಮ ಸಮನ್ವಯ’ ಮಹಾರಥೋತ್ಸವದ ವೈಭವ!
ಸಾಹಿತ್ಯ, ವೈಚಾರಿಕತೆ ಹಾಗೂ ಆಡಳಿತದ ತ್ರಿವೇಣಿ ಸಂಗಮಕ್ಕೆ ‘ನಾಡೋಜ’ ಗೌರವ
ಯುವ ಕವಿಗಳು ಜನಸಾಮಾನ್ಯರ ಬದುಕು-ಬವಣೆಗಳಿಗೆ ಧ್ವನಿಯಾಗಿ